Officials forgot EVM machines: ಅಯ್ಯೋ ದೇವ್ರೇ…ಮತದಾನದ ಬಳಿಕ ಇವಿಎಂ ಯಂತ್ರಗಳನ್ನು ಮತಗಟ್ಟೆಯಲ್ಲೇ ಬಿಟ್ಟು ಹೋದ ಅಧಿಕಾರಿಗಳು! ಮುಂದೇನಾಯ್ತು?
Electoral Officers Forgot to take back EVM machines
Officers forgot EVM machines: ಕರ್ನಾಟಕ ವಿಧಾನಸಭೆಯ ಚುನಾವಣೆಯು(Karnataka Assembly election) ನಿನ್ನೆ ದಿನ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಕೆಲವೊಂದು ಗೊಂದಲಗಳನ್ನು ಬಿಟ್ಟರೆ ಮತ್ತೆಲ್ಲಾ ಸುಸೂತ್ರವಾಗಿ ಮತದಾನ ನಡೆದಿದೆ. ಮತ ಚಲಾಯಿಸುವಾಗ ಮತದಾರರು ಕೆಲವೊಂದು ಮಾಹಿತಿಗಳ ಕೊರತೆಯಿಂದ ತಪ್ಪು ಮಾಡುವುದು ಸಹಜ. ಆದರೆ ಇಲ್ಲೊಂದೆಡೆ ಅತ್ಯಂತ ಜಾಗರೂಕತೆಯಿಂದ ನಡೆಯಬೇಕಾದ ಚುನಾವಣೆಯಲ್ಲಿ, ಚುನಾವಣಾ ಅಧಿಕಾರಿಗಳೇ(Election Officer’s) ಎಡವಟ್ಟು ಮಾಡಿಕೊಂಡ ಪ್ರಕರಣವೊಂದು ನಡೆದಿದೆ.
ಹೌದು, ಚಿಕ್ಕಮಗಳೂರು(Chikkamagalure) ನಗರದ ಪೆನ್ಷನ್ ಮೊಹಲ್ಲಾ(Pension Mohalla) ದಲ್ಲಿ ಮತದಾರರೆಲ್ಲ ಮತಚಲಾಯಿಸಿದ ಬಳಿಕ ಬಹುಮುಖ್ಯವಾದ ಇವಿಎಂ(EVM) ಯಂತ್ರಗಳನ್ನೇ ಮತಗಟ್ಟೆಯ ಬಳಿ ಮರೆತು (Officers forgot EVM machines) ಬಿಟ್ಟುಹೋದ ಪ್ರಸಂಗ ನಡೆದಿದ್ದು ಎಲ್ಲರೂ ಹೌಹಾರುವಂತೆ ಮಾಡಿದೆ. ಅಲ್ಲದೆ ಕಾಲೇಜಿನಲ್ಲೇ ಬಿಟ್ಟುಹೋಗಿದ್ದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಈ ಕಾಲೇಜಿನಲ್ಲಿ 168 ಹಾಗೂ 169ನೇ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತದಾನದ ಬಳಿಕ 169ರ ಮತಗಟ್ಟೆಯಲ್ಲಿನ ಯಂತ್ರಗಳನ್ನು ತೆಗೆದುಕೊಂಡು ಹೋಗಿದ್ದ ಅಧಿಕಾರಿಗಳು, 168ರಲ್ಲಿನ ಯಂತ್ರಗಳನ್ನು ಬಿಟ್ಟುಹೋಗಿದ್ದರು. ನಂತರ ಈ ಮತಯಂತ್ರಗಳನ್ನು ಕಂಡ ಪಕ್ಷಗಳ ಏಜೆಂಟರು, ಸ್ಥಳೀಯರು ಚುನಾವಣಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಅಧಿಕಾರಿಗಳಿಗೆ ಕರೆ ಮಾಡಿದ ಸ್ಥಳೀಯರು, ಇವಿಎಂ ಯಂತ್ರಗಳನ್ನು ಬಿಟ್ಟುಹೋಗಿದ್ದನ್ನು ತಿಳಿಸಿ, ಸ್ಥಳಕ್ಕೆ ಕರೆಸಿದ್ದರು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಮತಯಂತ್ರಗಳನ್ನು ತೆಗೆದುಕೊಂಡು ಹೋದರು. ಪೆನ್ಷನ್ ಮೊಹಲ್ಲಾದ ಬೂತ್ನಲ್ಲಿ 700 ಮತಗಳಿವೆ, ಮತ ಎಣಿಕೆಯ ದಿನ ಅಷ್ಟೂ ಲೆಕ್ಕ ಸರಿಯಾಗಿ ಇರಬೇಕೆಂದು ಸ್ಥಳೀಯರು ತಾಕೀತು ಮಾಡಿ ಕಳಿಸಿದರು ಎನ್ನಲಾಗಿದೆ.