PM Rozgar Mela: ಗ್ರೂಪ್‌ ಸಿ, ಡಿ ಹುದ್ದೆಗಳ ಸಂದರ್ಶನ ನಿಲ್ಲಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ: ಪ್ರಧಾನಿ ನರೇಂದ್ರ ಮೋದಿ!!

PM Rozgar Mela Interviews for Group C and Group D Posts are stopped.

PM Rozgar Mela: ನವದೆಹಲಿಯಿಂದ ಆಯೋಜಿಸಲಾಗಿದ್ದ ರೋಜ್‌ಗಾರ್‌ (ಉದ್ಯೋಗ) ಮೇಳದಲ್ಲಿ (PM Rozgar Mela) ವರ್ಚುವಲ್‌ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಗ್ರೂಪ್‌ ಸಿ, ಡಿ ಹುದ್ದೆಗಳ ಸಂದರ್ಶನ ತೆಗೆದು ಹಾಕಿ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿದ್ದೇವೆ. ಎಲ್ಲ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ ಎಂದು ಹೇಳಿದರು.

 

ಕೆಲದಿನಗಳ‌ ಹಿಂದೆ ಗುಜರಾತ್‌ನಲ್ಲಿ ರೋಜ್‌ಗಾರ್ ಮೇಳವನ್ನು (PM Rozgar Mela) ಆಯೋಜನೆ ಮಾಡಲಾಗಿತ್ತು. ಮೇಳ ಮುಂದೆಯೂ ನಡೆಯುತ್ತದೆ. ಬಿಜೆಪಿ (bjp) ನೇತೃತ್ವದ ಸರ್ಕಾರ ಈ ರೀತಿಯ ಮೇಳಗಳನ್ನು ನಡೆಸುತ್ತಿದೆ. ಈ ಹಿಂದೆ ಒಂದು ಅರ್ಜಿಯನ್ನು ಸಲ್ಲಿಸಬೇಕಿದ್ದರೆ ಸರತಿ ಸಾಲಿನಲ್ಲಿ ಕಾದು ಕಾದು ಸುಸ್ತಾಗಬೇಕಿತ್ತು. ಸಾಕಷ್ಟು ಕಷ್ಟಪಟ್ಟು ಕೊನೆಗೆ ಅರ್ಜಿ ಸಲ್ಲಿಕೆ ಆಗುತ್ತಿತ್ತು. ಆದರೆ, ಇಂದು ಹಾಗಲ್ಲ ಎಲ್ಲ ಪ್ರಕ್ರಿಯೆಗಳನ್ನೂ ಆನ್‌ಲೈನ್‌ ಮೂಲಕವೇ ಮಾಡಲು ವ್ಯವಸ್ಥೆ ಮಾಡಲಾಗಿದೆ. ಗ್ರೂಪ್‌ ಸಿ ಮತ್ತು ಗ್ರೂಪ್‌ ಡಿ ಹುದ್ದೆಗಳಿಗೆ ಸಂದರ್ಶನಗಳನ್ನು ನಿಲ್ಲಿಸಲಾಗಿದೆ. ಈ ಮೂಲಕ ಭ್ರಷ್ಟಾಚಾರಕ್ಕೆ ತೆರೆ ಎಳೆಯಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದರು.

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi), ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ 71 ಸಾವಿರ ಯುವ ಜನರಿಗೆ ನೇಮಕಾತಿ ಪತ್ರವನ್ನು ಈ ಕಾರ್ಯಕ್ರಮದಲ್ಲಿ ವಿತರಿಸಿದ್ದಾರೆ. ಅಂಚೆ ಇಲಾಖೆ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಪತ್ರ, ಗ್ರಾಮೀಣ ಡಾಕ್ ಸೇವಕ್, ಅಂಚೆ ನೀರಿಕ್ಷಕರು, ತೆರಿಗೆ ಸಹಾಯಕರು, ಇನ್‌ಸ್ಪೆಕ್ಟರ್‌ಗಳು, ನರ್ಸಿಂಗ್, ಸಹಾಯಕ ಲೆಕ್ಕಪರಿಶೋಧಕ, ಜೂನಿಯರ್ ಅಕೌಂಟ್ ಕ್ಲರ್ಕ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪ್ರಾಂಶುಪಾಲರು ಸೇರಿದಂತೆ ಹಲವು ಹುದ್ದೆಗಳ ನೇಮಕಾತಿ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿತರಣೆ ಮಾಡಿದ್ದಾರೆ.

