Band-Aids color: ಇದೇನು? ಬ್ಯಾಂಡ್ ಏಡ್ ಗೆಲ್ಲ ಯಾವ ರೀತಿಯ ಟ್ರಿಕ್ಸ್?!

Band-Aids color tricks

Share the Article

Band-Aids color: ಆಧುನಿಕ ಜೀವನ ಶೈಲಿಯಲ್ಲಿ ಜನರು ತಮ್ಮ ಆಲೋಚನೆಗಳನ್ನು ಎಷ್ಟರ ಮಟ್ಟಿಗೆ ಬದಲಾಯಿಸುತ್ತಾರೆ ಅಂದರೆ ಗಾಯದ ಮೇಲೆ ಬರೆ ಎಳೆಯುವಷ್ಟು ಎಂದು ಹೇಳಿದರೆ ತಪ್ಪಾಗಲಾರದು.

ಯಾಕೆಂದರೆ ಒಂದು ಬ್ಯಾಂಡ್‌ ಕೊಡಿ ಎಂದರೆ ಅಂಗಡಿಯವ ನಿಮ್ಮೆದುರು ಈವತ್ತು ನಾಲೈದು ಬಣ್ಣದ ಬ್ಯಾಂಡ್‌ಏಡ್ ಗಳನ್ನು (Band-Aids color) ಇಟ್ಟು ನಿಮಗೆ ಯಾವುದೂ ಮ್ಯಾಚ್ ಆಗುತ್ತೆ ಅದನ್ನು ಆರಿಸಿಕೊಳ್ಳಿ ಅನ್ನುತ್ತಾರೆ. ಇದು ಇವತ್ತಿನ ವಾಸ್ತವ ಸಂಗತಿ.

ಹೌದು, ನಿಮ್ಮ ಮೈಬಣ್ಣಕ್ಕೆ ಒಪ್ಪುವಂಥ ವಿವಿಧ ಛಾಯೆಯ ಬ್ಯಾಂಡ್‌ಏಡ್‌ಗಳು ಮಾರುಕಟ್ಟೆಗೆ ಬಂದಿವೆ. ಈ ಬಗ್ಗೆ ಟ್ವಿಟ್ಟರ್ ಪೋಸ್ಟ್ ಹಂಚಿರುವ ಉದ್ಯಮಿ ಹರ್ಷ ಗೋಯೆಂಕಾ ಅವರು, ಮೈಬಣ್ಣಕ್ಕೆ ಒಪ್ಪುವಂಥ ಬ್ಯಾಂಡ್‌ಏಡ್ ಅವಶ್ಯಕತೆ ನಿಜಕ್ಕೂ ಇದೆಯಾ? ಕೆಲ ಆವಿಷ್ಕಾರಗಳು ನಿಜಕ್ಕೂ ಅರ್ಥಹೀನ! ಎಂದು ಹೇಳಿದ್ದಾರೆ.

ಒಂದು ಸಣ್ಣಗಾಯಕ್ಕೆ ಅಂಟಿಸುವ ಪಟ್ಟಿಯ ಬಗ್ಗೆ ಇಷ್ಟೊಂದು ಯೋಚಿಸಿ ಕೊಳ್ಳಬೇಕಾದ ಅವಶ್ಯಕತೆ ಇದೆಯಾ? ಇದೆಲ್ಲ ಮಾರಾಟದ ಟ್ರಿಕ್ಸ್ ಎಂದು ಕೆಲವರು ಹೇಳಿದ್ದಾರೆ.

ಗಾಯಕ್ಕೆ ಹಚ್ಚಿಕೊಳ್ಳುವ ಪಟ್ಟಿ, ಯಾವ ಬಣ್ಣವಾದರೆ ಏನು? ಗಾಯ ಮಾಗಿದ ಮೇಲೆ ಕಿತ್ತೊಗೆಯುವುದೇ ಅಲ್ಲವೇ ಎಂದು ಕೇಳಿದ್ದಾರೆ ಒಬ್ಬರು. ಇನ್ನೊಬ್ಬರು ನಿಮಗಿದೆಲ್ಲ ಅರ್ಥವಾಗಲ್ಲ, ಅವರವರಿಗೆ ಅವರದೇ ಆದ ಆಯ್ಕೆಗಳಿರುತ್ತವೆ. ಆ ಪ್ರಕಾರ ಅವರು ಖರೀದಿಸುತ್ತಾರೆ ನಿಮಗೆ ಬೇಡವಾದರೆ ನೀವು ಸುಮ್ಮನಿರಿ ಎಂದಿದ್ದಾರೆ.

ಆದರೆ ಚರ್ಮದ ಬಣ್ಣಕ್ಕಾಗಿ ಜೀವಮಾನವಿಡೀ ನೊಂದುಕೊಳ್ಳುವವರ ಸಂಕಟ ನಿಮಗೇನು ಗೊತ್ತು ಎಂದು ಹೇಳಿದ್ದು ಈ ಪ್ರಶ್ನೆಗೆ ಹಲವಾರು ಜನ ಸ್ಪಂದಿಸಿದ್ದು ಇದೆ.

ಒಟ್ಟಿನಲ್ಲಿ ಬಣ್ಣಬಣ್ಣದ ಬ್ಯಾಂಡ್ ಏಡ್ ಮಾರುಕಟ್ಟೆಯಲ್ಲಿರುವುದು ಸರಿಯೋ ಅಥವಾ ತಪ್ಪೋ! ಏನೇ ಆದರೂ ಆಗುವ ಗಾಯ ಮತ್ತು ಮಾಗುವ ಪ್ರಕ್ರಿಯೆ ಒಂದೇ ಅಲ್ಲವೇ. ಇದರಿಂದ ಯಾವ ಪರಿಣಾಮ ಬೀರಲಿದೆ ಎಂಬ ಪ್ರಶ್ನೆ ಉಳಿದಿದೆ.

 

ಇದನ್ನೂ ಓದಿ: Karnataka Election 2023: ಮತ ಚಲಾಯಿಸಿದ ಬಳಿಕ ಹೆಂಡ, ಮಾಂಸ ಕೊಂಡುಕೊಳ್ಳಲು ವಿಶೇಷ ಟೋಕನ್!

Leave A Reply