Karnataka Assembly election 2023- ಬಿಜೆಪಿಯ ಹೀನಾಯ ಸೋಲಿಗೆ ಕಾರಣಗಳೇನು? ಕಾಂಗ್ರೆಸ್ ಗೆದ್ದು ಭೀಗಲು ನೆರವಾದ ಅಂಶಗಳಾವು?

Karnataka Assembly election Result :ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ(Karnataka Assembly election Result) ಹೊರಬಿದ್ದಿದು, ಗೆದ್ದೇ ಗೆಲ್ಲುತ್ತೇನೆಂದು ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಬಿಜೆಪಿಯ(BJP) ಡಬಲ್​ ಇಂಜಿನ್​​(Dubl Engine) ಸರ್ಕಾರದ ಲೆಕ್ಕಾಚಾರ ತಲೆಕೆಳಗಾಗಿದ್ದು, ಹೀನಾಯವಾಗಿ ಸೋಲು ಕಂಡಿದೆ. ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್(Congress) ಭರ್ಜರಿ ಬಹುಮತ ಪಡೆದಿದೆ. ಕಾಂಗ್ರೆಸ್ ನಾಯಕರು ಗೆಲುವಿನ ಸಂಭ್ರಮದಲ್ಲಿದ್ದಾರೆ. ಆದರೆ ಇದೀಗ ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್‌ ಅಧಿಕಾರ ಹಿಡಿಯಲು ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದೆ.

 

 

ಅಂದಹಾಗೆ ರಾಜ್ಯದಲ್ಲಿ ಕಾಂಗ್ರೆಸ್​​ 136 ಸ್ಥಾನ ಪಡೆದು ಸರ್ಕಾರ ರಚಿಸೋ ಎಲ್ಲಾ ಅರ್ಹತೆ ಪಡೆದರೆ ಬಿಜೆಪಿ 65, ಜೆಡಿಎಸ್ ​19, ಇತರ 4 ಸ್ಥಾನಗಳು ಬಂದಿದೆ. ಕಾಂಗ್ರೆಸ್​​ ಹೆಚ್ಚಿನ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕವಾಗಿ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಯಭೇರಿ ಬಾರಿಸಿದೆ. ಬಿಜೆಪಿ ಈಗಾಗಲೇ ಸೋಲೊಪ್ಪಿಕೊಂಡಿದೆ. ಬಿಜೆಪಿಯ ಪಕ್ಷದಲ್ಲಿರುವ ಅನೇಕ ಘಟಾನುಘಟಿ ನಾಯಕರುಗಳೇ ಹೀನಾಯವಾಗಿ ಸೋಲು ಕಂಡಿದ್ದಾರೆ. ಈ ನಾಯಕರುಗಳ ಸೋಲಿಗೆ ಕಾರಣವೇನು ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.

ಅಂತೆಯೇ ನಾವೀಗ ಕಳೆದ ಬಾರಿ ಅತಂತ್ರ ಬಂದಿದ್ದರು, ಹೆಚ್ಚಿನ ಸೀಟ್ ಗಳನ್ನು ಗೆದ್ದು ಬೀಗಿದ್ದ ಬಿಜೆಪಿ ಈ ಸಲ ಹೀನಾಯವಾಗಿ ಸೋಲಲು ಕಾರಣವೇನು? ಅಲ್ಲದೆ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಲು ನೆರವಾದದ್ದೇನು ಅನ್ನೋದ್ರು ಬಗ್ಗೆ ಕೊಂಚ ಗಮನ ಹರಿಸೋಣ.

