Arunkumar puttila: ಕರಾವಳಿಯಲ್ಲಿ ಬಿಜೆಪಿಗೆ ಬಲವಾಗಿ ಕಾಡಲಿದ್ದಾರ ಅರುಣ್ ಕುಮಾರ್ ಪುತ್ತಿಲ? ಪುತ್ತಿಲರ ಆ ನಿರ್ಧಾರ, ಬಿಜೆಪಿ ಪಾಳಯಾಕ್ಕೆ ಆಗುತ್ತ ಪ್ರಾಣ ಸಂಕಟ?
Will Arun Kumar Puttila contest from Lok Sabha constituency
Arunkumar puttila: ಈ ಸಲದ ವಿಧಾನಸಭೆಯ ಚುನಾವಣೆಯಲ್ಲಿ (Assembly election) ಕರ್ನಾಟಕದ ಮತದಾರ ಪ್ರಭುಗಳು ಕೆಲವು ನಾಯಕರ ಅಹಂ ಅನ್ನು ಇಳಿಸಿದ್ದಾರೆ. ಅಲ್ಲದೆ ಕೆಲವೆಡೆ ಪಕ್ಷೇತರವಾಗಿ ಸ್ಪರ್ಧಿಸಿದ ಅಭ್ಯರ್ಥಿಗಳು (Indipendent Candidates) ತಮ್ಮಎದುರಾಳಿಗಳ ಸೊಕ್ಕನ್ನು ಮುರಿದಿದ್ದಾರೆ. ಸೋತರೂ ಕೂಡ ತಮ್ಮ ತಾಕತ್ತು ಏನು ಎಂಬುದನ್ನು ತೋರಿದ್ದಾರೆ. ರಾಷ್ಟ್ರೀಯ ಪಕ್ಷಗಳೆದುರೂ ತಮ್ಮ ಶಕ್ತಿ ಏನೆಂದು ತಿಳಿಯಪಡಿಸಿದ್ದಾರೆ. ಅಂತವರಲ್ಲಿ ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ, ಅಲ್ಪ ಮತದಿಂದ ಸೋತರೂ ತನ್ನ ಹಿರಿಮೆಯನ್ನು ಇಡೀ ನಾಡಿಗೆ ಸಾರಿದ ಪಕ್ಕಾ ಹಿಂದುತ್ವವಾದಿ ಅರುಣ್ ಕುಮಾರ್ ಪುತ್ತಿಲ (Arunkumar puttila) ಕೂಡ ಒಬ್ಬರು. ಇದೀಗ ಈ ಪುತ್ತಿಲರು ಮತ್ತೊಮ್ಮೆ ಬಿಜೆಪಿ(BJP) ಪಕ್ಷಕ್ಕೆ ಶಾಕ್ ನೀಡಲು ಮುಂದಾಗ್ತಾರಾ? ಅನ್ನೋ ಅನುಮಾನ ಶುರುವಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ (Puttur Assembly Constituency) ಸಂಚಲನ ಸೃಷ್ಟಿಸಿದ್ದ ಅರುಣ್ ಕುಮಾರ ಪುತ್ತಿಲ, ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಗೆ (Ashok Rai) ಟಫ್ ಫೈಟ್ ನೀಡಿದ್ದರು. ಆದರೆ ಪುತ್ತಿಲರು ಚುನಾವಣೆಯಲ್ಲಿ ಸೋತರೂ ಕೂಡ ಲಕ್ಷಾಂತರ ಕಾರ್ಯಕರ್ತರ ಮನ ಗೆದ್ದಿದ್ದಾರೆ. ಪುತ್ತಿಲಗಾಗಿ ಒಂದೇ ದಿನದಲ್ಲಿ 50ಕ್ಕೂ ಅಧಿಕ ವಾಟ್ಸಪ್ (WhatsApp) ಗ್ರೂಪ್ಗಳಲ್ಲಿ ರಚನೆ ಮಾಡಲಾಗಿದೆ. ಈ ಬೆನ್ನಲ್ಲೇ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲೆ (Parliament election) ಅರುಣ್ ಕುಮಾರ್ ಪುತ್ತಿಲ, ದಕ್ಷಿಣ ಕನ್ನಡ (Dakshina kannada) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದ್ದು, ಈಗಾಗಲೇ ಬಿಜೆಪಿ ಪಾಳಯದಲ್ಲಿ ಭಯ ಶುರುವಾಗಿದೆ.
