Bengaluru Heat Wave: ರಾಜ್ಯದಲ್ಲಿ ಬಿಸಿಲ ತಾಪ ಹೆಚ್ಚಳ ; ಬೆಂಗಳೂರಲ್ಲಿ ತಾಪಮಾನ ಏರಿಕೆ!! ಯಾವಾಗ ಮಳೆ ಬರಲಿದೆ?!

Bengaluru Heat Wave Increase

Bengaluru Heat Wave: ರಾಜ್ಯದಲ್ಲಿ (Karnataka) ಬಿಸಿಲ ಬೇಗೆ ಹೆಚ್ಚಾಗುತ್ತಿದೆ. ಈ ಹಿಂದೆ ಬಿಸಿಲ ತಾಪ ತಣಿಸಲು ಮಳೆ ಬಂದಿದ್ದರೂ ಇದೀಗ ಮಳೆ‌ ಬಂದಿಲ್ಲವೇನೋ ಎಂಬಷ್ಟು ಬಿಸಿಲು ಸುಡುತ್ತಿದೆ. ಮರಗಳಿಗಿಂತ ಎಲ್ಲಿ ನೋಡಿದರೂ ಕಟ್ಟಡಗಳೇ ಕಾಣಿಸುವ ಬೆಂಗಳೂರಿನಲ್ಲಿನಲ್ಲಂತೂ ಬಿಸಿಲ ತಾಪ (Bengaluru Heat Wave) ತೀವ್ರವಾಗಿಯೇ ಇದೆ. ಸೆಕೆ ತಡೆಯಲಾರದೆ ಜನರು ತಂತ್ರಜ್ಞಾನಗಳ ಮೊರೆ‌ಹೋಗುತ್ತಿದ್ದಾರೆ. ಸದ್ಯ ತಾಪಮಾನದ ಬಗ್ಗೆ ಮಹತ್ವದ ಮಾಹಿತಿ ಬಹಿರಂಗವಾಗಿದೆ.

ಭಾರತೀಯ ಹವಾಮಾನ ಇಲಾಖೆಯು 1990 ರಿಂದ 2020 ರವರೆಗಿನ ಅಂಕಿ ಅಂಶಗಳ ಆಧಾರದ ಮೇಲೆ ಮೇ ತಿಂಗಳ ಸರಾಸರಿ ತಾಪಮಾನ 33.1 ಡಿಗ್ರಿ ಸೆಲ್ಸಿಯಸ್ ಎಂದು ಅಂದಾಜಿಸಿದೆ. ಆದರೆ ಬೆಂಗಳೂರಿನಲ್ಲಿ ಈ ವಾರದ ಗರಿಷ್ಠ ತಾಪಮಾನವು ಇಲಾಖೆಯ ಅಂದಾಜಿಗಿಂತಲೂ ಹೆಚ್ಚಾಗಿದೆ. 33 ಮತ್ತು 35 ಡಿಗ್ರಿಗಳ ನಡುವೆ ಇರಲಿದೆ ಎಂದು ಹೇಳಲಾಗಿದೆ.

ಹಲವು ವರ್ಷಗಳ ಹಿಂದೆ ಬೆಂಗಳೂರಲ್ಲಿ ತಾಪಮಾನ 34 ಡಿಗ್ರಿ ದಾಟಿದ ನಂತರ ಭಾರೀ ಮಳೆಯಾಗುತ್ತಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ 35-36 ಡಿಗ್ರಿ ತಾಪಮಾನ ದಾಟಿದರೂ ಮಳೆಯಾಗುತ್ತಿಲ್ಲ. ಬಿಸಿಲ ಬೇಗೆ ಹೆಚ್ಚಾಗುತ್ತಲೇ ಇದೆ.

ಏರುತ್ತಿರುವ ತಾಪಮಾನದ ಬಗ್ಗೆ ಮಾತನಾಡಿದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಹವಾಮಾನ ವಿಭಾಗದ ಮುಖ್ಯಸ್ಥ ಎಂ.ಎನ್.ತಿಮ್ಮೇಗೌಡ, “ವರ್ಷದಿಂದ ವರ್ಷಕ್ಕೆ ಮರಗಳ ಸಂಖ್ಯೆ, ಜೀವವೈವಿಧ್ಯ ಕಡಿಮೆಯಾಗುತ್ತಿದೆ. ಮರಗಳಿಗಿಂತ ಕಟ್ಟಡಗಳೇ ಮೇಲುಗೈ ಸಾಧಿಸುತ್ತಿವೆ. ಹಾಗಾಗಿ ಮಳೆಯೂ ಕಡಿಮೆಯಾಗಿದೆ, ಬಿಸಿಲು ಹೆಚ್ಚಾಗಿದೆ” ಎಂದು ಹೇಳಿದರು.

ಇನ್ನು ಭಾರತಕ್ಕೆ (india) ಕೇರಳದ ಮುಖಾಂತರ ಜೂನ್ 4ರಂದು ಮುಂಗಾರು ಮಳೆ ಪ್ರವೇಶಿಸಲಿದೆ. ಕರ್ನಾಟಕಕ್ಕೆ ಜೂನ್ 2ನೇ ವಾರದಲ್ಲಿ ಮುಂಗಾರು ಮಳೆಯ ಪ್ರವೇಶವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.

 

ಇದನ್ನು ಓದಿ: Honey for face: ಮುಖಕ್ಕೆ ಜೇನುತುಪ್ಪ ಹಚ್ಚಿದ್ರೆ ಇಷ್ಟೆಲ್ಲಾ ಲಾಭಗಳಿದ್ಯಾ? 

Leave A Reply

Your email address will not be published.