Honnali Renukacharya: ಹೊನ್ನಾಳಿ ಶಾಸಕ ರೇಣುಕಾಚಾರ್ಯ ರಾಜಕೀಯ ನಿವೃತ್ತಿ ಘೋಷಣೆ, ಕೆಲಸ ಮಾಡಿದರೂ ಸೋಲಿಸಿದ ಬಗ್ಗೆ ತೀವ್ರ ಬೇಸರದ ಹಿನ್ನೆಲೆ !
Honnali MLA Renukacharya's announcement of political retirement,
Honnali Renukacharya: ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ರೇಣುಕಾಚಾರ್ಯ ಸೋಲನುಭವಿಸಿದ್ದಾರೆ. ತಾವು ಜನ ಸೇವೆ ಮಾಡಿದರೂ ತಮ್ಮನ್ನು ಜನ ತಮ್ಮನ್ನು ಸೋಲಿಸಿದ ಕಾರಣದಿಂದ ನೊಂದ ಅವರು ಚುನಾವಣೆ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ನಿನ್ನೆ ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಬೆಂಬಲಿಗರ ಜೊತೆಗೆ ಮಾತನಾಡಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯನವರು (Honnali Renukacharya) ತಮ್ಮ ಸೋಲಿಗೆ ಬೇಸರ ವ್ಯಕ್ತಡಿಸಿದ್ದಾರೆ. ‘ ನಾನು ಹೊನ್ನಾಳಿ ಕ್ಷೇತ್ರದಲ್ಲಿ ಕೋವಿಡ್ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇನೆ. ಇಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರೂ ಜನರು ನನ್ನನ್ನು ಸೋಲಿಸಿದ್ದಾರೆ ‘ ಎಂದು ಅವರು ಭಾವುಕರಾಗಿದ್ದಾರೆ. ‘ ಇನ್ಮುಂದೆ ನಾನು ಚುನಾವಣಾ ರಾಜಕೀಯದಲ್ಲಿ ಮುಂದುವರೆಯುವುದಿಲ್ಲ. ನಾನು ಮುಂದಿನ ದಿನಗಳಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ, ಬಿಜೆಪಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ವಿಧಾನಸಭಾ ಕ್ಷೇತ್ರದಲ್ಲಿ ಹೊನ್ನಾಳಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಪಿ. ರೇಣುಕಾಚಾರ್ಯ, ಕಾಂಗ್ರೆಸ್ ಅಭ್ಯರ್ಥಿ ಡಿ.ಜೆ. ಶಾಂತನಗೌಡ ವಿರುದ್ಧ ಅನಿರೀಕ್ಷಿತ ಸೋಲು ಕಂಡಿದ್ದಾರೆ. ತಾನು ಕೆಲಸ ಮಾಡಿದರೂ ಸೋತ ಅವರು ಈ ಸೋಲಿನಿಂದ ಬೇಸರಗೊಂಡು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಇದನ್ನೂ ಓದಿ: ಗೆದ್ದ ಅಭ್ಯರ್ಥಿಗೆ ಮಧ್ಯರಾತ್ರಿ ಸೋಲು, ಒಟ್ಟು 6 ಬಾರಿ ಮತ ಎಣಿಕೆ ನಡೆದು 16 ಮತಗಳಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ !