Belthangady: ಹರೀಶ್ ಪೂಂಜಾ ಗೆಲುವು, ವೀರೋಚಿತ ಸೋಲು ಕಂಡ ಕಾಂಗ್ರೆಸ್ ನ ರಕ್ಷಿತ್ ಶಿವರಾಮ್ !

Belthangady: ಈಗಾಗಲೇ ಕರ್ನಾಟಕ ಚುನಾವಣೆ ಮಂಗಳೂರು ಉತ್ತರ ಕ್ಷೇತ್ರದ ಬೆಳ್ತಂಗಡಿಯ (Belthangady) ವಿಧಾನಸಭಾ ಕ್ಷೇತ್ರದಲ್ಲಿ ಹನ್ನೆರಡನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಬಹುತೇಕ ಗೆಲುವಿನತ್ತ ಸಾಗಿದ್ದಾರೆ.

 

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾಗೆ 80080 ಮತಗಳು ದೊರೆತಿದ್ದು, ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ 66459 ಮತಗಳನ್ನು ಪಡೆದಿದ್ದಾರೆ.

ಸದ್ಯ ಹರೀಶ್ ಪೂಂಜಾ 13621 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ನೇರಾನೇರ ಸೆಣಸಾಟದಲ್ಲಿ ಕಾಂಗ್ರೆಸ್‌ ಶಾಸಕ ರಕ್ಷಿತ್ ಶಿವರಾಮ್ ಮತ್ತು ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ನಡುವಿನಲ್ಲಿ ಗೆಲುವಿನ ಪಟ್ಟಕ್ಕೆ ಪೂಂಜಾ ಕಾಯುತ್ತಿದ್ದಾರೆ.

ಇತ್ತ ಕಡೆ ಕಾಂಗ್ರೆಸ್ ನ ಬಿ ರಮಾನಾಥ ರೈ ವಿರುದ್ಧ ರಾಜೇಶ್ ನಾಯಕ್ ಯು ಅವರು ಗೆಲುವು ಸಾಧಿಸಿದ್ದಾರೆ. ರಾಜೇಶ್ ಅವರು 58,283 ಮತ ಪಡೆದಿದ್ದರೆ, ರಮಾನಾಥ ರೈ ಅವರು 51,210 ಮತ ಪಡೆದಿದ್ದಾರೆ.

Leave A Reply

Your email address will not be published.