Pralhad Joshi: ನಳಿನ್ ಕಟೀಲ್ ಯುಗ ಈಗಾಗಲೇ ಮುಗಿದಿದೆ: ಶಾಕಿಂಗ್ ಸ್ಟೇಟ್ ಮೆಂಟ್ ಕೊಟ್ಟ ಬಿಜೆಪಿ ನಾಯಕ !

Union minister Pralhad Joshi talks over Nalin Kumar kateel

Pralhad Joshi: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election 2023) ಬಿಜೆಪಿ ಸೋಲನ್ನು ಅನುಭವಿಸಿತ್ತು. ಕೇವಲ 66 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಈ ಸೋಲಿನ ಹೊಣೆಯನ್ನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ (Nalin Kumar Kateel) ಅವರು ಹೊತ್ತುಕೊಂಡಿದ್ದಾರೆ. ಇನ್ನು ಸೋಲಿನ ನಂತರ ಕೇಳಿ ಬರುತ್ತಿರುವ ಮುಖ್ಯವಾದ ಮಾತು ರಾಜ್ಯಾಧ್ಯಕ್ಷರ ಬದಲಾವಣೆಯ ಮಾತು. ಈ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರು ನಳಿನ್‌ ಕುಮಾರ್‌ ಕಟೀಲ್‌ ಅವರ ಅವಧಿ ಮುಗಿದಿದೆ ಎಂದು ಹೇಳಿದ್ದಾರೆ.

ನನಗೆ ರಾಷ್ಟ್ರೀಯ ನಾಯಕರು ಚುನಾವಣಾ ಕರ್ತವ್ಯದ ಕೆಲವೊಂದು ಜವಾಬ್ದಾರಿ ಕೊಟ್ಟಿದ್ದರು. ಅದನ್ನು ನಾನು ಮಾಡಿದ್ದೇನೆ. ಮುಂದಿನ ತೀರ್ಮಾನ ರಾಷ್ಟ್ರೀಯ ನಾಯಕರೇ ಮಾಡುತ್ತಾರೆ. ವಿಪಕ್ಷ ನಾಯಕ ಯಾರು ಎಂಬುವುದಕ್ಕೆ ಶಾಸಕಾಂಗ ಸಭೆಯಲ್ಲಿ ಇದರ ತೀರ್ಮಾನ ಆಗುತ್ತದೆ. ಆದರೆ ಇದಕ್ಕಿಂತ ಮೊದಲು ನಮ್ಮ ರಾಷ್ಟ್ರೀಯ ನಾಯಕರೊಬ್ಬರು ರಾಜ್ಯಕ್ಕೆ ಬರುತ್ತಾರೆ ಎಂದು ಮಾಧದ್ಯಮ ಪ್ರತಿನಿಧಿನಗಳ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ. ಈ ಬಾರಿಯ ಚುನಾವಣೆ ಬಿಜೆಪಿಯ ಪಾಲಿಗೆ ನಿರಾಶದಾಯಕವಾಗಿದೆ. ಈ ಸೋಲನ್ನು ನಾನು ಸವಾಲಾಗಿ ಸ್ವೀಕಾರ ಮಾಡುತ್ತೇನೆ. ಸೋಲಿನ ಕಾರಣ ಏನು ಎಂಬುವುದನ್ನು ತಿಳಿದುಕೊಳ್ಳಬೇಕು ಎಂಬ ಮಾತನ್ನು ಕೂಡಾ ಅವರು ಈ ಸಂದರ್ಭದಲ್ಲಿ ಹೇಳಿದರು.

ಇನ್ನೇನಿದ್ದರೂ ಹೊಸ ಸರಕಾರ ಜಾರಿಗೆ ಬಂದು ಜನರ ಬೇಡಿಕೆ ಈಡೇರಿಸುವಂತಹ ಕೆಲಸ ಮಾಡಬೇಕು. ಕೊಟ್ಟ ಭರವಸೆಯನ್ನು ನ್ಯಾಯೋಚಿತವಾಗಿ ಮಾಡಲಿ. ಹಾಗೆನೇ ಇಡೀ ಬಿಜೆಪಿ ಸೋಲಿನ ಹೊಣೆ ಇಡೀ ರಾಜ್ಯ ಬಿಜೆಪಿ ಘಟಕದ್ದು ಎಂಬ ಮಾತನ್ನು ಹೇಳುತ್ತಾ, ಈ ಬಗ್ಗೆ ವಿಮರ್ಶೆ ಮಾಡಲಾಗುತ್ತದೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ಬೇರೆ ವಿಷಯದ ಮೇಲೆ ನಡೆಯುತ್ತದೆ, ಹಾಗೆನೇ ರಾಜ್ಯ ಚುನಾವಣೆ ಕೂಡಾ. ಬಿಜೆಪಿಗೆ 330 ಕ್ಕೂ ಹೆಚ್ಚು ಸೀಟು ಬರುತ್ತದೆ ಎಂದು ಸಮೀಕ್ಷೆಯ ಆಧಾರದಲ್ಲಿ ಹೇಳಿದರು. ಈ ರಾಜ್ಯದ ಚುನಾವಣೆಗೂ ಲೋಕಸಭೆ ಚುನಾವಣೆಗೂ ಸಂಬಂಧ ಇಲ್ಲ. ಜನರು ಜಾಣರು. ಅವರಿಗೆ ಯಾರಿಗೆ ವೋಟ್‌ ಹಾಕಬೇಕು, ಕೊಡಬೇಕು ಎಂಬುವುದು ಗೊತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Kiran Majumdar Shah: ಕಾಂಗ್ರೆಸ್ಸಿನ ಐತಿಹಾಸಿಕ ಗೆಲುವಿಗೆ ಇವೇ ಮೂಲ ಕಾರಣ! 3 ತ್ರಿಸೂತ್ರ ಬಿಚ್ಚಿಟ್ಟ ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್ ಷಾ

Leave A Reply

Your email address will not be published.