C.S.Puttaraju: ಒಂದೇ ಅವಧಿಯಲ್ಲಿ ಒಬ್ಬ 2 ಅಸೆಂಬ್ಲಿ, 2 ಎಂಪಿ ಚುನಾವಣೆ ಎದುರಿಸಿದ ಗಂಡು ಇದ್ರೆ ಅದು ನಾನೊಬ್ಬನೇ: ಮೇಲುಕೋಟೆ ಪುಟ್ಟರಾಜು !

C.S.Puttaraju said that 2 Assembly, 2 MP elections were faced in one period

C.S.Puttaraju: ದೇಶದಲ್ಲಿ ಒಂದೇ ಅವಧಿಯಲ್ಲಿ ಒಬ್ಬ ಎರಡು ಅಸೆಂಬ್ಲಿ, ಎರಡು ಎಂಪಿ ಚುನಾವಣೆ ಮಾಡಿರೋದು ಯಾರು ಗೊತ್ತೇ ? ಅಂದರೆ 5 ವರ್ಷಗಳ ಅವಧಿಯಲ್ಲಿ ಒಬ್ಬನೇ ಎರಡು ಅಸೆಂಬ್ಲಿ, ಎರಡು ಎಂಪಿ ಚುನಾವಣೆ ಮಾಡಿರೋದು ಇದ್ದರೆ ಅದು ನಾನು ಒಬ್ಬನೇ ಎಂದು ಕರ್ನಾಟಕದ ರಾಜಕಾರಣಿಯೊಬ್ಬರು ಹೇಳಿಕೊಂಡಿದ್ದಾರೆ.

ಮಾಜಿ ಸಚಿವ, ಮೇಲುಕೋಟೆ ಜೆಡಿಎಸ್ (JDS) ಅಭ್ಯರ್ಥಿ ಸಿ.ಎಸ್ ಪುಟ್ಟರಾಜು (C.S.Puttaraju) ಅವರು ನಾನು ಒಂದೇ ಟರ್ಮಿನಲ್ಲಿ ಎರಡು ಬಾರಿ ಎಂಪಿತ್ರಿ ಚುನಾವಣೆಯನ್ನು ಎದುರಿಸಿದವನು ಎಂದಿದ್ದಾರೆ.

ಮಂಡ್ಯ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ನಾನು ಚುನಾವಣೆ ಮಾಡೋದರಲ್ಲಿ ಪಿಹೆಚ್‍ಡಿ ಮಾಡಿಬಿಟ್ಟಿದ್ದೇನೆ. ರಾಜಕಾರಣದಲ್ಲಿ 40 ವರ್ಷ ಸರ್ವಿಸ್ ಆಗಿದೆ. ನನಗೆ ಪಿಹೆಚ್‍ಡಿ’ ಆಗಿದೆ ಎಂದಿದ್ದಾರೆ ಪುಟ್ಟರಾಜು.

ಮುಂದುವರಿಸಿ ಮಾತನಾಡಿದ ಪುಟ್ಟರಾಜುರವರು, ” ರೈತ ಸಂಘಕ್ಕೆ ಸೋಲಿನ ಹತಾಶೆ ಈಗ ಎದುರಾಗಿದೆ. ನಾನು ಸೋಲು-ಗೆಲುವು ನೋಡಿರುವವನು. ನನಗೆ ಭಯನೇ ಇಲ್ಲ. ಈ ಚುನಾವಣೆಯಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸ. ನನ್ನನ್ನು ಅತ್ಯಂತ ಬಹುಮತದಲ್ಲಿ ಗೆಲುವು ತಂದುಕೊಡುತ್ತೆ. ಈಗಾಗಲೇ ಗೆಲುವು ತೀರ್ಮಾನವಾಗಿ ಬೂತ್ ನಲ್ಲಿ.ಭದ್ರವಾಗಿದೆ ‘ ಎಂದು ಅವರು ಹೇಳಿದ್ದಾರೆ.

‘ ಈ ಪುಟ್ಟರಾಜುಗೆ ಸೋಲಿನ ಹತಾಶೆನೇ ಇಲ್ಲ. ಒಂದು ಅವಧಿಯಲ್ಲಿ ಎರಡು ಸಲ ಸೋತಿದ್ದೀನಿ, ಎರಡು ಸಲ ಗೆದ್ದಿದ್ದೀನಿ. ಈ ದೇಶದಲ್ಲಿ ಯಾವನಾದರೂ ಒಬ್ಬ ಎರಡು ಅಸೆಂಬ್ಲಿ ಚುನಾವಣೆ, ಎರಡು ಎಂಪಿ ಚುನಾವಣೆ ಮಾಡಿರೋ ಗಂಡು ಯಾರಾದ್ರು ಇದ್ರೆ, ಅದು ಪುಟ್ಟರಾಜು ಒಬ್ಬನೇ ! ಅದಕ್ಕೇ ಈಗ ಚುನಾವಣಾ ಭಯನೇ ಇಲ್ಲ. ನೂರಕ್ಕೆ ನೂರರಷ್ಟು ಈ ಬಾರಿ ಗೆಲ್ತೇನೆ. ಕನಿಷ್ಟ 25 ಸಾವಿರ ಲೀಡ್ ಇಟ್ಕೊಂಡು ಗೆಲ್ತೇನೆ. ನನ್ನ ಲೀಡ್ ಇನ್ನೂ ಬಹಳ ಮುಂದೆ ಹೋಗುತ್ತೆ ‘ ಎಂದಿದ್ದಾರೆ ಮೇಲುಕೋಟೆ ಹಾಲಿ ಶಾಸಕ ಮತ್ತು ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು.

 

ಇದನ್ನು ಓದಿ: Karnataka Government Upcoming Jobs 2023: ಸರಕಾರಿ ಉದ್ಯೋಗಾಕಾಂಕ್ಷಿಗಳೇ ಇತ್ತ ಗಮನಿಸಿ!​ ಮುಂಬರುವ ದಿನಗಳಲ್ಲಿ ಪ್ರಕಟವಾಗಲಿರುವ ಕರ್ನಾಟಕ ಸರ್ಕಾರಿ ಹುದ್ದೆಗಳ ಲಿಸ್ಟ್‌ ಇಲ್ಲಿದೆ! 

Leave A Reply

Your email address will not be published.