Madhyapradesh: ತಿಂಗಳಿಗೆ 30,000 ಸಂಬಳ ಪಡೆಯೋ ಲೇಡಿ ಇಂಜಿನಿಯರ್ ಮನೆ ಮೇಲೆ ರೇಡ್! 20 ಕಾರು, 100 ನಾಯಿ, 30 ಲಕ್ಷದ ದುಬಾರಿ ಟಿವಿ ಪತ್ತೆ!

Raid on MP engineer

Raid on MP engineer: 30,000 ರೂ. ಸಂಬಳ ಗಳಿಸುತ್ತಿದ್ದ ಸರ್ಕಾರಿ ಅಧಿಕಾರಿಯ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 20 ಕಾರುಗಳು, 100 ನಾಯಿಗಳು, 30 ಲಕ್ಷ ಟಿವಿ ಹೀಗೆ 7 ಕೋಟಿ ರೂ.ಅಕ್ರಮ ಆಸ್ತಿ ಪತ್ತೆಯಾಗಿದೆ.

ಹೌದು, ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ (Madhya Pradesh) ಲೋಕಾಯುಕ್ತ ಪೊಲೀಸರು ಭೋಪಾಲ್‌ನ ಮಹಿಳಾ ಸಹಾಯಕ ಎಂಜಿನಿಯರ್ ಮನೆ ಮೇಲೆ ದಾಳಿ ನಡೆಸಿದರು (Raid on MP engineer). ಈ ವೇಳೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರಿಗೆ (Lokayukta Police) ಶಾಕ್‌ ಆಗಿದೆ.

ಯಾಕೆಂದರೆ ತಿಂಗಳಿಗೆ 30,000 ರೂ. ಸಂಬಳ ಪಡೆಯುವ ಮಧ್ಯಪ್ರದೇಶ ಸರ್ಕಾರಿ ಅಧಿಕಾರಿ ಹೇಮಾ ಮೀನಾ(Hema Meena) ಅವರ ಮೇಲೆ ನಡೆದ ದಾಳಿಯಲ್ಲಿ, ಲೋಕಾಯುಕ್ತ ವಿಶೇಷ ಪೊಲೀಸ್ ಸ್ಥಾಪನಾ ತಂಡವು ಸುಮಾರು 7 ಕೋಟಿ ರೂ.ಮೌಲ್ಯದ ಆಸ್ತಿಯಲ್ಲಿ 20 ಕಾರುಗಳು ಮತ್ತು 30 ಲಕ್ಷದ ರೂ. 98 ಇಂಚಿನ ಟಿವಿಯನ್ನು ಪತ್ತೆ ಮಾಡಿದೆ. ದನಗಳು, 100 ನಾಯಿಗಳು, ಆಕೆಯ ತಂದೆಯ ಹೆಸರಿನಲ್ಲಿ 20,000 ಚದರ ಅಡಿ ಜಮೀನು ಮತ್ತು ಲಕ್ಷಾಂತರ ಮೌಲ್ಯದ ಯಂತ್ರಗಳು ಸಹ ಪತ್ತೆಯಾಗಿವೆ. ಕಟಾವು ಯಂತ್ರ, ಭತ್ತ ಬಿತ್ತನೆ ಯಂತ್ರ, ಟ್ರ್ಯಾಕ್ಟರ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಉಪಕರಣಗಳನ್ನು ಖರೀದಿಸಿರುವುದು ಪತ್ತೆಯಾಗಿದೆ. ಇದೀಗ ಲೋಕಾಯುಕ್ತ ಪೋಲೀಸರು ಇದೆಲ್ಲವನ್ನು ವಶಕ್ಕೆ ಪಡೆದಿದ್ದಾರೆ.

ಅಂದಹಾಗೆ 2020 ರಲ್ಲಿ ಹೇಮಾ ಮೀನಾ ವಿರುದ್ಧ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ದೂರು ಸ್ವೀಕರಿಸಲಾಗಿದೆ. ದೂರು ಸ್ವೀಕರಿಸಿದ ನಂತರ ತನಿಖೆ ಆರಂಭಿಸಲಾಗಿದ್ದು, ಗುರುವಾರ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಡಿಎಸ್ಪಿ ಸಂಜಯ್ ಶುಕ್ಲಾ ತಿಳಿಸಿದ್ದಾರೆ.

ಹೇಮಾ ಮೀನಾ ಭೋಪಾಲ್(Bhopal) ಬಳಿಯ ಬಿಲ್ಖಿರಿಯಾ(Bhilkiriya)ದಲ್ಲಿ ನಿರ್ಮಿಸಲಾದ 40 ಕೋಣೆಗಳ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇದರ ಬೆಲೆ 1 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಇದಲ್ಲದೇ ಆಕೆಯ ಫಾರ್ಮ್ ಹೌಸ್‌ನಲ್ಲಿ ಪಿಟ್ ಬುಲ್(Pit Bull), ಡೋಬರ್ ಮನ್(Dober Man) ಸೇರಿದಂತೆ 50ಕ್ಕೂ ಹೆಚ್ಚು ವಿದೇಶಿ ತಳಿಯ ನಾಯಿಗಳು ಪತ್ತೆಯಾಗಿದ್ದು, ಇವುಗಳ ಬೆಲೆ ಲಕ್ಷ ಲಕ್ಷ. ಅಲ್ಲದೇ ವಿವಿಧ ತಳಿಯ ಸುಮಾರು 60, 70 ಹಸುಗಳು ಸಹ ಪತ್ತೆಯಾಗಿವೆ. ದಾಳಿ ವೇಳೆ ಆಕೆಯ ನಿವಾಸದಲ್ಲಿ 2.50 ಲಕ್ಷ ರೂ. ಮೌಲ್ಯದ ರೊಟ್ಟಿ ತಯಾರಿಸುವ ಯಂತ್ರ ಕೂಡ ಪತ್ತೆಯಾಗಿದೆ. ನಾಯಿಗಳಿಗೆ ಆಹಾರಕ್ಕಾಗಿ ರೊಟ್ಟಿ ತಯಾರಿಸಲು ಯಂತ್ರವನ್ನು ಬಳಸಲಾಗುತ್ತಿತ್ತು ಎಂಬುದು ತಿಳಿದು ಬಂದಿದೆ.

ಇನ್ನು ಮದುವೆಯಾಗಿ ವಿಚ್ಛೇದನ ಪಡೆದಿರುವ ಹೇಮಾ ಮೀನಾ ಮಧ್ಯಪ್ರದೇಶದ(Madhyapradesh) ರೈಸನ್(Raisun) ಜಿಲ್ಲೆಯ ಚಪ್ನಾ(Chapna) ಗ್ರಾಮದ ನಿವಾಸಿಯಾಗಿದ್ದಾರೆ. ಆಕೆಗೆ 2011 ರಲ್ಲಿ ಗುತ್ತಿಗೆಯ ಕೆಲಸ ಸಿಕ್ಕಿತು. ಪ್ರಸ್ತುತ ಅವರು MPPHC ಯ ಸಹಾಯಕ ಇಂಜಿನಿಯರ್ ಆಗಿ ನೇಮಕಗೊಂಡಿದ್ದಾರೆ.

Leave A Reply

Your email address will not be published.