ಹೌದು, ಕೇವಲ ಪುತ್ತೂರು ಮಾತ್ರವಲ್ಲದೇ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತಿಲ ಅಭಿಮಾನಿಗಳ ಬಳಗ ಈಗ ಹುಟ್ಟಿಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಅಭಿಮಾನಿಗಳು ಒತ್ತಡ ಹಾಕುತ್ತಿದ್ದಾರೆ. ಪುತ್ತಿಲ ಅಭಿಮಾನಿಗಳು ಬಹುತೇಕ ಹಿಂದೂ ಸಂಘಟನೆಗೆ ಸೇರಿದವರಾಗಿದ್ದರಿಂದ ಇದು ಬಿಜೆಪಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಗಳಿವೆ. ಒಂದು ವೇಳೆ ಅರುಣ ಕುಮಾರ್ ಪುತ್ತಿಲ ದಕ್ಷಿಣ ಕನ್ನಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ರೆ ಹಾಲಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ (Nalin Kumar Kateel) ಗೆಲುವು ಕಷ್ಟವಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳು ಈಗಾಗಲೇ ಕರಾವಳಿ ಭಾಗದಲ್ಲಿ ಆರಂಭಗೊಂಡಿವೆ. ಆದರೆ ಈವರೆಗೂ ಅರುಣಕುಮಾರ್ ಪುತ್ತಿಲ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಅಂದಹಾಗೆ ಈ ನಡುವೆ ಆದರ್ಶ ಗೋಖಲೆ (Adarsha Gokhale) ಎನ್ನುವವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದ್ದು, ನಳಿನ್ ಕುಮಾರ್ ಕಟೀಲ್ ಅವರಿಂದ ಪುತ್ತೂರು ಕ್ಷೇತ್ರವನ್ನು ಕಳೆದುಕೊಳ್ಳಬೇಕಾಯ್ತು. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಮಾರ ಪುತ್ತಿಲ ಅವರಿಗೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರುಣಕುಮಾರ್ ಪುತ್ತಿಲ ಹೆಸರು ಟ್ರೆಂಡ್ನಲ್ಲಿದ್ದು, ಪುತ್ತಿಲರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಖಂಡಿತವಾಗಿಯೂ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸೋದು ನೂರಕ್ಕೆ ನೂರು ಸತ್ಯ ಅನ್ನೋದು ಪುತ್ತಿಲ ಬಳಗದ ಅಭಿಪ್ರಾಯ.
ಇನ್ನು ದ.ಕ ಜಿಲ್ಲೆಯ ಈ ರಾಜಕೀಯ ಲೆಕ್ಕಾಚಾರಗಳನ್ನು ನೋಡುವುದಾದರೆ ಭವಿಷ್ಯದ ನಾಯಕ ಎನಿಸಿರುವ ಅರುಣ್ ಕುಮಾರ್ ಪುತ್ತಿಲರು ಮುಂದೆ ಬಿಜೆಪಿಗೆ ಬಲುವಾಗಿ ಕಾಡಲಿದ್ದಾರೆಯೇ ? ಆದರೆ ಈ ಮೊದಲೇ ಬಿಜೆಪಿ (BJP) ತನ್ನ ತಪ್ಪನ್ನು ತಿದ್ದಿಕೊಂಡು, ಪುತ್ತೂರಲ್ಲಾದ ಪೆಟ್ಟಿನ ನೋವನ್ನು ಮತ್ತೆ ತಿನ್ನಬಾರದೆಂದು ಭಾವಿಸಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವ ಸೂಚಿಸುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತದೋ ಎನ್ನುವುದನ್ನು ಕಾದು ನೋಡಬೇಕಾಗಿದೆ. ಪುತ್ತಿಲ ಅವರು ಪುತ್ತೂರು ಕ್ಷೇತ್ರದಲ್ಲಿ ಬಂದಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತ ಕಾರಣ ತನಗೆ ಟಿಕೆಟ್ ನೀಡಿಲ್ಲ ಎನ್ನುವ ಕಾರಣಕ್ಕೆ ಅಲ್ಲ. ಹಾಲಿ ಶಾಸಕರಿಗೆ ಟಿಕೆಟ್ ನೀಡಿದರೂ ಪುತ್ತಿಲ ಅವರು ನಾಮಪತ್ರ ವಾಪಾಸ್ ಪಡೆಯುತ್ತಿದ್ದರು ಎನ್ನುವುದನ್ನು ಖುದ್ದು ಪುತ್ತಿಲ ಅವರೇ ತಮ್ಮಅಪ್ತೇಶ್ಟರಲ್ಲಿ ಹೇಳಿಕೊಂಡಿದ್ದರು. ಆದರೆ ಗುಪ್ತವಾಗಿ ಕಾರ್ಯಾಚರಣೆ ನಡೆಸಿದ ಡಿವಿ ಸದಾನಂದ ಗೌಡ ತಮ್ಮ ದಾಳ ಉರುಳಿಸಿ ತಮ್ಮಗೆಳೆಯ ಅಶೋಕ್ ರೈ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಕೊಡಿಸಿದ್ದರು.
