Election betting: ರಾಜ್ಯದಲ್ಲಿ ಜೋರಾಯ್ತು ಚುನಾವಣಾ ಬೆಟ್ಟಿಂಗ್! ಈ ಅಭ್ಯರ್ಥಿ ಗೆಲ್ತಾರೆಂದು 1 ಎಕರೆ 37 ಗುಂಟೆ ಜಮೀನನ್ನೇ ಬೆಟ್ ಕಟ್ಟಿದ ಕೈ ಮುಖಂಡ!!

He has decided to bet his land as the election betting

Election betting: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಬರೊಬ್ಬರಿ 73.19 ಪ್ರತಿಶತ ರಾಜ್ಯದಲ್ಲಿ ಮತದಾನ ಮಾಡಿದ್ದಾರೆ. ಈಗಾಗಲೇ ಕ್ಷೇತ್ರಗಳಲ್ಲಿ ಸೋಲು ಗೆಲುವಿನ ಮಾತು ಕೇಳಿ ಬರುತ್ತಿದೆ. ಹಲವಾರು ಸಮೀಕ್ಷೆಗಳು ಕೂಡ ತಮ್ಮ ವರದಿ ಬಿಡುಗಡೆ ಮಾಡುತ್ತಿವೆ. ಈ ನಡುವೆ ಚುನಾವಣಾ (Election betting)  ಬೆಟ್ಟಿಂಗ್ ಜೋರಾಗಿದ್ದು, ಇಲ್ಲೊಬ್ಬ ಆಸಾಮಿ ತನ್ನ ಜಮೀನನ್ನೇ ಬೆಟ್(Bet) ಕಟ್ಟಲು ಮುಂದಾಗಿದ್ದಾನೆ.

 

ಹೌದು, ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು? ಅತಂತ್ರ ಬಂದರೆ ಜೆಡಿಎಸ್‌(JDS) ಕಿಂಗ್‌ಮೇಕರ್‌ ಆಗುತ್ತಾ? ಬಿಜೆಪಿಗೆ(BJP) ಎಷ್ಟುಸ್ಥಾನ ಬರಬಹುದು? ಮತದಾನೋತ್ತರ ಸಮೀಕ್ಷೆ ಎಷ್ಟುನಿಜ? ಎಂಬೆಲ್ಲ ವಿಷಯಗಳ ಬಗ್ಗೆ ಬೆಟ್ಟಿಂಗ್‌ ನಡೆಯುತ್ತಿರುವುದು ಒಂದೆಡೆ. ಮತ್ತೊಂದೆಡೆ ಕ್ಷೇತ್ರವಾರು ಬೆಟ್ಟಿಂಗ್‌ ಕೂಡ ಜೋರಾಗಿದೆ. ಅಂತೆಯೇ ಮೈಸೂರು(Mysore) ಜಿಲ್ಲೆಯ ಪಿರಿಯಾಪಟ್ಟಣ(Piriyapattana) ತಾಲ್ಲೂಕಿನ ಹಾರನಹಳ್ಳಿ(Haranahalli) ಗ್ರಾಮದ ಕಾಂಗ್ರೆಸ್(Congress) ಮುಖಂಡರಾದ ಯೋಗೇಶ್ ಗೌಡ(Yogesh Gowda) ಯಾರು ಗೆಲ್ಲುತ್ತಾರೆಂದು ಬೆಟ್ ಕಟ್ಟಲು ತನ್ನ ಜಮೀನು ಮಾರಲು ಮುಂದಾದಗಿದ್ದಾರೆ.

