Karnataka Election 2023: ಮತ ಚಲಾಯಿಸಿದ ಬಳಿಕ ಹೆಂಡ, ಮಾಂಸ ಕೊಂಡುಕೊಳ್ಳಲು ವಿಶೇಷ ಟೋಕನ್!
Token to buy wine and meat after voting
Karnataka Election 2023 : ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಕಳೆದ ರಾತ್ರಿಯವರೆಗೂ ಮನವೊಲಿಸುವಲ್ಲಿ ತೊಡಗಿದ್ದರು. ಸದ್ಯ ವಿಧಾನಸಭಾ ಚುನಾವಣೆ (Karnataka Election 2023) ಇಂದು ಬೆಳಿಗ್ಗೆ ಏಳು ಗಂಟೆಯಿಂದ ಮತದಾನ ಆರಂಭವಾಗಿದ್ದು, ಇದರ ಮಧ್ಯೆ ಚುನಾವಣಾ ಅಧಿಕಾರಿಗಳ ಕಟ್ಟುನಿಟ್ಟಿನ ಎಡೆಯಲ್ಲಿ ಹಣ, ಹೆಂಡದ ಹಂಚಿಕೆ ಆಗಿದ್ದು, ಉಡುಗೊರೆಯನ್ನೂ ಸಹ ತಲುಪಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.
ಸದ್ಯ ವಿಜಯಪುರ ಜಿಲ್ಲೆಯ ವಿಧಾನಸಭಾ ಕ್ಷೇತ್ರ ಒಂದರಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮನೆ ಮನೆ ಪ್ರಚಾರ ಮಾಡುವ ವೇಳೆ ಕರಪತ್ರದ ಜೊತೆಗೆ ಕೋಳಿ, ಕುರಿ ಮಾಂಸ ಖರೀದಿಸಲು ಮುಂಗಡವಾಗಿ ಟೋಕನ್ ವಿತರಿಸಿದ್ದಾರೆ ಎನ್ನಲಾಗಿದೆ.
ಮತ ಚಲಾವಣೆ ಮಾಡಿದ ಬಳಿಕ ನಿಗದಿಪಡಿಸಿದ ಮಾಂಸದ ಅಂಗಡಿಯಲ್ಲಿ ಟೋಕನ್ ತೋರಿಸಿ ಮಾಂಸ ಪಡೆದುಕೊಳ್ಳಬಹುದೆಂದು ತಿಳಿಸಿದ್ದಾರೆ. ಅಲ್ಲದೆ ಹಣ, ಹೆಂಡ ಹಾಗೂ ಟೋಕನ್ ನೀಡಿದ ಬಳಿಕ ತಮ್ಮ ಅಭ್ಯರ್ಥಿಗೆ ಮತ ನೀಡುವುದನ್ನು ಖಚಿತಪಡಿಸಿಕೊಳ್ಳಲು ಎಲೆ, ಅಡಿಕೆ ಹಾಗೂ ಹಾಲಿನ ಮೇಲೆ ಪ್ರಮಾಣ ಮಾಡಿಸಿಕೊಂಡಿದ್ದಾರೆ.
ಇನ್ನು ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಸಹ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ:Rajamouli: ರಾಜಮೌಳಿ ನೀಡಿದ್ರು ಮಹಾಭಾರತ ಸಿನಿಮಾ ಮಾಡೋ ಸುದ್ದಿ! ಪ್ಲ್ಯಾನ್ ಕೇಳಿದ್ರೆ ಖಂಡಿತ ನೀವು ಬೆರಗಾಗ್ತೀರ!!!