Jayanagar Constituency: ಗೆದ್ದ ಅಭ್ಯರ್ಥಿಗೆ ಮಧ್ಯರಾತ್ರಿ ಸೋಲು, ಒಟ್ಟು 6 ಬಾರಿ ಮತ ಎಣಿಕೆ ನಡೆದು 16 ಮತಗಳಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ !

Karnataka elections results 2023 BJP wins in Jayanagar Constituency

Jayanagar Constituency: ಒಟ್ಟು ಆರು ಬಾರಿ ಮತದ ಎಣಿಕೆ ನಡೆದು ಹೈಡ್ರಾಮಾದ ಬಳಿಕ ಫಲಿತಾಂಶ ಪ್ರಕಟಿಸಿದ ವಿಶೇಷ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೊದಲು ಜಯಶಾಲಿ ಎಂದು ಘೋಷಿಸಲ್ಪಟ್ಟ ಅಭ್ಯರ್ಥಿ ಕೊನೆಗೆ ಪೇಚು ಮುಖ ಹಾಕಿಕೊಂಡು ಸೋತು ಮನೆಗೆ ಹೋಗುವಂತಾಗಿದೆ.

 

ಈ ಘಟನೆ ಬೆಂಗಳೂರಿನ ಜಯನಗರ ಕ್ಷೇತ್ರದ (Jayanagar Constituency) ಫಲಿತಾಂಶ ದಲ್ಲಿ ನಡೆದಿದ್ದು, ಕೇವಲ16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಶಾಸಕಿ ಸೌಮ್ಯ ರೆಡ್ದಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮೊದಲು ಗೆದ್ದರೆಂದು ಘೋಷಿಸಲ್ಪಟ್ಟಿದ್ದ ಸೌಮ್ಯ ರೆಡ್ಡಿ ಕೊನೆಗೆ ಸೋತು ಹೋಗಿದ್ದರು.

ನಿನ್ನೆ ಮಧ್ಯರಾತ್ರಿ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರು ಕಾಂಗ್ರೆಸ್ ಪಕ್ಷದ ಸೌಮ್ಯಾ ರೆಡ್ಡಿ ವಿರುದ್ಧ 16 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಮತ ಎಣಿಕೆಯ ಅಂತಿಮ ಸುತ್ತಿನಲ್ಲಿ ಸೌಮ್ಯಾ ರೆಡ್ಡಿ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಅವರಿಗಿಂತ ಇವಿಎಂ ಯಂತ್ರದಲ್ಲಿ 294 ಮತಗಳ ಅಂತರದಿಂದ ಮುನ್ನಡೆ ಪಡೆದುಕೊಂಡರು. ಅಲ್ಲದೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು. ಅಂಚೆ ಮತಗಳ ಎಣಿಕೆಯಲ್ಲಿ ಸೌಮ್ಯ ರೆಡ್ಡಿ 160 ಮತಗಳ ಮುನ್ನಡೆ ಪಡೆದುಕೊಂಡಿದ್ದರು.

ಆಗ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಮರು ಮತ ಎಣಿಕೆ ಮಾಡುವಂತೆ ಪಟ್ಟು ಹಿಡಿದಾಗ ಚುನಾವಣಾ ಅಧಿಕಾರಿಗಳು ಕೋರಿಕೆ ನಿರಾಕರಿಸಿದರು. ಮಧ್ಯಪ್ರವೇಶಿಸಿದ ಸಂಸದ ತೇಜಸ್ವಿ ಸೂರ್ಯ ಮರು ಮತ ಎಣಿಕೆಗೆ ಮನವಿ ಮಾಡಿದ್ದರಿಂದ ಪುನಃ ಮತ ಎಣಿಕೆ ಆರಂಭಿಸಲಾಯಿತು. ಮಾಹಿತಿ ತಿಳಿದ ಸೌಮ್ಯಾ ರೆಡ್ಡಿ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಬೆಂಬಲಿಗರು, ಕಾರ್ಯಕರ್ತರು ಕೂಡ ಮತ ಎಣಿಕೆ ಕೇಂದ್ರದ ಮುಂದೆ ಜಮಾಯಿಸಿದರು. ಅಲ್ಲಿ ಎರಡು ಅಭ್ಯರ್ಥಿಗಳು ಆತಂಕದಿಂದ ಇರುವುದು ಕಂಡುಬಂದರು.

