B.M Sukumar Shetty: ಕುಂದಾಪುರ ಶಾಸಕ ಸುಕುಮಾರ ಶೆಟ್ಟಿ ಬಿಜೆಪಿಯಿಂದ ಉಚ್ಚಾಟನೆ ; ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳು!!

Fake letter expelling Byndoor MLA Sukumar Shetty goes viral

B.M Sukumar Shetty: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿಯವರನ್ನು (B.M Sukumar Shetty) ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿದೆ ಎಂಬ ಸುದ್ಧಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ. ಸದ್ಯ ಈ ವಿಚಾರವಾಗಿ ಸುಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕ ಬಿ.ಎಂ.ಸುಕುಮಾರ್ ಅವರನ್ನು ಬಿಜೆಪಿಯ (bjp) ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಯಾಕೆಂದರೆ, ಸುಕುಮಾರ್ ಬಿಜೆಪಿಯಲ್ಲಿದ್ದುಕೊಂಡು ಕಾಂಗ್ರೆಸ್ (congress) ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಈ ಬಗ್ಗೆ ದಾಖಲೆ ಸಿಕ್ಕಿದೆ. ಹಾಗಾಗಿ ಬಿ.ಎಂ.ಸುಕುಮಾರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಾಗಿ ಉಚ್ಚಾಟಿಸಲಾಗಿದೆ ಎಂದು ಬರೆದ ಪತ್ರವೊಂದು ಬಿಜೆಪಿಯ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ (lingaraj patil) ಅವರ ನಕಲಿ ಸಹಿಯೊಂದಿಗೆ ವೈರಲ್ ಆಗುತ್ತಿದೆ.

ಈ ವಿಚಾರವಾಗಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ (Suresh Nayak) ಪ್ರತಿಕ್ರಿಯಿಸಿದ್ದು, ಇದು ಸುಳ್ಳು ಸುದ್ಧಿ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಚಾರವನ್ನು ನಂಬಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೆ, ಶಾಸಕ ಸುಕುಮಾರ್ ಶೆಟ್ಟಿ ತಮ್ಮ ಬಗ್ಗೆ ಹರಿದಾಡುತ್ತಿರುವ ಅವಹೇಳನಕಾರಿ ವಿಷಯದ ಬಗ್ಗೆ ಮಾತನಾಡಿದ್ದು, “ಈ ವಿಚಾರದ ಬಗ್ಗೆ ನನಗೇನು ಬೇಸರವಿಲ್ಲ. ನಾನು ಅಪ್ಪಟ ದೈವ ಭಕ್ತ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿ ಹರಡುವವರಿಗೆ ದೈವ-ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸುದ್ದಿ ಹರಡಿರುವವರಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:Election: ಮೇ. 13 ರಂದು ಮತದಾನ ಎಣಿಕೆ: ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ!

Leave A Reply

Your email address will not be published.