ಇತ್ತ ಹಾಲಿ ಶಾಸಕ ಸಂಜೀವ ಮಠಂದೂರುಗೂ ಟಿಕೆಟ್ ತಪ್ಪಿಸಲಾಯಿತು. ಮತ್ತೋರ್ವ ಪ್ರಬಲ ಆಕಾಂಕ್ಷಿಯಾದ ಅರುಣ್ ಪುತ್ತಿಲ ಅವರಿಗೂ ಟಿಕೆಟ್ ನೀಡಲಿಲ್ಲ. ಕೊನೆಗೆ ಸೂಕ್ಷ್ಮ ಪ್ರದೇಶವಾದ ಪುತ್ತೂರಿನಲ್ಲಿ ಆಶಾ ತಿಮ್ಮಪ್ಪ ಗೌಡ(Asha Timmappa Gowda) ಎಂಬ ಮಹಿಳೆಗೆ ಸೀಟು ನೀಡಲಾಯಿತು. ಆಗ ಸಿಡಿದು ನಿಂತವರು ಅರುಣ್ ಪುತ್ತಿಲರವರು. ಅದೀಗ ಬಿಜೆಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಇಲ್ಲಿ, ಟಿಕೆಟ್ ಹಂಚಿಕೆಯ ಜವಾಬ್ದಾರಿ ಮತ್ತು ನಿರ್ಧಾರ ತೆಗೆದುಕೊಂಡವರು ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ರವರು. ನಳಿನ್ ಕುಮಾರ್ ಕಟೀಲ್ ಒಂದರ್ಥದಲ್ಲಿ ಸಂತೋಷ್ ಅವರ ಮುಂದೆ ಡಮ್ಮಿ ಪೀಸ್. ಆದರೆ ಇವತ್ತು ನಳಿನ್ ಕುಮಾರ್ ಕಟೀಲ್ ಅವರನ್ನು ಗುರಿಯಾಗಿಸಿಕೊಂಡು ವ್ಯಾಪಕವಾಗಿ ದೂರಲಾಗುತ್ತಿದೆ. ಅದು ಸಹಜ ಕೂಡಾ: ಕಾರಣ ರಾಜ್ಯಾಧ್ಯಕ್ಷನಾಗಿ ಸೋಲಿನ ಮತ್ತು ಗೆಲುವಿನ ಜವಾಬ್ದಾರಿ ಕಟೀಲ್ ಅವರಿಗೇ ಸಲ್ಲಬೇಕಲ್ಲವೆ ?
ಈಗ ದಕ್ಷಿಣ ಕನ್ನಡದಲ್ಲಿ ಅರುಣ್ ಪುತ್ತಿಲ ಎನ್ನುವವರು ಟ್ರೆಂಡಿಂಗ್ ಸಬ್ಜೆಕ್ಟ್. ಅವರ ಅಭಿಮಾನಿ ಬಳಗವು ಅರುಣ್ ಪುತ್ತಿಲ ಅವರ ಈ ವೀರೋಚಿತ ಸೋಲನ್ನು ಬಳಸಿಕೊಂಡು ಮುಂದಿನ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಮಾಡಲು ಹೊರಟಿದ್ದಾರೆ. ಈ ಮೊಮೆಂಟಮ್ ಅನ್ನು ಬರುವ ಲೋಕಸಭಾ ಚುನಾವಣೆ(Parliament) ತನಕ ಉಳಿಸಿಕೊಳ್ಳಲು ಸಾಧ್ಯವೇ ? ಪುತ್ತೂರಿನಲ್ಲಿ ಸಿಕ್ಕ ಗೆಲುವು ಮತ್ತು ಮತಗಳನ್ನು ಲೋಕಸಭಾ ವ್ಯಾಪ್ತಿಯ ಉಳಿದ 7 ಕ್ಷೇತ್ರಗಳಲ್ಲಿ ಪಡೆಯಲು ಅರುಣ್ ಕುಮಾರ್ ಪುತ್ತಿಲ(Arun Kumar puttila)ಅವರು ಶಕ್ತರೇ ಎನ್ನುವುದನ್ನು ಕಾಲವೇ ನಿರ್ಧರಿಸಬೇಕಾಗಿದೆ. ಒಂದಂತೂ ನಿಜ, ಬಿಜೆಪಿ ಹೈಕಮಾಂಡ್ ಸ್ಥಳೀಯ ನಾಯಕತ್ವ ಮತ್ತು ತನ್ನ ಹಠಮಾರಿ ನಿಲುವುಗಳ ಪೊರೆ ಕಳಚಿಕೊಳ್ಳದೆ ಹೋದರೆ, ಇವತ್ತು ಪುತ್ತೂರು ಕ್ಷೇತ್ರಕ್ಕೆ ಆದ ಗತಿ ಉಳಿದ ಎಲ್ಲಾ ಕರಾವಳಿಯ ಕ್ಷೇತ್ರಗಳಿಗೂ ಆಗೋದು ಖಚಿತ.
ಇದನ್ನು ಓದಿ: Election: ಕರ್ನಾಟಕದ ಜನರು 10 ತಿಂಗಳಿನಲ್ಲಿ ಮತ್ತೆ ಚುನಾವಣೆಗೆ ಸಿದ್ಧರಾಗಿ!