ಮತ್ತೆ ನಡೆದ ಮರು ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಅವರು ಸೌಮ್ಯಾ ರೆಡ್ಡಿ ಅವರಿಗಿಂತ 16 ಮತಗಳ ಮುನ್ನಡೆ ಸಾಧಿಸಿದರು. ಇದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿ ಒಟ್ಟು 4 ಸಲ ಮರು ಮತ ಎಣಿಕೆ ನಡೆಸಲಾಯಿತು. ನಂತರದ ಎಲ್ಲಾ ಮತ ಎಣಿಕೆಗಳಲ್ಲೂ ಕೇವಲ 16 ಮತಗಳ ಅಂತರ ಕಂಡು ಬಂತು. ಹಾಗಾಗಿ ಬಿಜೆಪಿ ಅಭ್ಯರ್ಥಿ 16 ಮತಗಳಿಂದ ಜಯಗಳಿಸಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ ಒಟ್ಟು ಆರು ಬಾರಿ ಜಯನಗರದಲ್ಲಿ ಮತ ಎಣಿಕೆ ನಡೆಸಿದಂತಾಗಿದೆ.

ಜಯನಗರದಲ್ಲಿ ಮರು ಮತ ಎಣಿಕೆ ಗೊಂದಲ ಉಂಟಾಗಿದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ. ಸುರೇಶ್ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಡಿ.ಕೆ. ಸುರೇಶ್ ರನ್ನು ಮತ ಎಣಿಕಾ ಕೇಂದ್ರದ ಒಳಬಿಡಲು ಪೊಲೀಸರು ನಿರಾಕರಿಸಿದ್ದರಿಂದ ವಾಗ್ವಾದ ಮಾತಿನ ಚಕಮತಿ ನಡೆದಿದೆ. ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ.

16 ಮತಗಳಿಂದ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ. ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರಕಟಿಸಲಾಗಿದೆ. ಜಯನಗರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು, ‘ ಮೊದಲ ಬಾರಿ ಮತ ಎಣಿಕೆಯಲ್ಲಿ ನನಗೆ ಗೆಲುವಾಗಿತ್ತು. ತೇಜಸ್ವಿ ಸೂರ್ಯ, ಅಶೋಕ್ ಅಕ್ರಮವಾಗಿ ಮತ ಎಣಿಕೆ ಕೊಠಡಿಗೆ ಪ್ರವೇಶಿಸಿದ್ದಾರೆ. ಅಕ್ರಮವಾಗಿ ಬಂದು ಬಿಜೆಪಿ ಅಭ್ಯರ್ಥಿ ಗೆಲ್ಲುವಂತೆ ಮಾಡಿದ್ದಾರೆ ‘ ಎಂದು ತಿಳಿಸಿದ್ದು, ಕೇಂದ್ರ ಚುನಾವಣಾ ಆಯೋಗಕ್ಕೆ ಇಂದು ದೂರು ನೀಡಲಿದ್ದಾರೆ. ಗೆದ್ದು ಖುಷಿ ಪಟ್ಟ ಅಭ್ಯರ್ಥಿಗೆ ಕೊನೆಗೆ ಸೋಲಾಗಿದ್ದು ಮರು ಮತ್ತು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಶಾಲಿಯಾಗಿದ್ದಾರೆ. ಗೆದ್ದ ಅಭ್ಯರ್ಥಿ ಸೋಲುವುದು ಮತ್ತು ಎಲೆಕ್ಟ್ರಾನಿಕ್ ಮತ ಎಣಿಕೆಗಳಲ್ಲಿ ತಪ್ಪು ಲೆಕ್ಕ ಆಗುವುದು ಹೇಗೆ ಸಾಧ್ಯ ಎನ್ನುವುದು ಮತದಾರರಲ್ಲಿ ಗೊಂದಲ ಮೂಡಿಸಿದೆ.

ಇದನ್ನೂ ಓದಿ:Kiccha Sudeep: ಕಿಚ್ಚ ಸುದೀಪ್ ಹೋದಲೆಲ್ಲಾ ಸೋಲು?, ಹೀಗಂದ್ರು ಮಾಜಿ ಸಿಎಂ ಬೊಮ್ಮಾಯಿ!!

Leave A Reply

Your email address will not be published.