ಬಿಜೆಪಿ ಸೋಲಿಗೆ ಸಂಭಾವ್ಯ ಕಾರಣಗಳು:

• ಯಡಿಯೂರಪ್ಪ ಕಡೆಗಣನೆ ಎಫೆಕ್ಟ್

• ಶೆಟ್ಟರ್, ಸವದಿ ಸೇರಿದಂತೆ ಹಲವು ಲಿಂಗಾಯತ ನಾಯಕರ ಕಡೆಗಣನೆ

• ಪರಿಣಾಮ ವೀರಶೈವ ಲಿಂಗಾಯತ ಮತವರ್ಗದ ವಿಭಜನೆ

• ರಾಜ್ಯ ನಾಯಕರನ್ನು ಪರಿಗಣಿಸದ ಹೈಕಮಾಂಡ್ ನಾಯಕರ ಧೋರಣೆ

• ಹಲವು ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆಯ ಪರಿಣಾಮ

• 40% ಕಮೀಷನ್ ಆರೋಪ, ಬೆಲೆ ಏರಿಕೆ ಪರಿಣಾಮ

• ಒಕ್ಕಲಿಗ ಮತವರ್ಗದ ವಿಶ್ವಾಸ ಗಳಿಸಿಕೊಳ್ಳುವಲ್ಲಿ ವಿಫಲ

• ಹಿಂದುತ್ವದ ಅಜೆಂಡಾ ಮೇಲೂ ಅವಲಂಬನೆ. ಕೈಕೊಟ್ಟ ಹಿಂದುತ್ವದ ಅಜೆಂಡಾ

• ಅತಿಯಾದ ಆತ್ಮವಿಶ್ವಾಸ

• ಹೈಕಮಾಂಡ್ ನಾಯಕರ ಮೇಲೆ ಅತಿಯಾದ ಅವಲಂಬನೆ

• ರಾಜ್ಯದಲ್ಲಿ ಕೈ ಹಿಡಿಯದ ನಮೋ ವರ್ಚಸ್ಸು, ನಮೋ ರೋಡ್ ಶೋಗಳು

• ಫಲ‌ ಕೊಡದ ಚಾಣಕ್ಯ ಅಮಿತ್ ಶಾ ತಂತ್ರಗಾರಿಕೆ

• ರಾಜ್ಯದಲ್ಲಿ ಅತಿಯಾದ ಪ್ರಯೋಗ ಅಸ್ತ್ರಗಳು

• 20 ಹಾಲಿಗಳಿಗೆ ಟಿಕೆಟ್ ಮಿಸ್ ನಿರ್ಧಾರ. 75 ಹೊಸಬರಿಗೆ ಟಿಕೆಟ್

• ಕೆಲವು ಸಚಿವರ ನಿಷ್ಕ್ರಿಯತೆ, ವೈಫಲ್ಯ

• ಸರ್ಕಾರದ ಅವಧಿಯಲ್ಲಿ ಕೇಳಿಬಂದ ಕಮೀಷನ್ ಆರೋಪ, ಪಿಎಸ್‌ಐ ಅಕ್ರಮ ಪ್ರಕರಣ, ಬಿಟ್‌ಕಾಯಿನ್ ಹಗರಣ ಆರೋಪ, ಡ್ರಗ್ ಪ್ರಕರಣ, ಕೋವಿಡ್ ಸಂದರ್ಭದ ನಾನಾ ಆರೋಪಗಳ ಎಫೆಕ್ಟ್.

• ಫಲ‌ ಕೊಡದ ಮೀಸಲಾತಿ ಹೆಚ್ಚಳ ಅಸ್ತ್ರ ಮತ್ತು ಒಳಮೀಸಲಾತಿ ಹಂಚಿಕೆ ನಿರ್ಣಯ

• ಎಚ್ಡಿಕೆ ಬಿಟ್ಟ ಪೇಶ್ವೆ ಬ್ರಾಹ್ಮಣ ವರ್ಸಸ್ ಲಿಂಗಾಯತ ಬಾಣದ ಎಫೆಕ್ಟ್

• ಸಿಎಂ ಬೊಮ್ಮಾಯಿ ನಾಯಕತ್ವ ಗುಣ ಇಲ್ಲದಿರುವುದು, ಬೊಮ್ಮಾಯಿ ಸರ್ಕಾರದ ವೈಫಲ್ಯ

• ಬಂಡಾಯ ಶಮನ ಮಾಡುವಲ್ಲಿ ಬಿಜೆಪಿ ನಾಯಕರ ವೈಫಲ್ಯ.

