Karnataka Election Result: ಠೇವಣಿ ಉಳಿಯಲು ಅಭ್ಯರ್ಥಿ ಎಷ್ಟು ಮತ ಪಡೆಯಬೇಕು, ಅತ್ಯಂತ ಹೆಚ್ಚು ಠೇವಣಿ ಕಳೆದುಕೊಂಡ ಪಕ್ಷ ಯಾವುದು ಗೊತ್ತೇ?

Karnataka assembly elections result how much vote needed for secure deposit

Karnataka Elections Result: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಮುಗಿದಿದೆ. ಅಭ್ಯರ್ಥಿಗಳು, ಪಕ್ಷದ ನಾಯಕರುಗಳ ಹಾಗೆಯೇ ಸಾಮಾನ್ಯ ಕಾರ್ಯಕರ್ತರು ಕೂಡಾ ಕುತೂಹಲವನ್ನು ತಣಿಸಿಕೊಳ್ಳಲು ಆಗದೆ ಟೆನ್ಶನ್ ನಲ್ಲಿ ಕಾಯುತ್ತಿದ್ದಾರೆ. ಈಗಾಗಲೇ ಮುಕ್ತಾಯಗೊಂಡಿದ್ದು, ದಾಖಲೆಯ ಶೇ 73.19ರಷ್ಟು ಮತದಾನವಾಗಿದೆ. ನಾಳೆ ಶನಿವಾರ ಬೆಳಿಗ್ಗೆ ಮತ ಎಣಿಕೆ ಶುರುವಾಗಿ ಮಧ್ಯಾಹ್ನ 11.30 ಯಿಂದ 12 ಗಂಟೆಗೆ ಒಂದು ರೀತಿಯ ಟ್ರೆಂಡ್ ಒದಗಿ ಬರಲಿದೆ. ಮಧ್ಯಾಹ್ನ 2 ರಿಂದ 3 ಗಂಟೆಯ ಹೊತ್ತಿಗೆ ಸಂಪೂರ್ಣ ಚಿತ್ರಣ ಮೂಡಿ ಬರಲಿದೆ.

ಚುನಾವಣೆಯಲ್ಲಿ ಗೆಲ್ಲುವ (Karnataka Election Result) ಮತ್ತು ಸೋಲುವ ಅಭ್ಯರ್ಥಿಗಳ ಮಧ್ಯೆ ಅದೊಂದು ವರ್ಗ ಇದೆ. ಅದು ಠೇವಣಿ ಕಳೆದುಕೊಳ್ಳುವವರು. ಗೆಲ್ಲಲೆಂದೆ ಓಟಿಗೆ ನಿಲ್ಲಬೇಕೆಂದು ಇಲ್ಲವಲ್ಲ. ಗೆಲ್ಲಲು ನಿಲ್ಲುವವರಿಗಿಂತಲೂ ಇತರರನ್ನು ಸೋಲಿಸಲು ನಿಲ್ಲುವವರು ಜಾಸ್ತಿ. ಮತ್ತೆ ಕೆಲವರು ಹವ್ಯಾಸಿ ಸ್ಪರ್ಧಿಗಳು. ನಾನಿಷ್ಟು ಬಾರಿ ಸ್ಪರ್ಧಿಸಿದೆ ಎಂದು ಪ್ರಚಾರಕ್ಕೆ ಮತ್ತು ದಾಖಲೆಗಾಗಿ ಸ್ಪರ್ಧೆ ಮಾಡುವವರೂ ಇಲ್ಲದಿಲ್ಲ. ಇಂಥವರೇ ಹೆಚ್ಚಾಗಿ ಠೇವಣಿ ಅಥವಾ ಇಡುಗಂಟು ಕಳೆದುಕೊಳ್ಳುವವರು. ಅಂತವರ ಠೇವಣಿ ಹೆಚ್ಚಿನ ಸಂದರ್ಭಗಳಲ್ಲಿ ಕಳೆದು ಹೋಗುತ್ತದೆ. ಅದೇ ಮುಖ್ಯ ರಾಜಕೀಯ ಪಕ್ಷದ ಅಭ್ಯರ್ಥಿಯ ಠೇವಣಿ ಕಳೆದು ಹೋದರೆ ಅದನ್ನು ಅವಮಾನ ಎಂದು ಪರಿಗಣಿಸಲಾಗುತ್ತದೆ.

