Government Employees: ಕೇಂದ್ರ ಸರ್ಕಾರ ನೌಕರರೇ ಗಮನಿಸಿ! ವೇತನ ಹೆಚ್ಚಳ ನಿರೀಕ್ಷೆ ಈಡೇರಲಿದೆ!

Important information to Government employees fitment rate hike

Government Employees: ಕೇಂದ್ರ ಸರ್ಕಾರಿ ನೌಕರರಿಗೆ (Government Employees) ಪ್ರತಿ ವರ್ಷ ಎರಡು ಬಾರಿ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗುತ್ತದೆ. ಡಿಎ ಜನವರಿಯಲ್ಲಿ ಒಮ್ಮೆ ಮತ್ತು ಜುಲೈನಲ್ಲಿ ಮತ್ತೊಮ್ಮೆ ಹೆಚ್ಚಾಗುತ್ತದೆ. ಜನವರಿ 2023 ರ ಡಿಎ ಈಗಾಗಲೇ ಹೆಚ್ಚಾಗಿದೆ. ಈಗ ಮತ್ತೆ ಜುಲೈ 2023ನಲ್ಲಿ ಹೆಚ್ಚಾಗಬೇಕಿದೆ. .

ಈ ಬಾರಿ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳದ ಜೊತೆಗೆ ಮತ್ತೊಂದು ಶುಭ ಸುದ್ದಿ ಬರುವ ಸಾಧ್ಯತೆ ಇದೆ. ಡಿಎ ಹೆಚ್ಚಳದ ಜತೆಗೆ ಕೇಂದ್ರ ಸರ್ಕಾರ ಫಿಟ್ ಮೆಂಟ್ ಅಂಶವನ್ನೂ ಹೆಚ್ಚಿಸುವ ಸಾಧ್ಯತೆ ಇದೆ.

ಈಗಾಗಲೇ ಫಿಟ್ ಮೆಂಟ್ ಅಂಶ ಮೂರು ಪಟ್ಟು ಹೆಚ್ಚಿಸುವಂತೆ ಕೇಂದ್ರ ಸರ್ಕಾರಿ ನೌಕರರು ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನು ಇಟ್ಟಿದ್ದು, ಇದು ಜಾರಿಯಾದರೆ ನೌಕರರ ಕನಿಷ್ಠ ವೇತನ 26 ಸಾವಿರ ರೂಪಾಯಿ ಆಗಲಿದೆ.

ಈ ಮೊದಲು ಕನಿಷ್ಠ ವೇತನವನ್ನು 6 ಸಾವಿರದಿಂದ 18 ಸಾವಿರ ರೂಪಾಯಿಗಳಿಗೆ ಏರಿಕೆಯಾಗಿದೆ, ಏಳನೇ ವೇತನ ಆಯೋಗದ ಅನುಸಾರ ಫಿಟ್ ಮೆಂಟ್ ಅಂಶ ಪ್ರಸ್ತುತ 2.57 ರಷ್ಟಿದೆ. ಇದು 3.68% ಹೆಚ್ಚಾದ ಪಕ್ಷದಲ್ಲಿ ಭತ್ಯೆಯನ್ನು ಅಗತ್ಯವಿರುವ ವೇತನವೇ 95,680 ರೂಪಾಯಿಗಳು ಸಿಗಲಿದೆ ಎಂದು ಹೇಳಲಾಗಿದೆ. ಆದರೆ ಫಿಟ್ ಮೆಂಟ್ ಅಂಶ ಬಿಡುಗಡೆ ಕುರಿತು ಕೇಂದ್ರ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಸದ್ಯ ನೌಕರರ ಕನಿಷ್ಠ ವೇತನವೂ ಗಣನೀಯವಾಗಿ ಏರಿಕೆಯಾಗಲಿದ್ದು, ಫಿಟ್ ಮೆಂಟ್ ಅಂಶ ಹೆಚ್ಚಾದರೆ ಕನಿಷ್ಠ ವೇತನ ರೂ.18,000ದಿಂದ ರೂ.26,000ಕ್ಕೆ ಏರಿಕೆಯಾಗಲಿದೆ.

ಇದನ್ನೂ ಓದಿ:KCET Exam 2023: ಸಿಇಟಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ‘ಕೆಇಎ’ಯಿಂದ ಮಹತ್ವದ ಸುತ್ತೋಲೆ!

Leave A Reply

Your email address will not be published.