Violating traffic rules: ಗರ್ಲ್ ಫ್ರೆಂಡ್ ಜೊತೆ ಸುತ್ತಾಡುತ್ತಿದ್ದ ಗಂಡ! ಟ್ರಾಫಿಕ್ ನಿಯಮ ಉಲ್ಲಂಘಿಸಿ ಹೆಂಡತಿಗೆ ತಗಲಾಕೊಂಡ!

Husband caught by wife for violating traffic rules

Violating traffic rules: ದೊಡ್ಡ ದೊಡ್ಡ ನಗರಗಳಲೆಲ್ಲಾ ಬೀದಿ ಬದಿಗಳಲ್ಲಿ ಅಥವಾ ಪ್ರಾಫಿಕ್ ಇರೋ ಸ್ಥಳಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾ(CC Camera) ಗಳನ್ನು ಅಳವಡಿಸಿರುತ್ತಾರೆ. ಇದು ಪೋಲೀಸರಿಗೆ(Police) ಕಳ್ಳಕಾಕರನ್ನು ಹಿಡಿಯಲು ತುಂಬಾ ಸಹಾಯ ಮಾಡುತ್ತದೆ. ಆದರೆ ಇದು ಅವರಿಗೆ ಮಾತ್ರವಲ್ಲದೆ ಇಲ್ಲೊಂದೆಡೆ ಹೆಲ್ಮೆಟ್(Helmet) ಧರಿಸದೆ, ತನ್ನ ಗರ್ಲ್ ಫ್ರೆಂಡ್(Girl Friend) ಜೊತೆ ಸ್ಕೂಟಿಯಲ್ಲಿ ಜಾಲೀ ರೇಡ್(Jally rid) ಹೋಗುತ್ತಿದ್ದ ಗಂಡನನ್ನು ಹಿಡಿಯಲು ಒಬ್ಬ ಹೆಂಡತಿಗೂ ತುಂಬಾ ಸಹಾಯ ಮಾಡಿದೆ.

 

ಹೌದು, ಟ್ರಾಫಿಕ್(Trafifc) ಅಲ್ಲಿ ಅಳವಡಿಸಿದ ಸಿಸಿಕ್ಯಾಮೆರಾ ಒಂದು ತನ್ನ ಮಹಿಳಾ ಸ್ನೇಹಿತೆಯೊಡನೆ ಸುತ್ತಾಡಲು ತೆರಳುತ್ತಿದ್ದ ವ್ಯಕ್ತಿಯೊಬ್ಬನಿಗೆ ಸಂಚಕಾರ ತಂದೊಡ್ಡಿದೆ. ಈ ವಿಚಾರವಾಗಿ ಪತ್ನಿಯೊಬ್ಬಳು ಪೊಲೀಸ್​ ಠಾಣೆ(Police Station) ಮೆಟ್ಟಿಲೇರಿರುವ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ.

ಏಪ್ರಿಲ್ 25 ರಂದು ವ್ಯಕ್ತಿಯೊಬ್ಬರು ಹೆಲ್ಮೆಟ್​ ಧರಿಸದೆ ಇದ್ದ ಕಾರಣ (Violating traffic rules) ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದರು. ಸ್ಕೂಟಿಯು ಆ ವ್ಯಕ್ತಿಯ ಪತ್ನಿಯ ಹೆಸರಿನಲ್ಲಿದ್ದ ಕಾರಣ ಅವರ ಮೊಬೈಲ್​ಗೆ ಟ್ರಾಫಿಕ್ ಪೊಲೀಸ್(Traffic Police) ಚಲನ್ ಜತೆಗೆ ಫೋಟೊವನ್ನು ಕಳುಹಿಸಿದ್ದರು. ಆದರೆ ಇದುವೇ ಆ ವ್ಯಕ್ತಿಗೆ ತಲೆನೋವಾಗಿದೆ. ಯಾಕೆಂದರೆ ಆ ಫೋಟೊದಲ್ಲಿ ಪತಿ ಜತೆ ಬೇರೊಬ್ಬ ಮಹಿಳೆ ಇರುವುದನ್ನು ನೋಡಿ ಪತ್ನಿ ಕೋಪಗೊಂಡಿದ್ದಳೆ, ಬಳಿಕ ದೂರು ದಾಖಲಿಸಿದ್ದಾಳೆ.

ಆದರೆ ಗಾರ್ಮೆಂಟ್ಸ್​(Garments) ಅಂಗಡಿಯಲ್ಲಿ ಕೆಲಸ ಮಾಡುವ 32 ವರ್ಷದ ವ್ಯಕ್ತಿ ತನಗೆ ಆ ಮಹಿಳೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾನೆ. ಆಕೆಗೆ ಲಿಫ್ಟ್​ ನೀಡಿರುವುದಾಗಿ ಹೇಳಿದ್ದಾನೆ. ಆದರೆ ಪತ್ನಿ ಈ ಮಾತು ನಂಬದ ಕಾರಣ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವಿಷಯ ಪೊಲೀಸ್​ ಠಾಣೆಯವರೆಗೂ ಹೋಗಿದೆ.

ಅಂದಹಾಗೆ ಮೇ 5 ರಂದು ನೀಡಿರುವ ದೂರಿನಲ್ಲಿ ಪತಿ ತನ್ನ 3 ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ, ಮಹಿಳೆಯ ಹೇಳಿಕೆಯ ಆಧಾರದ ಮೇಲೆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅವರನ್ನು ಐಪಿಸಿ ಸೆಕ್ಷನ್ 321,341, 294 ಮತ್ತು ಸೆಕ್ಷನ್ 75 ರ ಅಡಿಯಲ್ಲಿ ಬಂಧಿಸಲಾಗಿದೆ.

ಅದಕ್ಕೆ ಹೇಳೋದು, ನಿಮ್ಮ ಸುರಕ್ಷತೆಗಾಗಿ ದಯವಿಟ್ಟು ಹೆಲ್ಮೆಟ್ ಧರಿಸಿ ಎಂದು. ಕೇವಲ ಅಪಘಾತಗಳಿಂದ ತಪ್ಪಿಸುವುದಲ್ಲದೆ ಇಂತಹ ಸಂಚಾಕಾರಗಳಿಂದಲೂ ನೀವು ಬಚಾವ್ ಆಗಬಹುದು. ಈಗಾಲಾದರೂ ಸಂಚಾರ ನಿಯಮ ಪಾಲಿಸದಿದ್ದರೆ ಹೇಗೆಲ್ಲಾ ಸಮಸ್ಯೆಯಾಗಬಹುದು ಎಂದು ತಿಳಿಯಿತಲ್ಲಾ. ಹಾಗಾಗಿ ಇನ್ನು ಮುಂದಾದರೂ ಪ್ರತಿಯೊಬ್ಬರೂ ಸಂಚಾರ ನಿಯಮವನ್ನು ತಪ್ಪಿಲ್ಲದೇ ಪಾಲಿಸಿ. ನಿಮ್ಮ ನಿಮ್ಮ ಸುರಕ್ಷತೆಯನ್ನು ನೀವೇ ಕಾಪಾಡಿ.

ಇದನ್ನೂ ಓದಿ:Officials forgot EVM machines: ಅಯ್ಯೋ ದೇವ್ರೇ…ಮತದಾನದ ಬಳಿಕ ಇವಿಎಂ ಯಂತ್ರಗಳನ್ನು ಮತಗಟ್ಟೆಯಲ್ಲೇ ಬಿಟ್ಟು ಹೋದ ಅಧಿಕಾರಿಗಳು! ಮುಂದೇನಾಯ್ತು?

Leave A Reply

Your email address will not be published.