ನಮ್ಮ ಸರ್ಕಾರವು 10 ವರ್ಷದಿಂದ ಸ್ಥಿರ ಹಾಗೂ ಸಮರ್ಥ ಆಡಳಿತವನ್ನು ಕೊಡುತ್ತಾ ಬಂದಿದೆ. ದೇಶದ 45 ಸ್ಥಳಗಳಲ್ಲಿ ರೋಜ್‌ಗಾರ್ ಮೇಳವನ್ನು ಆಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಹುಬ್ಬಳ್ಳಿ, ಮೈಸೂರು (Mysore) ಹಾಗೂ ಬೆಂಗಳೂರಿನಲ್ಲಿ (Bengaluru) ರೋಜ್‌ಗಾರ್‌ ಮೇಳದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಳೆದ ಮೇಳಗಳಲ್ಲಿ 2 ಲಕ್ಷ ಜನರಿಗೆ ಉದ್ಯೋಗವನ್ನು ನೀಡಲಾಗಿದೆ.
ಕರ್ನಾಟಕ ಹಲವು ಹೊಸ ಸಂಶೋಧನಾತ್ಮಕ ಕಂಪನಿಗಳ ತಾಣವಾಗಿದೆ. ಕರ್ನಾಟಕದ ಅಭಿವೃದ್ಧಿಗೆ ನಾವು ಕೆಲಸ ಮಾಡುತ್ತೇವೆ. ಕರ್ನಾಟಕದ ಹೊಸ ಸರ್ಕಾರ ಒಳ್ಳೇ ಕೆಲಸ ಮಾಡುತ್ತದೆ ಎನ್ನುವ ವಿಶ್ವಾಸವನ್ನು ಹೊಂದಿದ್ದೇನೆ. ಹೊಸ ಸರ್ಕಾರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.

ಕೌಶಲ್ಯ ವಿಕಸನಕ್ಕೆ ಪ್ರಧಾನಿಯವರು ಸಾಕಷ್ಟು ಒತ್ತು ನೀಡಿದ್ದಾರೆ. ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ ಮೂಲಕ ಕೌಶಲ್ಯಾಭಿವೃದ್ಧಿಗೆ ಮಹತ್ವ ನೀಡಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದ ಮೂಲಕ ಭಾರತ ಸರ್ಕಾರ ಮುನ್ನಡೆಯುತ್ತಿದೆ. ಮೇಕ್ ಇನ್ ಇಂಡಿಯಾದಿಂದ ಶೇಕಡಾ 92ರಷ್ಟು ಮೊಬೈಲ್ ಈಗ ನಮ್ಮ ದೇಶದಲ್ಲೇ ತಯಾರಾಗುತ್ತಿದೆ. ಈಗ ಚೀನಾ (china) ತನ್ನ ಡಿಮ್ಯಾಂಡ್ ಕಳೆದುಕೊಂಡಿದೆ. ಭಾರತದಲ್ಲೂ ಉತ್ತಮ ಮಾನವ ಸಂಪನ್ಮೂಲ ಇದೆ ಎಂದು ಹೇಳಿದರು.

 

PM Rozgar Mela
Src: vistaranews

 

 

ಇದನ್ನು ಓದಿ: WATCH FUNNY VIDEO | ಮೊಬೈಲ್ ಎಂದು ಭಾವಿಸಿ ಯುವತಿಯ ನ್ಯಾಪ್ಕಿನ್ ಗೆ ಕೈ ಹಾಕಿ ಕಿತ್ಕೊಂಡು ಪರಾರಿಯಾದ ಕಳ್ಳರು ! 

Leave A Reply

Your email address will not be published.