Mallikarjuna Kharge: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಕೋರ್ಟ್‌ ಸಮನ್ಸ್‌! ಪಿಎಫ್‌ಐ ಸಂಘಟನೆಗೆ ಬಜರಂಗದಳ ಹೋಲಿಕೆ ಪ್ರಕರಣ!

Comparison to Bajarang dal pfi court issued summons to AICC President mallikarjuna Kharge

Mallikarjuna Kharge: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಕೋರ್ಟ್‌ ಸಮನ್ಸ್‌ ನೀಡಿದೆ. ಬಜರಂಗದಳವನ್ನು ಪಿಎಫ್‌ಐ ಸಂಘಟನೆಗೆ ಹೋಲಿಕೆ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಸಮನ್ಸ್‌ ನೀಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಿಶ್ವ ಹಿಂದೂ ಪರಿಷತ್‌ ಚಂಡೀಗಡ ಘಟಕವು 100 ಕೋಟಿ ರೂಪಾಯಿ ಮಾನಹಾನಿ ಪರಿಹಾರ ಕೋರಿ ನೋಟಿಸ್‌ ಜಾರಿ ಮಾಡಿತ್ತು.

 

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ( Mallikarjuna Kharge) ಅವರಿಗೆ ಬಜರಂಗದಳ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಕುರಿತಂತೆ ಪಂಜಾಬ್‌ನ ಸಂಗ್ರೂರ್‌ ನ್ಯಾಯಾಲಯ ಸೋಮವಾರ ಸಮನ್ಸ್‌ ಜಾರಿ ಮಾಡಿದೆ. ಬಜರಂಗದಳ ಸಂಘಟನೆಯನ್ನು ಖರ್ಗೆಯವರು ಪಿಎಫ್‌ಐ ಜೊತೆ ಹೋಲಿಕೆ ಮಾಡಿದ್ದರು ಮಲ್ಲಿಕಾರ್ಜುನ ಖರ್ಗೆಯವರು. ವಿಶ್ವ ಹಿಂದೂ ಪರಿಷತ್‌ನ ಚಂಡೀಗಡ ಘಟಕ ಮತ್ತು ಅದರ ಯುವ ಘಟಕ ಬಜರಂಗ ದಳ ಮೇ 4ರಂದು ನೋಟಿಸ್ ಜಾರಿ ಮಾಡಿದ್ದು, 14 ದಿನಗಳ ಒಳಗೆ 100.10 ಕೋಟಿ ರೂ ಪರಿಹಾರ ನೀಡುವಂತೆ ಒತ್ತಾಯಿಸಿತ್ತು.

ಕಾಂಗ್ರೆಸ್‌ ಇತ್ತೀಚೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ, ಧರ್ಮದ ಆಧಾರದಲ್ಲಿ ಸಮಾಜದಲ್ಲಿ ದ್ವೇಷ ಹರಡುತ್ತಿರುವ ಆರೋಪ ಎದುರಿಸುತ್ತಿರುವ ಬಜರಂಗದಳ, ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡುವುದಾಗಿ ಹೇಳಿತ್ತು. ಆದರೆ ಕಾಂಗ್ರೆಸ್‌ ಬಜರಂಗದಳವನ್ನು ಪಿಎಫ್‌ಐ, ಸಿಮಿ ಮುಂತಾದ ನಿಷೇಧಿತ ಸಂಘಟನೆಗಳಿಗೆ ಹೋಲಿಕೆ ಮಾಡಿರುವುದು ಮಾನಹಾನಿಕರ ಎಂದು ವಿಎಚ್‌ಪಿ ಪರ ವಕೀಲರು ದೂರಿದ್ದರು.

ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಸ್ನೇಹಿತನಿಂದ ಕಾರು ಚಾಲನೆ, ಬಿಎಂಡಬ್ಲ್ಯೂ ಕಾರು-ಬಿಎಂಸಿ ಟ್ರಕ್‌ಗೆ ಡಿಕ್ಕಿ! ಗಗನಸಖಿ ದಾರುಣ ಸಾವು

Leave A Reply

Your email address will not be published.