CBSE 12th Exam Result: CBSE 12ನೇ ತರಗತಿ ರಿಸಲ್ಟ್ ಪ್ರಕಟ; ಇಲ್ಲಿದೆ ಪರೀಕ್ಷಾ ಫಲಿತಾಂಶ ಚೆಕ್ ಮಾಡೋ ವಿಧಾನ!

CBSE 12th Exam results declared soon check at results.cbse.nic.in

CBSE 12th Exam Result: ಸಿಬಿಎಸ್ಇ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ. ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ವಿದ್ಯಾರ್ಥಿಗಳೇ ಗಮನಿಸಿ,‌‌ ಸಿಬಿಎಸ್ಇ 12 ನೇ ತರಗತಿ ಫಲಿತಾಂಶ (CBSE 12th Exam Result) ಪ್ರಕಟವಾಗಿದೆ. ಇಲ್ಲಿದೆ ಪರೀಕ್ಷಾ ಫಲಿತಾಂಶ ಚೆಕ್ ಮಾಡೋ ವಿಧಾನ!

ವಿದ್ಯಾರ್ಥಿಗಳು results.cbse.nic.in , cbseresults.nic.in ಮತ್ತು digilocker.gov.in ಸೇರಿದಂತೆ ವಿವಿಧ ಅಧಿಕೃತ ವೆಬ್ಸೈಟ್ಗಳಲ್ಲಿ ಸಿಬಿಎಸ್ಇ ಫಲಿತಾಂಶಗಳನ್ನು ಪರಿಶೀಲಿಸಬಹುದು.
ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಆನ್ಲೈನ್ ಆಯ್ಕೆಗಳ ಜೊತೆಗೆ ಉಮಾಂಗ್ ಅಪ್ಲಿಕೇಶನ್, ಡಿಜಿಲಾಕರ್ ಅಪ್ಲಿಕೇಶನ್, ಎಸ್ಎಂಎಸ್ ಸೇವೆ, ಐವಿಆರ್ ಮತ್ತು ಪರೀಕ್ಷಾ ಸಂಗಮ್ ಮೂಲಕ ಕೂಡ ಫಲಿತಾಂಶವನ್ನು ಪಡೆಯಬಹುದು.

CBSE 12ನೇ ತರಗತಿಗಳ ಫಲಿತಾಂಶ ಡಿಜಿಲಾಕರ್ನಲ್ಲಿ ಚೆಕ್ ಮಾಡೋದು ಹೇಗೆ?

• ಡಿಜಿಲಾಕರ್ ವೆಬ್ಸೈಟ್ಗೆ digilocker.gov.in ಭೇಟಿ ನೀಡಿ ಅಥವಾ ಡಿಜಿಲಾಕರ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
• ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಬಳಸಿ ಲಾಗ್ ಇನ್ ಮಾಡಿ.
• “ಶಿಕ್ಷಣ” ವಿಭಾಗವನ್ನು ಕ್ಲಿಕ್ ಮಾಡಿ ಮತ್ತು “ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್” ಅನ್ನು ಆಯ್ಕೆ ಮಾಡಿ.
• ನಿಮ್ಮ ಸಿಬಿಎಸ್ಇ ರೋಲ್ ಸಂಖ್ಯೆ, ಶಾಲಾ ಕೋಡ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ.
• “ದಾಖಲೆ ಪಡೆಯಿರಿ” ಬಟನ್ ಕ್ಲಿಕ್ ಮಾಡಿ.
• ನಿಮ್ಮ ಸಿಬಿಎಸ್ಇ ಫಲಿತಾಂಶ ಕಾಣಿಸುತ್ತದೆ.
• ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ಔಟ್ ತೆಗೆದುಕೊಳ್ಳಿ.

ಈ ವರ್ಷ ಸುಮಾರು 38,83,710 ವಿದ್ಯಾರ್ಥಿಗಳು ಸಿಬಿಎಸ್​ಇ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಒಟ್ಟು 21,86,940 ವಿದ್ಯಾರ್ಥಿಗಳು CBSE 10 ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರು. ಮತ್ತು 16,96,770 ವಿದ್ಯಾರ್ಥಿಗಳು 12 ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರು.

ಇದನ್ನೂ ಓದಿ: Adah Sharma Networth: ‘ದಿ ಕೇರಳ ಸ್ಟೋರಿ’ ಖ್ಯಾತಿಯ ಅದಾ ಶರ್ಮಾ ಎಷ್ಟು ಕೋಟಿ ಒಡತಿ ಗೊತ್ತಾ?

Leave A Reply

Your email address will not be published.