Indian Railway: ಸಾಮಾನ್ಯ ರೈಲು ಮತ್ತು ವಂದೇ ಭಾರತದ ಎಕ್ಸ್‌ಪ್ರೆಸ್‌ ನಿರ್ಮಾಣಕ್ಕೆ ಎಷ್ಟೆಲ್ಲಾ ದುಡ್ಡು ಖರ್ಚು ಆಗುತ್ತೆ? ಇಲ್ಲಿದೆ ಎಲ್ಲಾ ಮಾಹಿತಿ

Indian Railways Train Cost detail in Kannada

Indian Railways Train Cost: ಕೋಟ್ಯಾಂತರ ಜನರು ತಮ್ಮ ದಿನನಿತ್ಯ ಸಾರಿಗೆಯಾಗಿ ರೈಲನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಾರಣದಿಂದಲೇ ಇದನ್ನು ಭಾರತದ ಜೀವನ ರೇಖೆ ಎಂದೂ ಕರೆಯುತ್ತಾರೆ. ಅದಲ್ಲದೆ ಇತ್ತೀಚೆಗೆ ಭಾರತದ ರೈಲ್ವೆ ಸಂಚಾರವು (Indian Railways) ಹೆಚ್ಚಿನ ಅಭಿವೃದ್ಧಿ (development ) ಹೊಂದಿದೆ.

 

ನಾವು ರೈಲಿನಲ್ಲಿ ಟಿಕೆಟ್ ನೀಡಿ ಚಲಿಸುತ್ತೇವೆ ಆದರೆ ಯಾವತ್ತಾದರೂ ರೈಲಿನ ಬೆಲೆ ಎಷ್ಟು ಎಂದು ಯೋಚಿಸಿದ್ದು ಇದೆಯೇ! ಸಹಜವಾಗಿ ನಾವು ಸಂಚರಿಸುವ ಇತರ ವಾಹನದ ಬೆಲೆ ಅಂದಾಜು ಮಾಡಬಹುದು! ಅಂದರೆ ಆಟೋ, ಮೋಟಾರ್ ಬೈಕ್, ಸ್ಕೂಟರ್, ಕಾರು, ಬಸ್ಸು, ಟ್ರಕ್‌ಗಳ ಬೆಲೆ ನಮಗೆಲ್ಲರಿಗೂ ಗೊತ್ತು. ಆದರೆ ರೈಲಿನ ಬೆಲೆ ಊಹಿಸುವುದು ಕಷ್ಟ ಸಾಧ್ಯ ಅನಿಸುತ್ತೆ.

ಹಾಗಾದರೆ ರೈಲಿನ ಬೆಲೆ ಏನು ಅನ್ನೋದು ನೋಡೋಣ ಬನ್ನಿ. ಸಿಮಿ ಸ್ಪೀಡ್​ ರೈಲುಗಳನ್ನು ಭಾರತದಲ್ಲಿಯೂ ಓಡಿಸಲಾಗುತ್ತಿದೆ. ಪ್ರಸ್ತುತ ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತದಲ್ಲಿ 15 ಮಾರ್ಗಗಳಲ್ಲಿ ಸಂಚರಿಸುತ್ತಿದೆ. ದೇಶದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ನವದೆಹಲಿ-ವಾರಣಾಸಿ ಮಾರ್ಗದಲ್ಲಿ ಸಂಚಾರ ಆರಂಭಿಸಿತ್ತು. ಇದರ ಬೆನ್ನಲ್ಲೇ ದೇಶದ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನವದೆಹಲಿ-ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮಾರ್ಗದಲ್ಲಿ ಆರಂಭವಾಯಿತು, ಇದೀಗ ಕಳೆದ ಒಂದು ವರ್ಷದಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಿದೆ.

ಭಾರತದಲ್ಲಿ ಸಂಚರಿಸುವ ರೈಲುಗಳು ಸಾಮಾನ್ಯವಾಗಿ ಎಲೆಕ್ಟ್ರಿಕ್ ಮತ್ತು ಡೀಸೆಲ್ ಎಂಜಿನ್‌ಗಳಿಂದ ಚಾಲಿತವಾಗಿವೆ. ಈ ಎಂಜಿನ್‌ಗಳನ್ನು ತಯಾರಿಸಲು 13 ರಿಂದ 20 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಎಂಜಿನ್‌ನ ಬೆಲೆಯು ಅದರ ಶಕ್ತಿಯನ್ನು ಅವಲಂಬಿಸಿರುತ್ತದೆ ಮತ್ತು ಅದು ಎಲೆಕ್ಟ್ರಿಕ್ ಅಥವಾ ಡೀಸೆಲ್‌ನಲ್ಲಿ ಚಲಿಸುತ್ತದೆಯೇ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ.

ಮುಖ್ಯವಾಗಿ ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಅಪ್​ಡೇಟ್​ ವರ್ಸನ್​ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ನಿರ್ಮಾಣಕ್ಕೆ ಸುಮಾರು 115 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಇನ್ನು ರೈಲಿನ ಕೋಚ್ ತಯಾರಿಸಲು ಸರಾಸರಿ 2 ಕೋಟಿ ರೂಪಾಯಿ ಬೇಕಾಗುತ್ತದೆ. ಸಾಮಾನ್ಯ ದರ್ಜೆಯ ಕೋಚ್ ತಯಾರಿಕೆಗೆ ತಗಲುವ ವೆಚ್ಚ ಸ್ವಲ್ಪ ಕಡಿಮೆಯಾದರೆ, ಎಸಿ ಕ್ಲಾಸ್ ಕೋಚ್ ತಯಾರಿಕೆಗೆ ತಗಲುವ ವೆಚ್ಚ ಹೆಚ್ಚಾಗಿರುತ್ತದೆ.

ರೈಲುಗಳು ಸರಾಸರಿ 24 ಕೋಚ್‌ಗಳನ್ನು ಹೊಂದಿರುತ್ತದೆ. ಎಂಜಿನ್‌ಗೆ ಸರಾಸರಿ 18 ಕೋಟಿ ರೂ ಮತ್ತು 24 ಕೋಚ್‌ಗಳಿಗೆ 48 ಕೋಟಿ ರೂಪಾಯಿ ವೆಚ್ಛವಾಗುತ್ತದೆ. ಅಂದರೆ ನೀವು ಪ್ರಯಾಣಿಸುವ ರೈಲಿನ ಸರಾಸರಿ ವೆಚ್ಚ 66 ಕೋಟಿ ರೂಪಾಯಿಯಾಗಿದೆ ಎಂಬ ಮಾಹಿತಿ ಇದೆ. ಒಟ್ಟಿನಲ್ಲಿ 24 ಕೋಚ್‌ಗಳ ಒಂದು ರೈಲಿನ ಒಟ್ಟು ವೆಚ್ಚವನ್ನು ಅಂದಾಜಿಸಿದರೆ ಅದನ್ನು ನಿರ್ಮಿಸಲು ಸುಮಾರು 66 ಕೋಟಿ ರೂಪಾಯಿ ಅಗತ್ಯವಾಗಿದೆ.

ಇದನ್ನೂ ಓದಿ: Band-Aids color: ಇದೇನು? ಬ್ಯಾಂಡ್ ಏಡ್ ಗೆಲ್ಲ ಯಾವ ರೀತಿಯ ಟ್ರಿಕ್ಸ್?!

Leave A Reply

Your email address will not be published.