Joint Eyebrow: ನಿಮ್ಮ ಹುಬ್ಬು ಕೂಡಿದೆಯೇ? ಇದೇನು ಒಳ್ಳೆಯದಾ? ಕೆಟ್ಟದಾ?
Joint Eyebrows is good or bad as per Astrology
Joint Eyebrows : ಶಾಸ್ತ್ರದಲ್ಲಿ ದೇಹದ ಭಾಗಗಳ ರಚನೆ, ಆಕಾರ, ಬಗೆ, ಬಣ್ಣ ಇತ್ಯಾದಿಗಳ ಆಧಾರದ ಮೇಲೆ ಭವಿಷ್ಯವನ್ನು ತಿಳಿಯುವ ವಿಧಾನಗಳಿವೆ. ಸಾಮಾನ್ಯವಾಗಿ ಕೆಲವರ ಹುಬ್ಬು ಕೂಡಿರುತ್ತದೆ (Joint Eyebrows). ಕೆಲವರ ಹುಬ್ಬು ಕೂಡಿದ್ದರೂ ಸಹ ಅದನ್ನು ತೆಗೆಸುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಈ ರೀತಿ ಹುಬ್ಬು ಕೂಡಿದ್ದರೆ ಏನಿದರ ಅರ್ಥ ಎಂಬುದನ್ನು ತಿಳಿಸಲಾಗಿದೆ.
ಮುಖ್ಯವಾಗಿ ಹೆಣ್ಣು ಮಕ್ಕಳು ಸುಂದರವಾಗಿ ಕಾಣಬೇಕು ಎಂದು ಐ ಬ್ರೋಸ್ ಮಾಡಿಸಿಕೊಳ್ಳುತ್ತಾರೆ. ಮುಖದ ಅಂದವನ್ನು ಹಾಳು ಮಾಡುತ್ತದೆ ಎಂದು ಬ್ಯೂಟಿ ಪಾರ್ಲರ್ ನಲ್ಲಿ 2 ಹುಬ್ಬುಗಳ ಮಧ್ಯೆ ಕೂದಲಿದ್ದರೆ ಅದನ್ನು ತೆಗೆಸಿಬಿಡುತ್ತಾರೆ.
ಆದರೆ ಜ್ಯೋತಿಷ್ಯದ ಪ್ರಕಾರ ಹುಬ್ಬುಗಳು ಕೂಡಿರುವುದರ ಹಿಂದೆ ಸಹ ಒಂದು ಅರ್ಥವಿದೆ. 2 ಹುಬ್ಬುಗಳು ಕೂಡಿದ್ದರೆ ಕೆಲವರಿಗೆ ಒಳ್ಳೆಯದಾಗುತ್ತದೆ ಹಾಗೆಯೇ ಇನ್ನೂ ಕೆಲವರಿಗೆ ಅದರಿಂದ ಕೆಟ್ಟದ್ದಾಗುತ್ತದೆ ಎಂದು ಹೇಳಲಾಗುತ್ತದೆ.
ನಂಬಿಕೆಗಳ ಪ್ರಕಾರ ಹೆಣ್ಣು ಮಕ್ಕಳಿಗೆ ಹುಬ್ಬು ಕೂಡಿದ್ದರೆ ಅವರಿಗೆ ತುಂಬಾ ಒಳ್ಳೆಯದಾಗುತ್ತದೆ. ಯಾವ ಹೆಣ್ಣು ಮಕ್ಕಳ ಹುಬ್ಬು ಕೂಡಿರುತ್ತದೆಯೋ ಅವರು ಅದೃಷ್ಟವಂತರಂತೆ. ಅಲ್ಲದೇ, ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸುತ್ತಾರಂತೆ. ಅಂತಹ ಹೆಣ್ಣು ಮಕ್ಕಳು ಗಂಡನ ಮನೆಯ ಅದೃಷ್ಟ ದೇವತೆಯರಾಗುತ್ತಾರೆ. ಹಾಗಾಗಿ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಕೂಡಿರುವ ಹುಬ್ಬನ್ನ ತೆಗೆಸಬಾರದು. ಇದರಿಂದ ನಮ್ಮ ಅದೃಷ್ಟವನ್ನ ತಾವೇ ಹಾಳು ಮಾಡಿಕೊಂಡ ಹಾಗೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಇನ್ನು ಪುರುಷರ ವಿಚಾರಕ್ಕೆ ಬಂದರೆ ಜ್ಯೋತಿಷ್ಯದ ಪ್ರಕಾರ ಅವರಿಗೆ ಹುಬ್ಬು ಕೂಡಿರಲೇಬಾರದು ಎನ್ನಲಾಗುತ್ತದೆ. ಹುಬ್ಬು ಕೂಡಿರುವ ಪುರುಷರಿಗೆ ಜೀವನದಲ್ಲಿ ಸಮಸ್ಯೆಗಳು ಹೆಚ್ಚಿರುತ್ತದೆ. ಅಲ್ಲದೇ, ಕಷ್ಟಗಳು ಸಾಲು ಸಾಲಾಗಿ ಬರುತ್ತದೆ ಎನ್ನುತ್ತದೆ.
ಅಲ್ಲದೇ, ಹುಬ್ಬು ಕೂಡಿರುವ ಪುರುಷರು ಯಾವುದೇ ಕೆಲಸವನ್ನು ಮಾಡಲು ಹೊರಟರೂ ಸಹ ಬಹಳ ಕಷ್ಟಪಡಬೇಕಾಗುತ್ತದೆ. ಸಣ್ಣ ಸಣ್ಣ ವಿಚಾರಕ್ಕೂ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಸಾಧ್ಯವಾದರೆ ಪುರುಷರು ಮಧ್ಯ ಕೂಡಿರುವ ಹುಬ್ಬನ್ನ ತೆಗೆಸುವುದು ಉತ್ತಮ.
ಒಟ್ಟಿನಲ್ಲಿ ಕೂಡಿರುವ ಹುಬ್ಬುಗಳನ್ನು ಹೊಂದಿರುವ ಜನರು ತುಂಬಾ ಮಹತ್ವಾಕಾಂಕ್ಷೆಯ ವ್ಯಕ್ತಿಗಳು ಮತ್ತು ಬುದ್ಧಿವಂತರು. ಅಂತಹ ಜನರು ಸ್ವಲ್ಪ ಸ್ವಾರ್ಥಿಗಳಾಗಿರುತ್ತಾರೆ ಮತ್ತು ಯಾವಾಗಲೂ ತಮ್ಮ ಪ್ರಗತಿಯ ಬಗ್ಗೆ ಯೋಚಿಸುತ್ತಾರೆ. ಈ ಜನರು ಇತರರಿಂದ ಕೆಲಸವನ್ನು ಮಾಡಿಸಿಕೊಳ್ಳುವ ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದಾರೆ.
ಇದನ್ನೂ ಓದಿ:Heart Attack: ಮದುವೆ ಸಂಭ್ರಮದಲ್ಲಿ ಕುಣಿಯುತ್ತಿದ್ದ ವ್ಯಕ್ತಿ ಹಠಾತ್ ಹೃದಯಾಘಾತ! ವೀಡಿಯೋ ವೈರಲ್