Lahari Pathivada: ಅಮೆರಿಕಾದಲ್ಲಿ ಕೆಲಸಕ್ಕೆ ಹೋಗಿದ್ದ ಭಾರತೀಯ ಮೂಲದ ಯುವತಿ ಶವವಾಗಿ ಪತ್ತೆ ; ಅಷ್ಟಕ್ಕೂ ಏನಾಯ್ತು ಈಕೆಗೆ?!

Indian girl Lahari Pathivada found dead in America

Share the Article

Lahari Pathivada: ಅಮೆರಿಕಾದಲ್ಲಿ (America) ಕೆಲಸಕ್ಕೆ ಹೋಗಿದ್ದ ಭಾರತೀಯ ಮೂಲದ ಯುವತಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮೃತ ಯುವತಿಯನ್ನು ಲಹರಿ ಪಥಿವಾಡ (25) (Lahari Pathivada) ಎಂದು ಗುರುತಿಸಲಾಗಿದೆ.

ಯುವತಿಯು ಅಮೆರಿಕಾದ ಮೆಕಿನ್ನಿ ಉಪನಗರದಲ್ಲಿನ ಓವರ್‌ಲ್ಯಾಂಡ್ ಪಾರ್ಕ್ ಪ್ರಾದೇಶಿಕ ವೈದ್ಯಕೀಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಅಂದು ಎಂದಿನಂತೆ ತಮ್ಮ ಬ್ಲಾಕ್ ಟೊಯೊಟಾ ಕಾರ್‌ನಲ್ಲಿ (black Toyota car) ಕೆಲಸಕ್ಕೆ ತೆರಳಿದ್ದ ಯುವತಿ ಸಂಜೆ ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ. ಗಾಬರಿಗೊಂಡ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಶೋಧ ಕಾರ್ಯ ನಡೆಸಿದ ಪೊಲೀಸರಿಗೆ ಕಾಣೆಯಾದ ಒಂದು ದಿನದ ನಂತರ ಯುವತಿಯ ಮೃತದೇಹ ಪತ್ತೆಯಾಗಿದೆ.

ಲಹರಿ ಪಥಿವಾಡ ಅವರ ಫೋನ್‌ ಅನ್ನು ಪೊಲೀಸರು ಟ್ರೇಸ್‌ ಮಾಡಿದಾಗ ಆಕೆಯ ಫೋನ್ 322 ಕಿಲೋ ಮೀಟರ್ ದೂರದಲ್ಲಿ ಒಕ್ಲಹೋಮದಲ್ಲಿ ಇರುವುದು ತಿಳಿದುಬಂದಿದ್ದು, ಸ್ಥಳಕ್ಕೆ ಹೋದಾಗ ಯುವತಿಯ ಶವ ಪತ್ತೆಯಾಗಿದೆ.

ಈಕೆಯನ್ನು ನೋಡಿರುವ ಅಮೆರಿಕಾದ ಮೆಕಿನ್ನಿ ನಿವಾಸಿಯೊಬ್ಬರು, ಲಹರಿ ತನ್ನ ಬ್ಲಾಕ್‌ ಟೊಯೊಟಾವನ್ನು ಎಲ್ ಡೊರಾಡೊ ಪಾರ್ಕ್‌ವೇ ಮತ್ತು ಡಲ್ಲಾಸ್ ಉಪನಗರದ ಹಾರ್ಡಿನ್ ಬೌಲೆವಾರ್ಡ್ ಪ್ರದೇಶದ ಸುತ್ತಮುತ್ತ ಓಡಿಸುತ್ತಿದ್ದರು ಎಂದು ಹೇಳಿದರು.

ಮೃತ ಲಹರಿ ಪಥಿವಾಡ ಅವರು ನೃತ್ಯ ಸೇರಿದಂತೆ ಮನರಂಜನಾ ಕ್ಷೇತ್ರದಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಈಕೆಯ ಸಾವು ನಿಗೂಢವಾಗಿದ್ದು, ಕುಟುಂಬಸ್ಥರಲ್ಲಿ ಆಘಾತದ ಉಂಟುಮಾಡಿದೆ.

 

ಇದನ್ನು ಓದಿ: Roopesh shetty: ದೊಡ್ಡಪರದೆಯಲ್ಲಿ ಮಿಂಚಲು ರೂಪೇಶ್‌ ಶೆಟ್ಟಿ ರೆಡಿ! ಯಾವ ಸಿನಿಮಾ, ಪಾತ್ರವೇನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌ 

Leave A Reply