Mandya: ಪತ್ನಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ನವವಿವಾಹಿತ ವ್ಯಕ್ತಿಗೆ ಸಿಡಿಲು ಬಡಿದು ಸಾವು!

A newly married man died in lightning strike in Mandya

Mandya:  ನವವಿವಾಹಿತನೋರ್ವ ಮೊಬೈಲ್ ನಲ್ಲಿ ಮಾತನಾಡುತ್ತಾ ಬೈಕ್ ನಲ್ಲಿ ತೆರಳುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆಯೊಂದು ಮಂಡ್ಯದಲ್ಲಿ (Mandya) ನಡೆದಿದೆ. ಮೃತ ವ್ಯಕ್ತಿಯನ್ನು ಮಧು( 35) ಎಂದು ಗುರುತಿಸಲಾಗಿದೆ. ಈತ ಮದ್ದೂರಿನ ವೈದ್ಯನಾಥಪುರ ನಿವಾಸಿ.

 

ಮೇ.10 ರಂದು ಮತದಾನ ಮಾಡಿ ನಂತರ ಪತ್ನಿಯನ್ನು ತವರು ಮನೆಗೆ ಬಿಟ್ಟು, ತನ್ನ ಮನೆಗೆ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಸಣ್ಣಗೆ ಮಳೆ ಸುರಿಯುತ್ತಿತ್ತು. ಈ ಸಂದರ್ಭದಲ್ಲಿ ಮದ್ದೂರು ತಾಲೂಕಿನ ಹರಳಹಳ್ಳಿ ಸರ್ಕಲ್ ಬಳಿ ಬೈಕ್ ನಲ್ಲಿ ಹೋಗಿವಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಮಾಹಿತಿ ಪ್ರಕಾರ, ಮಧು ಬೈಕ್ ನಲ್ಲಿ ಹೋಗುತ್ತಿದ್ದಾಗ, ಸಣ್ಣಗೆ ಸುರಿಯುತ್ತಿದ್ದ ಮಳೆ, ನಂತರ ಜೋರಾಗಿತ್ತು. ಹಾಗಾಗಿ ಬೈಕನ್ನು ಹರಳಹಳ್ಳಿ ಸರ್ಕಲ್ ಬಳಿ ಮರದಡಿಯಲ್ಲಿ ನಿಲ್ಲಿಸಿದ್ದರು‌. ನಂತರ ಹೆಲ್ಮೆಟ್ ಧರಿಸಿ ಫೋನ್ ನಲ್ಲಿ ಹೆಂಡತಿಯೊಂದಿಗೆ ಮಾತನಾಡುತ್ತಿದ್ದು, ಈ ಸಂದರ್ಭದಲ್ಲಿ ಸಿಡಿಲು ಬಡಿದು ಮಧು ಮೃತರಾಗಿದ್ದಾರೆ.

ಇದನ್ನೂ ಓದಿ:ಮಂಗಳೂರು: ಕದ್ರಿ ದೇವಸ್ಥಾನಕ್ಕೆ ಬೈಕ್ ನೊಂದಿಗೆ ನುಗ್ಗಿದ ಮುಸ್ಲಿಂ ಯುವಕರು! ಪೊಲೀಸರಿಂದ ತೀವ್ರ ವಿಚಾರಣೆ!!!

Leave A Reply

Your email address will not be published.