ಕಾಂಗ್ರೆಸ್ ಗೆಲುವಿನ ಕಾರಣಗಳು:

– 40% ಕಮಿಷನ್ ಆರೋಪ, ಪೇ ಸಿಎಂ ಅಭಿಯಾನ ತೀವ್ರ ಪ್ರಚಾರ

– ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕಾಂಗ್ರೆಸ್ಸಿಗೆ ವರದಾನ

– ಗ್ಯಾಸ್ ಸಿಲಿಂಡರ್ ಕೈ ಮುಗಿದು ಮತ ಹಾಕಿ ಎಂದು ಅಭಿಯಾನ

– ಅಗತ್ಯ ವಸ್ತುಗಳ ಬೆಲೆ ಏರಿಕೆ ಕೂಡ ಕೈಗೆ ವರದಾನ

– ಬೆಲೆ ಏರಿಕೆ ಬಗ್ಗೆ ನಿರಂತರ ಪ್ರಚಾರ ಮಾಡಿದ್ದ ಕಾಂಗ್ರೆಸ್

– ಬಿಜೆಪಿ ವಿರೋಧಿ ಅಲೆ ಯಶಸ್ವಿಯಾಗಿ ಬಳಕೆ

– ರಾಜ್ಯದಾದ್ಯಂತ ಬಿರುಸಿನ ಪ್ರಚಾರ ಮಾಡಿದ್ದ ಕಾಂಗ್ರೆಸ್

– ಬಿಜೆಪಿ ಭ್ರಷ್ಟಾಚಾರವನ್ನೆ ಮೊದಲ ಅಸ್ತ್ರ ಮಾಡಿದ್ದ ಕಾಂಗ್ರೆಸ್

– ಮೊದಲ ಪಟ್ಟಿಯಲ್ಲಿ 124, ಎರಡನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳ ಆಯ್ಕೆ

– ಕಾಂಗ್ರೆಸ್ಸಿಗೆ ವರದಾನವಾದ ಗ್ಯಾರಂಟಿಗಳ ಘೋಷಣೆ

– ಐದು ಗ್ಯಾರಂಟಿಗಳ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡಿದ್ದ ಕಾಂಗ್ರೆಸ್

– ಕೊನೆ ಹಂತದಲ್ಲಿ ಐದು ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್​​ನಲ್ಲಿ ಜಾರಿ ಭರವಸೆ

– ಅಬ್ಬರದ ಪ್ರಚಾರದ ಜತೆಗೆ ಡೋರ್ ಟೂ ಡೋರ್ ಪ್ರಚಾರ

– ಅಧಿಕಾರ ಪಡೆಯಲು ಎರಡು ಮತ್ತು ಮೂರನೇ ಹಂತದ ನಾಯಕರ ಹೋರಾಟ

– ಪ್ರಚಾರದಲ್ಲಿ ಹೈಕಮಾಂಡ್ ನಾಯಕರ ಜತೆಗೆ ರಾಜ್ಯ ನಾಯಕತ್ವಕ್ಕೆ ಮನ್ನಣೆ

– ಸಂಘಟಿತ ಹೋರಾಟ ಮಾಡಿದ್ದ ಕೈ ನಾಯಕರು

– ಕೊನೆಯವರೆಗೂ ಒಗ್ಗಟ್ಟು ಪ್ರದರ್ಶನ

– ಡಿಕೆಶಿ, ಸಿದ್ದರಾಮಯ್ಯ ನಡುವೆ ಮುನಿಸಿದ್ದರೂ ಒಗ್ಗಟ್ಟು ಪ್ರದರ್ಶನ

– ಶಿಸ್ತು ಬದ್ಧವಾಗಿ ಟಿಕೆಟ್ ಹಂಚಿಕೆ

– ಮೊದಲ ಮತ್ತು ಎರಡನೇ ಪಟ್ಟಿಯಲ್ಲಿ ಎಚ್ಚರಿಕೆಯಿಂದ ಅಭ್ಯರ್ಥಿಗಳ ಆಯ್ಕೆ

ಇದನ್ನೂ ಓದಿ : ಕರ್ನಾಟಕ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್

Leave A Reply

Your email address will not be published.