HD Kumaraswamy: ಸಿಂಗಾಪುರ್ ಗೆ ಹಾರಿದ ಎಚ್ಡಿ ಕುಮಾರಸ್ವಾಮಿ- ಅಲ್ಲೇ ಶುರುವಾಗುತ್ತಾ ಕರ್ನಾಟಕ ಪಾಲಿಟಿಕ್ಸ್ ಅಸಲಿ ಆಟ? ಕಳೆದ ಸಲ ಉಜಿರೆಯ ಶಾಂತಿವನ, ಈ ಸಲ ಸಿಂಗಾಪುರವಾ?

HD Kumaraswamy left for Singapore before the election results

HD Kumaraswamy: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಮತದಾನ ಪ್ರಕ್ರಿಯೆ ಮುಗಿದ್ದು, ಇನ್ನೇನು ನಾಳೆ ಫಲಿತಾಂಶವೂ ಹೊರಬೀಳಲಿದೆ. ಆದರೆ ಈ ಮೊದಲೇ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ (HD Kumaraswamy) ಯವರು ವಿಶ್ರಾಂತಿ ನೆಪದಲ್ಲಿ ಸಿಂಗಾಪುರಕ್ಕೆ ಹಾರಿರುವುದು ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ.

ಹೌದು, ಚುನಾವಣೆಯ ಎಕ್ಸಿಟ್ ಪೋಲ್‍ (Exit Poll) ನಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸುತ್ತದೆ ಎಂಬ ಮಾಹಿತಿ ಇದ್ದರೂ, ಹಲವೆಡೆ ಅತಂತ್ರ ಫಲಿತಾಂಶ ಸೂಚನೆ ಕೂಡ ದೊರೆಯುತ್ತಿದೆ. ಹೀಗೆ ಅತಂತ್ರದ ಸುಳಿವು ಸಿಗುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ( Kumaraswamy) ಯವರು ವಿಶ್ರಾಂತಿ ನೆಪದಲ್ಲಿ ಸಿಂಗಾಪುರಕ್ಕೆ ಹಾರಿದ್ದಾರೆ. ಹೀಗಾಗಿ ಈ ಸಲದ ಕರ್ನಾಟಕದ ಪಾಲಿಟಿಕ್ಸ್ ಆಟ ಸಿಂಗಾಪುರದಲ್ಲಿ ನಡೆಯುವುದೇ ಎಂಬ ಗುಮಾನಿ ಎಲ್ಲರಲ್ಲಿ ಮೂಡಿದೆ.

ಕುಮಾರಸ್ವಾಮಿ ಅವರು ಬೇರಾವ ಟೈಮಲ್ಲಾದರೂ ಸಿಂಗಾಪುರ ಅಲ್ಲ, ಇನ್ನಾವುದೇ ದೇಶಕ್ಕೆ ಹೋದರೂ ಅದು ಸುದ್ಧಿಯಾಗ್ತಿರಲಿಲ್ಲ. ಆದರೆ ಚುನಾವಣೆಯಲ್ಲಿ ಕಳೆದ ಸಲಕ್ಕಿಂತ ಈ ಸಲ ತುಸು ಹೆಚ್ಚಾದರೂ ಸ್ಥಾನಗಳನ್ನು ಗೆಲ್ಲಬೇಕು ಅಂದುಕೊಂಡು ಶತಾಯ ಗತಾಯ ಪ್ರಯತ್ನ ನಡೆಸಿರೊ ಕುಮಾರಸ್ವಾಮಿ ಅವರು ತನ್ನ ಪಕ್ಷದ ಗೆಲುವುನ್ನು ಕಣ್ತುಂಬಿಕೊಂಡು ಸಂಭ್ರಮಿಸೋ ಬದಲು, ಫಲಿತಾಂಶ ಬರುವ ಮೊದಲು ಸಿಂಗಾಪುರ ಹೋಗೋದೇನಿತ್ತು? ಅಂದಹಾಗೆ ಕುಮಾರಸ್ವಾಮಿ ಸುಮ್ಮನೆ ಕುಳಿತುಕೊಳ್ಳುವ ನಾಯಕರಲ್ಲ. ಏನಾದರೂ ಪಕ್ಕಾ ಲೆಕ್ಕ ಇಟ್ಟುಕೊಂಡೇ ಈ ವಿದೇಶಿ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸಿಂಗಾಪುರ್ ಪಾಲಿಟಿಕ್ಸ್ (Singapore Politics) ಅಸಲಿ ಆಟ ಶುರುನಾ ಎಂಬ ಪ್ರಶ್ನೆ ಮೂಡಿದ್ದು, ಸರ್ಕಾರದ ಮ್ಯಾಜಿಕ್ ಗೇಮ್ ಪ್ಲ್ಯಾನ್ ಏನು ಎಂಬ ಪ್ರಶ್ನೆ ಎದ್ದಿದೆ.

