Bhatkala: ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿಸಿ ಕಾಂಗ್ರೆಸ್ ಗೆಲುವು ಸಂಭ್ರಮಿಸಿದ ಯುವಕರು! ನಾಡಿನಾದ್ಯಂತ ವ್ಯಾಪಕ ಖಂಡನೆ!
Muslim youths put up islam flag next to saffron flag in Bhatkal viral video
Bhatkala viral video: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ(Karnataka Assembly Election)ಕಾಂಗ್ರೆಸ್(Congress) ಗೆ ಬಹುಮತ ಸಿಕ್ಕಿದ್ದು, ಭಟ್ಕಳ(Bhatkala) ದಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಾಗಿದೆ. ಹೀಗಾಗಿ ಕಾಂಗ್ರೆಸ್ ಗೆಲುವನ್ನು ಸಂಭ್ರಮಿಸಲು ಮುಸ್ಲಿಂ(Muslim) ಯುವಕರು ಕೇಸರಿ ಧ್ವಜವನ್ನು ಪಕ್ಕದಲ್ಲಿ ಇಸ್ಲಾಂ ಧ್ವಜವನ್ನು ಹಿಡಿದು ಕುಣಿದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ (Bhatkala viral video) ಆಗ್ತಿದ್ದು, ವ್ಯಪಕಾ ಖಂಡನೆ ವ್ಯಕ್ತವಾಗುತ್ತಿದೆ.
ಹೌದು, ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ. ಇನ್ನು ಭಟ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ(Mankalu Vaidya) ಗೆದ್ದ ಬೆನ್ನಲ್ಲೇ ಸಂಭ್ರಮಾಚರನೆ ಮುಗಿಲು ಮುಟ್ಟಿದ್ದು ಈ ವೇಳೆ ಯುವಕನೊಬ್ಬ ಮುಸ್ಲಿಂ ಧ್ವಜವನ್ನು ಹಾರಿಸಿದ್ಧಾನೆ. ಅದು ಕೂಡ ವೈರಲ್ ಆದ ವಿಡಿಯೋದಲ್ಲಿ ಕೇಸರಿ ಬಾವುಟವನ್ನು ಪಕ್ಕಕ್ಕೆ ಸರಿಸಿ, ಕೆಳಮುಖವಾಗಿ ಹಾರಿಸಿದಂತೆ ತೋರುತ್ತಿದೆ.
ಅಂದಹಾಗೆ ಭಟ್ಕಳ ಸಂಶುದ್ದಿನ್ ಸರ್ಕಲ್(Samshuddin Circle) ಮೇಲೆ ನಿಂತು ಕೇಸರಿ ಭಾವುಟ ಪಕ್ಕದಲ್ಲಿ ಇಸ್ಲಾಂ ಪ್ಲ್ಯಾಗ್ ಹಿಡಿದು ಸಂಭ್ರಮಾಚರಣೆ ನಡೆಸಲಾಗಿದೆ. ಇದರ ಜೊತೆಗೆ ಮಂಕಾಳು ವೈದ್ಯ ಭಾವಚಿತ್ರವಿರುವ ಧ್ವಜ, ಅಂಬೇಡ್ಕರ್‌ರ(Ambedkar) ಧ್ವಜದೊಂದಿಗೆ ಮುಸ್ಲಿಂ ಧ್ವಜ ಪ್ರದರ್ಶನ ಮಾಡಿ ವೃತ್ತದಲ್ಲಿ ಹಾಕಲಾಗಿದ್ದ ಕೇಸರಿ ಧ್ವಜದ ಪಕ್ಷದಲ್ಲೇ ಮುಸ್ಲಿಂ ಧ್ವಜ ಹಾಕಿದ್ದಾರೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದ್ದು, ಆಕ್ರೋಶವೂ ವ್ಯಕ್ತವಾಗುತ್ತಿದೆ.
ಇನ್ನು ಯುವಕರ ಈ ಕಾರ್ಯಕ್ಕರ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು ಅವರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಯುವಕರ ನಡೆಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ಧಾರೆ.
ಅಲ್ಲದೆ ಕಾಂಗ್ರೆಸ್ಗೆ ಬಹುಮತ ಬಂದಿದ್ದೇ ತಡ, ಇದರ ಸಂತೋಷಕ್ಕೆ ಭಟ್ಕಳದಲ್ಲಿ ಇಸ್ಲಾಂ ಧ್ವಜ ಹಾರಿಸಲಾಯಿತು. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸಮಾಜಘಾತುಕ ಸಂದೇಶಗಳನ್ನು ರವಾನಿಸಲಾಗುತ್ತಿದೆ. “ಹಿಂದೂಗಳ ಹೆಣ ಎತ್ತಲೂ ಯಾರೂ ಇರಬಾರದು. ಕರ್ನಾಟಕದಲ್ಲಿ ಇನ್ನು ಮುಂದೆ ಮುಸ್ಲಿಂ ಹವಾ, ಅಲ್ಲಾಹು ಅಕ್ಬರ್” ಮುಸ್ಲಿಂ ಯುವಕನೊಬ್ಬ ಮಾಡಿದ ಕಾಮೆಂಟ್ನ ಸ್ಕ್ರೀನ್ಶಾಟ್ ವಾಟ್ಸ್ಆ್ಯಪ್ಗಳಲ್ಲಿ ಹರಿದಾಡುತ್ತಿದೆ.
Provocative slogans raised in Belagavi… Police watches on as Congress gets ready to form Govt in Karnataka…
From Bhatkal to Belagavi, this is what ‘मोहब्बत की दुकान’ looks like… Congress’s politics of appeasement will rip the social fabric of Karnataka… pic.twitter.com/ZuzTiRrFs7
— Amit Malviya (@amitmalviya) May 13, 2023