ಹಾಗಾದ್ರೆ, ಮತ ಠೇವಣಿ ಎಂದರೇನು? ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಅಭ್ಯರ್ಥಿಯು ಎಷ್ಟು ಠೇವಣಿ ಇಡಬೇಕಾಗುತ್ತದೆ? ಅದನ್ನು ಉಳಿಸಿಕೊಳ್ಳಲು ಒಬ್ಬ ಅಭ್ಯರ್ಥಿಗೆ ಎಷ್ಟು ಮತ ದೊರೆಯಬೇಕು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 158 ರ ಪ್ರಕಾರ ಒಂದು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬೇಕಾದರೆ ಅಭ್ಯರ್ಥಿಯು 10,000 ರೂಪಾಯಿ ಮೊತ್ತವನ್ನು ಚುನಾವಣಾ ಆಯೋಗದಲ್ಲಿ ಠೇವಣಿ ಇರಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಯಾದರೆ 5,000 ರೂಪಾಯಿ ಠೇವಣಿ ಇಡಬೇಕು. ಇದನ್ನು ಚುನಾವಣಾ ಆಯೋಗವು ಭದ್ರತಾ ಠೇವಣಿಯಾಗಿ ಪಡೆದು ಕೊಂಡು ತನ್ನೊಳಗೆ ಇಟ್ಟುಕೊಳ್ಳುತ್ತದೆ. ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳ ಆರನೇ ಒಂದಕ್ಕಿಂತ ಕಡಿಮೆ ಮತಗಳನ್ನು ಪಡೆದರೆ ಅಂಥ ಅಭ್ಯರ್ಥಿಯ ಠೇವಣಿಯನ್ನು ಚುನಾವಣಾ ಆಯೋಗವು ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಅಂದರೆ ಚಲಾವಣೆ ಆದ ಮತಗಳಲ್ಲಿ 16.66.% ಕನಿಷ್ಠ ಮತಗಳನ್ನು ಅಭ್ಯರ್ಥಿ ಓರ್ವ ಪಡೆಯಬೇಕು. ಆಗ ಮಾತ್ರ ಆತನ ಅಥವಾ ಆಕೆಯ ಠೇವಣಿ ಹಣವನ್ನು ಹಿಂದೆ ತಿರುಗಿಸಲಾಗುತ್ತದೆ. ಇಲ್ಲದೆ ಹೋದರೆ ಆ ಹಣ ಚುನಾವಣಾ ಆಯೋಗದ ಪಾಲಾಗುತ್ತದೆ.

ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಪಡೆದ ಒಟ್ಟು ಮಾನ್ಯವಾದ ಮತಗಳಲ್ಲಿ ಆರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಪಡೆದಿದ್ದರೆ ಆಯೋಗವು ಠೇವಣಿಯನ್ನು ವಾಪಸ್ ಮಾಡುತ್ತದೆ. ಹಾಗೆಂದು, ಅಭ್ಯರ್ಥಿಯು ಚಲಾವಣೆಯಾದ ಮಾನ್ಯವಾದ ಮತಗಳ ಸಂಖ್ಯೆಯಲ್ಲಿ ನಿಖರವಾಗಿ ಆರನೇ ಒಂದು ಭಾಗವನ್ನಷ್ಟೇ ಪಡೆದಿದ್ದರೆ ಕೂಡ ಠೇವಣಿ ಹಣವನ್ನು ಹಿಂತಿರುಗಿಸಲಾಗುವುದಿಲ್ಲ. ಅದಕ್ಕಿಂತ ಇಣಿತಾದರೂ ಹೆಚ್ಚಿನ ಸಂಖ್ಯೆಯಲ್ಲಿ ಮತಗಳು ಬೀಳಬೇಕು.

ಲೋಕಸಭೆ ಚುನಾವಣೆಗೆ ಪ್ರತ್ಯೇಕ ನಿಯಮ !
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಯು 25,000 ರೂ. ಠೇವಣಿ ಇಡಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿ 12,500 ರೂ. ಠೇವಣಿ ಇಡಬೇಕಾಗುತ್ತದೆ. ಈ ಚುನಾವಣೆಯಲ್ಲಿಯೂ ಅಷ್ಟೆ, ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮಾನ್ಯವಾದ ಮತಗಳ ಆರನೇ ಒಂದಕ್ಕಿಂತ ಹೆಚ್ಚು ಪಡೆದಿದ್ದರೆ ಮಾತ್ರ ಠೇವಣಿ ವಾಪಸ್ ನೀಡಲಾಗುತ್ತದೆ.

ಅಂಕಿ ಸಂಖ್ಯೆಗಳ ಆಧಾರದ ಮೇಲೆ ಜೆಡಿಎಸ್ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಠೇವಣಿ ಕಳೆದುಕೊಂಡ ಪಕ್ಷವಾಗಿದೆ. ಜೆಡಿಎಸ್ ಬಿಟ್ಟರೆ ನಂತರದ ಸ್ಥಾನದಲ್ಲಿ ಬಿಜೆಪಿ ಇದ್ದು ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವ ಸಾಧ್ಯತೆಗಳು ಕಮ್ಮಿ.

ಇದನ್ನೂ ಓದಿ:Elon Musk : ಟ್ವಿಟರ್ ಸಿಇಓ ಸ್ಥಾನಕ್ಕೆ ಎಲಾನ್ ಮಸ್ಕ್ ರಾಜಿನಾಮೆ!! ಮುಂದಿನ ಸಿಇಓ ಯಾರು ಗೊತ್ತಾ?

Leave A Reply

Your email address will not be published.