ಇನ್ನು ಕುಮಾರಸ್ವಾಮಿ ಅವರ ಲೆಕ್ಕಾಚಾರ ಏನೀರಬಹುದು? ಸಮೀಕ್ಷೆಗಳು ಏನೇ ಹೇಳಿದರು ಕೂಡ ಜನರ ತೀರ್ಪು ಫಲಿತಾಂಶ ದಿನವೇ ತಿಳಿವುದು. ಅಲ್ಲದೆ ಯಾವುದೇ ಪಕ್ಷಕ್ಕೆ ಬಹುಮತ ಬರಲ್ಲ ಅನ್ನೋದು ಕೆಲವು ಸಮೀಕ್ಷೆಗಳಲ್ಲಿ ಸ್ಪಷ್ಟವಾಗಿದೆ. ಅತಂತ್ರ ಬಳಿಕ ಯಾರ ಜೊತೆ ಹೋಗಬೇಕು ಎಂಬ ಬಗ್ಗೆ ಲೆಕ್ಕಾಚಾರ ಶುರುವಾಗಿದ್ದು, ಕಾಂಗ್ರೆಸ್ (Congress)-ಬಿಜೆಪಿ (BJP) ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಸಿಂಗಾಪುರ್‍ನಲ್ಲಿ ರಾಜಕೀಯದ ಆಟ ಆಡೋಕೆ ಹೆಚ್‍ಡಿಕೆ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಸಿಂಗಾಪುರ್ ನಲ್ಲಿ ವಿಶ್ರಾಂತಿ ನೆಪದಲ್ಲಿ ಸರ್ಕಾರ ರಚನೆ ಬಗ್ಗೆ ಪ್ಲ್ಯಾನ್ ನಡೆಸಲಾಗುತ್ತಿದೆ. ಕಾಂಗ್ರೆಸ್-ಬಿಜೆಪಿ ಜೊತೆ ಯಾರು ಒಳ್ಳೆಯವರು ಅನ್ನೋ ಲೆಕ್ಕಾಚಾರ ಮಾಡಲಾಗುತ್ತಿದ್ದು, ಫಲಿತಾಂಶ ಫೈನಲ್ ಆದ ಮೇಲೆ ಸಿಂಗಾಪುರ್ ಆಟದ ಅಸಲಿಯತ್ತು ಬಯಲಾಗಲಿದೆ.

ಉಜಿರೆಯ(Ujire) ಶಾಂತಿವನ(Shantivana)ದಲ್ಲಿ ನಿರ್ಧಾರ ಆಗಿತ್ತು ಕಳೆದ ಸರ್ಕಾರದ ಭವಿಷ್ಯ- ಕಳೆದ ಭಾರಿಯೂ ಕೂಡ ಆರಂಭದ ಒಂದೂವರೆ ವರ್ಷ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರ ಆಡಳಿತವಿದ್ದದ್ದು ಎಲ್ಲರಿಗೂ ತಿಳಿದಿದೆ. ಆದರೆ ಇದರ ಭವಿಷ್ಯ, ಹಿಡಿತ, ಎಲ್ಲವೂ ಕೆಲ ಸಮಯ ಉಜಿರೆ ಬಳಿಯ ಶಾಂತಿವನದಲ್ಲಿ ತೀರ್ಮಾನ ಆಗುತ್ತಿತ್ತು. ಹೌದು, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿದ ಬಳಿಕ ಸಿದ್ದರಾಮಯ್ಯ(Siddaramaiha) ಅವರು ವಿಶ್ರಾಂತಿ ಹಾಗೂ ಚಿಕಿತ್ಸೆಗೆಂದು ಉಜಿರೆ ಬಳಿಯ ಧರ್ಮಸ್ಥಳ(Dharmastala) ದ ಶಾಂತಿವನಕ್ಕೆ ಬಂದಿದ್ದರು. ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದು ಸರ್ಕಾರದ ಭವಿಷ್ಯದ ತುದಿಯನ್ನು ಹಿಡಿದಿದ್ದರು. ದಿನೇ ದಿನೇ ಮಂತ್ರಿಗಳ ದಂಡೇ ಇಲ್ಲಿಗೆ ಇಲ್ಲಿಗೆ ಆಗಮಿಸಿ ಸರ್ಕಾರವನ್ನು ನಿಯಂತ್ರಿಸುತ್ತಿದ್ದರು.

 

ಇದನ್ನು ಓದಿ: Cinema: ಮುಗಿದ ಚುನಾವಣಾ ಕೆಲಸ! ಸಿನಿಮಾ ಕೆಲಸ ಸ್ಟಾರ್ಟ್ಸ್!!!

Leave A Reply

Your email address will not be published.