Election: ಮತದಾನದ ವೇಳೆ ಕುಸಿದು ಬಿದ್ದು ವೃದ್ಧೆ ಮೃತ್ಯು!

Old woman died after collapsing during the election

Election: ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ (Election) ನಡೆಯುತ್ತಿದ್ದು, ಇಂದು ಮಧ್ಯಾಹ್ನ ಮತದಾನ ವೇಳೆ 68 ವರ್ಷದ ವೃದ್ದೆಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸವದತ್ತಿ ಮತ ಕ್ಷೇತ್ರದ ಯರಝರ್ವಿ ಗ್ರಾಮದಲ್ಲಿ ಘಟನೆ ‌ನಡೆದಿದೆ.

 

ಯರಝರ್ವಿಯ ಗ್ರಾಮದ ಬೂತ್ ಸಂಖ್ಯೆ 48 ರಲ್ಲಿ ಮತದಾನಕ್ಕೆ ಬಂದಿದ್ದ ಪಾರವ್ವ ಸಿದ್ದಾಳ (68) ವೃದ್ಧೆ ಏಕಾಎಕಿ ಲೋ ಬಿಪಿ ಯಿಂದ ಪಾರವ್ವ ಸ್ಥಳದಲ್ಲಿ ಮೃತಪಟ್ಟವರಾಗಿದ್ದಾರೆ.

ಸದ್ಯ ಮತಗಟ್ಟೆಯಲ್ಲಿ ಮತ ಚಲಾಯಿಸಲು ಬಂದ ಜನರು ಈ ಘಟನೆ ನೋಡಿ ಆಂತಕಕ್ಕೆ ಈಡಾಗಿದ್ದು, ತದ ನಂತರ ಪೋಲಿಸ್ ವೃದ್ಧೆಯ ಶವವನ್ನು ಮನೆಗೆ ಸ್ಥಳಾಂತರ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎಂಬ ಮಾಹಿತಿ ತಿಳಿದು ಬಂದಿದೆ.

 

ಇದನ್ನು ಓದಿ: Vijayapura: ಮತಯಂತ್ರಗಳನ್ನು ಒಡೆದು, ಪುಡಿಗಟ್ಟಿದ ಗ್ರಾಮಸ್ಥರು! ಚುನಾವಣಾಧಿಕಾರಿ ಕಾರು ಉರುಳಿಸಿ, ಸಿಬ್ಬಂದಿಗೂ ಥಳಿಸಿದರು! 

Leave A Reply

Your email address will not be published.