ಅಂದಹಾಗೆ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಅಭ್ಯರ್ಥಿ ಕೆ.ವೆಂಕಟೇಶ್ (K Venkatesh) ಹಾಗೂ ಜೆಡಿಎಸ್ (JDS) ಅಭ್ಯರ್ಥಿ ಕೆ.ಮಹದೇವ್ (K Mahadev) ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಈ ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆಂದು 1 ಎಕರೆ 37 ಗುಂಟೆ ಜಮೀನು ಬೆಟ್ಟಿಂಗ್ ನಡೆದಿದೆ. ಸದ್ಯ ಯೋಗೇಶ್ ಗೌಡ ಮಾತನಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆಂದು ಹಾರನಹಳ್ಳಿ ಗ್ರಾಮದ ಯೋಗೇಶ್ ಗೌಡನಾದ ನಾನು 1 ಗುಂಟೆ 37 ಗುಂಟೆ ಬೆಟ್ ಕಟ್ತೀನಿ. ಯಾರದ್ರೂ ತಯಾರಾದರೆ ಬರಬಹುದು. ಅಗ್ರಿಮೆಂಟ್ ಮಾಡಿ ಕೊಡ್ತೀನಿ. ನನ್ನ ಹೆಂಡ್ತಿ ಮಕ್ಕಳ ಸಹಿ ಕೂಡ ಹಾಕಿ ಕೊಡುತ್ತೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.

ಕುರಿ ಬೆಟ್ಟಿಂಗ್‌: ಇನ್ನು ಇದೇ ರೀತಿ ಧಾರವಾಡ(Dharwada) ಹಾಗೂ ನವಲಗುಂದ(Navalgunda) ಕ್ಷೇತ್ರದಲ್ಲೂ ಭಾರೀ ಬೆಟ್ಟಿಂಗ್‌ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಅತಿ ಹೆಚ್ಚು ಬಳಕೆಯಾದ ಪ್ರಾಣಿಯೆಂದರೆ ಕುರಿ. ಕುರುಬ ಸಮುದಾಯ ತಮ್ಮೊಂದಿಗೆ ಇದೆ ಎಂದು ತೋರಿಸಿಕೊಳ್ಳಲು ಕುರಿ ಮರಿಕೊಟ್ಟು, ಕಂಬಳಿ ಹೊದೆಸಿ ಎಲ್ಲೆಡೆ ಸನ್ಮಾನಗಳು ನಡೆದವು. ಇದೀಗ ಕುರಿಮರಿಗಳದ್ದೇ ಬೆಟ್ಟಿಂಗ್‌ ನಡೆಯುತ್ತಿರುವುದು ವಿಶೇಷ. ಇದು ನವಲಗುಂದ ಕ್ಷೇತ್ರದಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಒಂದು ಕುರಿಮರಿಗೆ ಎರಡು, 3 ಕುರಿಮರಿಗಳ ಬಾಜಿ ಕಟ್ಟುವುದು ಮಾಮೂಲಾಗಿದೆ. ಇನ್ನುಳಿದಂತೆ ಪೂರ್ವ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿರುವ ಎಐಎಂಐಎಂ ಪಕ್ಷ, ಎಸ್‌ಡಿಪಿಐ ಪಕ್ಷಗಳು ಎಷ್ಟುಮತ ಪಡೆಯಬಹುದು? ಇವು ಎಷ್ಟುಪಡೆದರೆ ಯಾರಿಗೆ ಲಾಭವಾಗುತ್ತದೆ? ಎಂಬುದರ ಆಧಾರದ ಮೇಲೂ ಬಾಜಿ ಕಟ್ಟುವಿಕೆ ನಡೆಯುತ್ತಿದೆ.

 

ಇದನ್ನು ಓದಿ: Agniveer Reservation: ಅಗ್ನಿವೀರರಿಗೆ ಗುಡ್ ನ್ಯೂಸ್! ರೈಲ್ವೆ ಉದ್ಯೋಗದಲ್ಲಿ ನಿಮಗಿದೆ ಮೀಸಲಾತಿ!!! ಇಲ್ಲಿದೆ ಸಂಪೂರ್ಣ ಮಾಹಿತಿ

Leave A Reply

Your email address will not be published.