Actress Kushbhu Sundar: ನನ್ನ ಗಂಡ ಹಿಂದೂ, ನಾನಿನ್ನೂ ಮುಸ್ಲಿಂ ಆಗಿಯೇ ಇದ್ದೇನೆ : ನಟಿ ಖುಷ್ಬೂ!!

My Husband Hindu I am also a Muslim Actress Kushbhu Sundar

Share the Article

Actress Kushbhu Sundar: ಸಿನಿಮಾರಂಗದಲ್ಲಿ ವಾಗ್ಯುದ್ಧಗಳು ನಡೆಯುತ್ತಲೇ ಇರುತ್ತದೆ.‌ ಈಗಾಗಲೇ ಸಮಂತಾ-ನಿರ್ಮಾಪಕರ ನಡುವೆ ವಾಕ್ಸಮರ ನಡೆಯುತ್ತಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂತೆಯೇ ಇದೀಗ ನಟಿ ಖುಷ್ಭೂ (Khushbhu) ಹಾಗೂ ಕೆ.ಆರ್.ಕೆ ಅಲಿಯಾಸ್ ಕಮಾಲ್ ಆರ್ ಖಾನ್ (Kamal Khan) ನಡುವೆ ವಾಗ್ಯುದ್ಧ ನಡೆಯುತ್ತಿದೆ.

ಕೆ.ಆರ್.ಕೆ ಬಾಲಿವುಡ್ ಚಿತ್ರೋದ್ಯಮದ ಬಗ್ಗೆ ಸದಾ ಕೊಂಕು, ವ್ಯಂಗ್ಯ ಮಾತುಗಳನ್ನಾಡುತ್ತಾ ನಟ, ನಟಿಯರನ್ನು ಬಡಿದೆಬ್ಬಿಸುತ್ತಿರುತ್ತಾರೆ.
ಈ ಬಾರಿ ಕೆ.ಆರ್.ಕೆ ನಟಿ ಖುಷ್ಭೂಗೆ (Actress Kushbhu Sundar) ಪ್ರಶ್ನೆ ಮಾಡಿದ್ದು, “ ನೀವು ಹಿಂದೂ (Hindu) ಧರ್ಮಕ್ಕೆ ಮತಾಂತರಗೊಂಡಿದ್ದೀರಾ? ಮತಾಂತರ ಆದ ನಂತರ ನಿಮ್ಮ ಹೆಸರನ್ನು ಖುಷ್ಭೂ ಅಂತ ಬದಲಾಯಿಸಿಕೊಂಡಿದ್ದೀರಾ? ನಖತ್ ಎಂದಿದ್ದ ನಿಮ್ಮ ಹೆಸರು ಖುಷ್ಣೂ ಅಂತ ಬದಲಾಗಿದ್ದು ಯಾವಾಗ? ” ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಖಾರವಾಗಿ ಉತ್ತರಿಸಿದ ಖುಷ್ಭೂ, ”ನೀವು ನನ್ನ ಹೆಸರು ನಿಖಿತ್ ಎಂದು ಬರೆದಿದ್ದೀರಿ. ಆದರೆ, ನನ್ನ ಹೆಸರು ನಖತ್. ಈ ಹೆಸರಿನ ಅರ್ಥ ಖುಷ್ಭೂ ಅಂತಾನೆ. ಖುಷ್ಭೂ ಅಂತ ಹೆಸರಿಟ್ಟಿದ್ದು ಬಿ.ಆರ್.ಚೋಪ್ರಾ ಅವರು. ಹಾಗೇ ನಿಮಗೆ ವಿಶೇಷ ಮದುವೆ ಕಾಯ್ದೆ ಬಗ್ಗೆ ಗೊತ್ತಾ? ನಾನು ಆ ಕಾಯ್ದೆಯಡಿಯಲ್ಲೇ ಮದುವೆ ಆಗಿದ್ದೇನೆ. ನನ್ನ ಗಂಡ ಹಿಂದೂ ಆಗಿ, ನಾನಿನ್ನೂ ಮುಸ್ಲಿಂ (Muslim) ಆಗಿಯೇ ಇದ್ದೇನೆ. ನನ್ನ ಗಂಡ ನನ್ನ ಅರ್ಧ ಜೀವ. ಹಾಗಾಗಿ ಅವರ ಹೆಸರು ಸೇರಿಸಿಕೊಂಡಿದ್ದೇನೆ” ಎಂದು ಪ್ರತ್ಯುತ್ತರ ನೀಡಿದರು.

ಇದನ್ನೂ ಓದಿ:7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಡಬಲ್ ಧಮಾಕಾ ; ತುಟ್ಟಿಭತ್ಯೆ ಜೊತೆಗೆ ಫಿಟ್ ಮೆಂಟ್ ಅಂಶವೂ ಹೆಚ್ಚಳ!!

Leave A Reply