South Actors Salary: ಈ ಸ್ಟಾರ್ ನಟರ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!! ಹೆಚ್ಚು ಸಂಭಾವನೆ ಪಡೆಯುವ ನಟರು ಯಾರು ಗೊತ್ತಾ?

Do you know who are the highest paid actors in South Actors

South Actors Salary: ಸಿನಿಮಾದ ಸಂಭಾವನೆ ವಿಚಾರದಲ್ಲಿ ನಟಿಯರಿಗಿಂತ ನಟರಿಗೇ ಹೆಚ್ಚು ಸಂಭಾವನೆ. ಅದರಲ್ಲೂ ಸ್ಟಾರ್ ಹಿರೋಗಳು ಸಿನಿಮಾ ಹಿಟ್ ಆದ ಹಾಗೇ ಸಂಭಾವನೆಯನ್ನೂ ಹೆಚ್ಚಿಸಿಕೊಳ್ಳುತ್ತಾರೆ. ಸದ್ಯ ಹೆಚ್ಚು ಸಂಭಾವನೆ (South Actors Salary) ಪಡೆಯುವ ನಟರ ಲಿಸ್ಟ್ ಇಲ್ಲಿದೆ.

 

ಶಾರುಖ್ ಖಾನ್ (Shah Rukh Khan) ಆಗರ್ಭ ಶ್ರೀಮಂತ. ಈತ ವಿಶ್ವದ ಶ್ರೀಮಂತ ನಟರಲ್ಲಿ ಒಬ್ಬರು. ಶಾರುಖ್ ಖಾನ್ ಒಟ್ಟಿ ಆಸ್ತಿ ಮೌಲ್ಯ ₹6289 ಕೋಟಿ ಎಂದು ಮೂಲಗಳು ತಿಳಿಸಿವೆ. ಕೆಕೆಆರ್ (KKR), ರೆಡ್ ಚಿಲ್ಲೀಸ್ (Red chillies) ನಿರ್ಮಾಣ ಸಂಸ್ಥೆ ಸೇರಿದಂತೆ ಸಿನಿಮಾದಿಂದ ಹಣ ಗಳಿಕೆ ಮಾಡುತ್ತಿದ್ದಾರೆ. ಶಾರುಖ್ ಖಾನ್ ಈ ವರ್ಷದ ಸೂಪರ್ ಹಿಟ್ ‘ಪಠಾಣ್’ (pathaan) ಚಿತ್ರದಿಂದ ನಿರ್ಮಾಪಕರು 333 ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ. ಅದರಂತೆ 200 ಕೋಟಿ ಶಾರುಖ್ ಪಾಲಾಗಿದೆ.

ಕಾಲಿವುಡ್ ಸ್ಟಾರ್ ಹೀರೋ ದಳಪತಿ ವಿಜಯ್ (Actor Vijay) ಒಂದು ಚಿತ್ರಕ್ಕೆ 150 ಕೋಟಿ ಚಾರ್ಜ್ ಮಾಡುತ್ತಾರೆ. ಅವರು ತಮಿಳು ಇಂಡಸ್ಟ್ರಿಯಲ್ಲಿ ಅತ್ಯಂತ ದುಬಾರಿ ನಟ ಎಂದು ಹೇಳಲಾಗುತ್ತದೆ. ಅವರ ಸಂಭಾವನೆ ಸೂಪರ್ ಸ್ಟಾರ್ ರಜನಿಕಾಂತ್​ಗಿಂತಲೂ (Rajinikanth) ಹೆಚ್ಚಾಗಿದೆ. ಇನ್ನು ವಾರಿಸು ಚಿತ್ರಕ್ಕೆ ನಟ ವಿಜಯ್ 125 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ. ಸ್ಟಾರ್ ಹೀರೋ ವಿಜಯ್ ಅವರ ಆಸ್ತಿ 445 ಕೋಟಿ ರೂಪಾಯಿ ಎಂದು ವರದಿಯಾಗಿದೆ.

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (prabhas) ಪ್ರಸ್ತುತ ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ನಟನೆಯ ಆದಿಪುರುಷ (Adipurusha) ಬಿಡುಗಡೆಗೆ ಸಿದ್ಧವಾಗುತ್ತಿರುವಾಗಲೇ ಸಲಾರ್, ಪ್ರಾಜೆಕ್ಟ್ ಕೆ, ರಾಜಾ ಡಿಲಕ್ಸ್ ಚಿತ್ರಗಳು ಶೂಟಿಂಗ್ ಹಂತದಲ್ಲಿವೆ. ಇನ್ನು ‘ಆದಿಪುರುಷ’ ಚಿತ್ರಕ್ಕೆ ಪ್ರಭಾಸ್ 150 ಕೋಟಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ‘ಬಾಹುಬಲಿ’ ಯಶಸ್ಸಿನ ನಂತರ ಪ್ರಭಾಸ್ ಸಂಭಾವನೆ ದುಪ್ಪಟ್ಟಾಗಿದೆ.

ಬಾಲಿವುಡ್​ ಬಹುಬೇಡಿಕೆಯ ನಟರ ಪೈಕಿ ಅಕ್ಷಯ್ ಕುಮಾರ್ (Akshay Kumar) ಪ್ರಮುಖರು. ಶಿಸ್ತುಬದ್ಧ ಡಯಟ್, ವಿಭಿನ್ನ ಪಾತ್ರ, ಅತ್ಯುತ್ತಮ ನಟನೆಯಿಂದಲೂ ಇವರು ಹೆಸರುವಾಸಿ. ಒಂದು ಕಾಲದಲ್ಲಿ ನಟನ ಸಿನಿಮಾಗಳೆಲ್ಲವೂ ಹಿಟ್ ಪಟ್ಟಿ ಸೇರುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಅಕ್ಷಯ್ ಕುಮಾರ್ ಫ್ಲಾಪ್ ಚಿತ್ರಗಳನ್ನು ನೀಡುತ್ತಿದ್ದಾರೆ. ಆದರೂ ಅಕ್ಷಯ್ ಕುಮಾರ್ ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಅಕ್ಷಯ್ ಬಡೇ ಮಿಯಾನ್ ಚೋಟೆ ಮಿಯಾನ್ ಚಿತ್ರಕ್ಕಾಗಿ 135 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.

