Naleen Kumar Tweet: ಬಿಜೆಪಿ ಕಾರ್ಯಕರ್ತರ ಕೊಲೆ-ಹಲ್ಲೆ ಹಿನ್ನೆಲೆ ಕಟೀಲ್ ಟ್ವೀಟ್: ನಳಿನ್ ರನ್ನು ಪಕ್ಷಾತೀತವಾಗಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಜನ
Naleen Kumar Tweet about the murder-attack of BJP Candidates
Naleen Kumar Tweet: ಶಿವಮೊಗ್ಗದಲ್ಲಿ ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ನಡೆದಿದೆ. ಯಾದಗಿರಿಯಲ್ಲಿ ಮತ್ತು ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆಗಳು ನಡೆದಿವೆ. ನಮ್ಮ ಕಾರ್ಯಕರ್ತರ ಸಹನೆ ಮೀರಿದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂಬುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ.
ಇಂದು ಸಂಜೆ ಈ ಬಗ್ಗೆ ನಳೀನ್ ಕುಮಾರ್ ಟ್ವಿಟ್ (Naleen Kumar Tweet) ಮಾಡಿದ್ದಾರೆ. ” ಪ್ರಜಾಪ್ರಭುತ್ವದಲ್ಲಿ ಗೆಲುವು, ಸೋಲು ಸಾಮಾನ್ಯ. ಆದರೆ ಗೆಲುವಿನ ಮದದಲ್ಲಿ ಕಾಂಗ್ರೆಸ್ ಗೂಂಡಾಗಳು ಬಿಜೆಪಿ ಕಾರ್ಯಕರ್ತರ ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟ ಉಂಟು ಮಾಡುವುದನ್ನು ನೋಡಿಯೂ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳದೆ ಹೋದರೆ ನಮ್ಮ ಕಾರ್ಯಕರ್ತರ ಸಹನೆ ಮೀರಿದರೆ ಅದಕ್ಕೆ ರಾಜ್ಯ ಸರಕಾರವೇ ಹೊಣೆ ” ಎಂಬುದಾಗಿ ಹೇಳಿದ್ದಾರೆ.
ವಿಧಾನ ಸಭಾ ಚುನಾವಣೆಯ ಬೆನ್ನಲ್ಲೇ ಯಾದಗಿರಿಯಲ್ಲಿ ಪಾರ್ಕಿಂಗ್ ಜಾಗಕ್ಕಾಗಿ ಉಂಟಾದ ಜಗಳ, ಬಿಜೆಪಿ ಕಾರ್ಯಕರ್ತರ ಕೊಲೆಯಲ್ಲಿ ಅಂತ್ಯಗೊಂಡಿತ್ತು. ಬೆಂಗಳೂರಿನ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶರತ್ ಬಚ್ಚೇಗೌಡರ ಗೆಲುವು ಸಂಭ್ರಮಿಸುತ್ತಿದ್ದ ವೇಳೆಯಲ್ಲಿ ಜಗಳ ಉಂಟಾಗಿ, ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ ಕೊಲೆಯಾಗಿದ್ದರು.
ನಮ್ಮ ಕಾರ್ಯಕರ್ತರನ್ನು ಮುಟ್ಟಿದರೆ ಪರಿಣಾಮ ನೆಟ್ಟಗೆ ಇರಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವ್ರು ಟ್ವೀಟ್ ಮಾಡಿ ವಾರ್ನಿಂಗ್ ಕೊಡುತ್ತಿದ್ದ ಹಾಗೆ ಜನರು ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿ ಟ್ವೀಟ್ ಮಾಡಿದ್ದಾರೆ. ಒಬ್ಬ ಓದುಗರು,” ಕಟೀಲ್ ಅವರೇ ಚುನಾವಣೆಯಲ್ಲಿನ ಸೋಲು ಸಹಿಸಿ ಕೊಳ್ಳಲು ಆಗದೆ ಮತ್ತೆ ಕರ್ನಾಟಕದಲ್ಲಿ ಸಾವು ನೋವುಗಳನ್ನು ಉಂಟು ಮಾಡಿ ನಿಮ್ಮ ಬೇಳೆ ಬೇಯಿಸಿಕೊಳ್ಳುವ ಯೋಜನೆ ಫಲ ಕೊಡುವುದಿಲ್ಲ ” ಎಂದಿದ್ದಾರೆ.
ಮತ್ತೊಬ್ಬರು, ” ಏನಪ್ಪ ಕಟೀಲ್ ಸಾಹೇಬ್ರೆ, ಪರೋಕ್ಷವಾಗಿ ನಿಮ್ಮ ಕಾರ್ಯಕರ್ತರನ್ನು ಪ್ರಚೋದಿಸಿ ಗಲಭೆ ಸೃಷ್ಟಿಸೋ ಉನ್ನಾರಾನ, ಹಿಂಗೆ ಮಾಡಿ ಕರಾವಳಿಯಲ್ಲಿ ಹಿಂದೂ ಸಹೋದರರ ಬಲಿ ಪಡೆದು ರಾಜಕೀಯ ಮಾಡಿದ್ದನ್ನು ಇನ್ನೂ ಜನ ಮರೆತಿಲ್ಲ, ನಿಮ್ಮ ಕಾರು ಅಲುಗಾಡಿದ್ದನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ” ಎಂದು ಉತ್ತರಿಸಿದ್ದಾರೆ. ಹೆಚ್ಚಿನವರು ಖಾರವಾಗಿ, ” ಬೇಗನೆ ರಾಜೀನಾಮೆ ಕೊಟ್ಟು ತೊಲಗಿ…” ಎಂದಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಗೆಲುವು, ಸೋಲು ಸಾಮಾನ್ಯ. ಆದರೆ ಗೆಲುವಿನ ಮದದಲ್ಲಿ ಕಾಂಗ್ರೆಸ್ ಗೂಂಡಾಗಳು ಭಾಜಪಾ ಕಾರ್ಯಕರ್ತರ ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟ ಉಂಟು ಮಾಡುವುದನ್ನು ನೋಡಿಯೂ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳದೆ ಹೋದರೆ ನಮ್ನ ಕಾರ್ಯಕರ್ತರ ಸಹನೆ ಮೀರಿದರೆ ಅದಕ್ಕೆ ರಾಜ್ಯ ಸರಕಾರವೇ ಹೊಣೆ.
— Nalinkumar Kateel (@nalinkateel) May 15, 2023