Fake Note: RBI ಬ್ಯಾಂಕ್‌ನಲ್ಲೇ ಪತ್ತೆಯಾಯ್ತು ನಕಲಿ ನೋಟು, ಯಾಮಾರಿದ್ರೆ ಜೈಲು ಊಟ ಗ್ಯಾರಂಟಿ ಎಚ್ಚರ!

Counterfeit Note found in RBI Bank

Counterfeit Note: ನಕಲಿ ನೋಟು ಇದೆ ಎಚ್ಚರ ಎಂದು ಆಗಾಗ ಅಲ್ಲಲ್ಲಿ ಮಾಹಿತಿ ನೀಡಲಾಗುತ್ತದೆ. ಆದರೆ ಸಾಮಾನ್ಯ ಜನರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದರ ಪರಿಣಾಮ RBI ಬ್ಯಾಂಕ್‌ನಲ್ಲೇ ನಕಲಿ ನೋಟು ಪತ್ತೆಯಾಗಿದೆ.

 

ಹೌದು, ಇನ್ನಾದರೂ ನೀವು ಯಾವುದೇ ನೋಟು ತೆಗೆದುಕೊಳ್ಳುವಾಗ ಎಚ್ಚರದಿಂದ ಇರಬೇಕು. ಜನರ ಕೈಯಿಂದ ಇರಲಿ, ಅಂಗಡಿ ಮಾರುಕಟ್ಟೆಯಲ್ಲಿ ಇರಲಿ, ಜೊತೆಗೆ ಬ್ಯಾಂಕ್‌ನಿಂದ ನೋಟು ಪಡೆಯುವಾಗ ಕೂಡ ನೀವು ನೋಟಿನ ಅಸಲಿ – ನಕಲಿ ಬಗ್ಗೆ ಎಚ್ಚರದಿಂದ ಇರಬೇಕು.

ಚುನಾವಣೆ ಹಿನ್ನೆಲೆಯಲ್ಲಿ ಎಷ್ಟೇ ನೀತಿ ಸಂಹಿತೆಗಳು ಜಾರಿಯಲ್ಲಿದ್ದರೂ, ಈ ಬಾರಿಯ ಚುನಾವಣೆಯಲ್ಲಿ ಹಣದ ಮಳೆಯೇ ಹರಿದಿದೆ. ಎಲ್ಲಾ ಪಕ್ಷಗಳ ಅನೇಕ ಅಭ್ಯರ್ಥಿಗಳು ಕೋಟಿ ಕೋಟಿ ಹಣವನ್ನು ವ್ಯಯಿಸಿದ್ದಾರೆ. ಮತದಾರರಿಗೆ, ಕಾರ್ಯಕರ್ತರಿಗೆ ಕಂತೆ ಕಂತೆ ನೋಟುಗಳು ರಾಜಕೀಯ ಪಕ್ಷಗಳಿಂದ ಸಿಕ್ಕಿದೆ ಎನ್ನಲಾಗ್ತಿದ್ದು, ಹೀಗಾಗಿ ಇದರಲ್ಲೂ ಖೋಟಾ ನೋಟು ಚಲಾವಣೆಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಖ್ಯವಾಗಿ ಚುನಾವಣೆ ಮುಗಿದ ಬೆನ್ನಲ್ಲೇ ಭಾರೀ ಖೋಟಾ ನೋಟು (Counterfeit Note) ಜಾಲ ಪತ್ತೆಯಾಗಿರುವ ಮಾಹಿತಿ ಸಿಕ್ಕಿದ್ದು ಅಲ್ಲದೆ, ಈ ಬಾರಿ ನಕಲಿ ನೋಟು ಪತ್ತೆಯಾಗಿರೋದು ಸ್ವತಃ ಬ್ಯಾಂಕ್‌ನಲ್ಲಿ.
ಹೌದು, ಆರ್‌ಬಿಐ ಬ್ಯಾಂಕ್‌ನಲ್ಲಿಯೇ ಖೋಟಾ ನೋಟು ಪತ್ತೆಯಾಗಿರುವ ಸುದ್ದಿ ತಿಳಿದು ಬಂದಿದೆ.

ಮಂಗಳೂರು ಮತ್ತು ಬೆಂಗಳೂರಿನ ಖಾಸಗಿ ಬ್ಯಾಂಕ್‌ಗಳಿಂದ ಬಂದ ಹಣದಲ್ಲಿ ಖೋಟಾ ನೋಟು ಪತ್ತೆಯಾಗಿದ್ದು, ಆರ್‌ಬಿಐ ಬ್ಯಾಂಕ್‌ಗೇ ಮೋಸ ಮಾಡಲು ಖಾಸಗಿ ಬ್ಯಾಂಕ್‌ಗಳು ಮುಂದಾಗಿದೆಯೇ ಎನ್ನುವ ಪ್ರಶ್ನೆ ಕೂಡ ಎದ್ದಿದೆ.

ಸದ್ಯ ಮಾರ್ಚ್‌ 21ರಂದು ಆರ್‌ಬಿಐಗೆ ಬಂದ ಹಣದಲ್ಲಿ ಖೋಟಾ ನೋಟು ಪತ್ತೆಯಾಗಿದ್ದು, ಹಣವನ್ನು ಪರಿಶೀಲನೆ ಮಾಡುವಾಗ ಈ ವಿಚಾರ ತಿಳಿದು ಬಂದಿದೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸರಿಗೆ ಆರ್‌ಬಿಐ ಬ್ಯಾಂಕ್‌ ಮ್ಯಾನೇಜರ್ ಅಂಜನಾ ಅವರು ದೂರು ನೀಡಿದ್ದಾರೆ.

ಆದರೆ ಸ್ಪಷ್ಟವಾಗಿ ಖೋಟಾ ನೋಟು ಹರಿದು ಬರಲು ಕಾರಣ ಏನು? ಇದರ ಮೂಲ ಎಲ್ಲಿ? ಅನ್ನೋದರ ಬಗ್ಗೆ ಪೊಲೀಸರು ತನಿಖೆ ನಡೆಸಿದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಇನ್ನಾದರೂ ಜನರು ಯಾವುದೇ ನೋಟು ತೆಗೆದುಕೊಳ್ಳುವಾಗ ಎಚ್ಚರದಿಂದ ಇರಬೇಕಾಗಿದೆ.

 

ಇದನ್ನು ಓದಿ: Arunkumar puttila: ಕರಾವಳಿಯಲ್ಲಿ ಬಿಜೆಪಿಗೆ ಬಲವಾಗಿ ಕಾಡಲಿದ್ದಾರ ಅರುಣ್ ಕುಮಾರ್ ಪುತ್ತಿಲ? ಪುತ್ತಿಲರ ಆ ನಿರ್ಧಾರ, ಬಿಜೆಪಿ ಪಾಳಯಾಕ್ಕೆ ಆಗುತ್ತ ಪ್ರಾಣ ಸಂಕಟ? 

Leave A Reply

Your email address will not be published.