ನಟ ಅಲ್ಲು ಅರ್ಜುನ್ (Allu Arjun) ಅವರು ಸದ್ಯ ‘ಪುಷ್ಪ 2’ (pushpa-2) ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ‘ಪುಷ್ಪ’ ಸಿನಿಮಾ ಹಿಟ್ ಆಗಿರುವುದರಿಂದ ಅವರ ಸಂಭಾವನೆ ಕೂಡ ಏರಿಕೆ ಆಗಿದೆ. ಅಲ್ಲು ಅರ್ಜುನ್ ತಮ್ಮ ಸಂಭಾವನೆಯನ್ನು 125 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದ್ದಾರೆ ಎನ್ನಲಾಗಿದೆ. ಪುಷ್ಪ 2 ಚಿತ್ರಕ್ಕಾಗಿ ಟಿ-ಸೀರೀಸ್ 125 ಕೋಟಿ ರೂ ನೀಡಿದೆ ಎನ್ನಲಾಗಿದೆ.

ಜೂನಿಯರ್ ಎನ್ ಟಿಆರ್ (jnr. nTR) ಚಿಕ್ಕ ವಯಸ್ಸಿನಲ್ಲೇ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಮಾಸ್ ಫಾಲೋಯಿಂಗ್ ಪಡೆದ ನಾಯಕ NTR, ಅವರು ಟಾಲಿವುಡ್​ನ ಯಂಗ್ ಟೈಗರ್ ಆಗಿ ಹೊರಹೊಮ್ಮುತ್ತಿದ್ದಾರೆ. ‘RRR’ ಚಿತ್ರದ ಮೂಲಕ ಯಶಸ್ಸಿನ ಬಳಿಕ ಜೂನಿಯರ್ NTR ಅವರ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಸಂಭಾವನೆಯನ್ನು 100 ಕೋಟಿಗೆ ಏರಿಸಿಕೊಂಡಿದ್ದಾರೆ. ಇವರು ದಕ್ಷಿಣದ ಟಾಪ್ 5 ನಟರಲ್ಲಿ ಒಬ್ಬರಾಗಿದ್ದಾರೆ. ಇನ್ನು NTR ಆಸ್ತಿ ರೂ. 440 ಕೋಟಿ ಎಂದು ಅಂದಾಜಿಸಲಾಗಿದೆ. NTR ಬ್ರಾಂಡ್ ಅಂಬಾಸಿಡರ್ ಆಗಿ ಜಾಹೀರಾತುಗಳಿಗಾಗಿ ದೊಡ್ಡ ಮೊತ್ತವನ್ನು ತೆಗೆದುಕೊಳ್ಳುತ್ತಾರೆ.

ಸಲ್ಮಾನ್ ಖಾನ್ (Salman Khan) ಅನೇಕ ಅದ್ಭುತ ಬಾಲಿವುಡ್ ಚಿತ್ರಗಳಲ್ಲಿ ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದರೂ, ಅವರು ತಮ್ಮ ವೃತ್ತಿಜೀವನದಲ್ಲಿ 3 ವರ್ಷಗಳ ಅವಧಿಯಲ್ಲಿ 8 ಸಿನಿಮಾ ಫ್ಲಾಪ್ ಆಗಿದ್ದನ್ನೂ ನೋಡಿದ್ದಾರೆ. ಇತ್ತೀಚಿನ ಸಿನಿಮಾಗಳೂ ಫ್ಲಾಪ್ ಆಗಿವೆ. ಇನ್ನು ಸಲ್ಮಾನ್ ಪ್ರತಿ ಸಿನಿಮಾಗೆ 100 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ ಮತ್ತು ಚಿತ್ರದ ಕಲೆಕ್ಷನ್ನ ಶೇಕಡಾವಾರು ಪಾಲನ್ನು ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.

ಸೌತ್ ಸಿನಿಮಾದಲ್ಲಿ ಸೈಲೆಂಟಾಗಿ ವಿಲನ್ ಪಾತ್ರಗಳ ಮೂಲಕ ಪ್ರೇಕ್ಷಕರ ಮೆಚ್ಚಿಸಿದ ನಟರ ಸಾಲಿನಲ್ಲಿ ಮೊದಲಿಗೆ ನೆನಪಿಗೆ ಬರುವುದು ನಟ ವಿಜಯ್ ಸೇತುಪತಿ (Vijay sethupathi). ನಟ ಒಂದು ಸಿನಿಮಾದಲ್ಲಿ ಕೆಲಸ ಮಾಡಲು 25ರಿಂದ 30 ಕೋಟಿ ಪಡೆಯುತ್ತಾರೆ.

 

ಇದನ್ನು ಓದಿ: karnataka BJP President: ಬಿಜೆಪಿ ಪಾಳಯದಲ್ಲಿ ಜೋರಾಗ್ತಿದೆ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು! ನಳಿನ್ ಕುಮಾರ್ ಕಟೀಲ್ ಸ್ಥಾನಕ್ಕೆ ಯಾರು? 

Leave A Reply

Your email address will not be published.