The Kerala story: ಬಾಕ್ಸಾಫೀಸ್‌ನಲ್ಲಿ ಆರ್ಭಟಿಸುತ್ತಿದೆ ‘ದಿ ಕೇರಳ ಸ್ಟೋರಿ’! 3 ದಿನಕ್ಕೆ ಈ ವಿವಾದಾತ್ಮಕ ಚಿತ್ರ ಗಳಿಸಿದ್ದೆಷ್ಟು?

The Kerala Story Box office collection,

The Kerala story: ದೇಶಾದ್ಯಂತ ಭಾರೀ ಚರ್ಚೆ ಹುಟ್ಟಾಕ್ಕಿರುವ ‘ದಿ ಕೇರಳ ಸ್ಟೋರಿ’ ನಿಧಾನವಾಗಿ ಸದ್ದು ಮಾಡಲು ಆರಂಭಿಸಿದೆ. ತಮಿಳು ನಾಡು (Tamil Nadu) ಹಾಗೂ ಕೇರಳದಲ್ಲಿ (Kerala) ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರಕ್ಕೆ ಅಷ್ಟೇನೂ ಸ್ಪಂದನೆ ಸಿಗದೇ ಇದ್ದರೂ, ಇತರ ರಾಜ್ಯಗಳಲ್ಲಿ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಕೆಲವೆಡೆ ಸಿನಿಮಾ ಪ್ರದರ್ಶನ ನಿಲ್ಲಿಸಲಾಗುತ್ತಿದೆ. ಆದರೂ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ರಿಲೀಸ್ ದಿನ ಚಿತ್ರಕ್ಕೆ ಅಷ್ಟೇನೂ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಆದರೆ, ಶನಿವಾರದಿಂದ ಬಹುತೇಕ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ವಿವಾದದ ನಡುವೆಯೂ ಚಿತ್ರದ ಮೂರು ದಿನದ ಗಳಿಕೆ ಕೇಳಿದ್ರೆ ನೀವೂ ಹುಬ್ಬೇರಿಸುತ್ತೀರ!

ಹೌದು, ಮತ್ತೊಂದು ‘ಕಾಶ್ಮೀರ್ ಫೈಲ್ಸ್'(The Kashmiri files) ಆಗುವ ಸುಳಿವು ನೀಡುತ್ತಿರೋ ‘ದಿ ಕೇರಳ ಸ್ಟೋರಿ’ ರಿಲೀಸ್ ಆದ ಮೊದಲ ದಿನದ (ಶುಕ್ರವಾರ) ಗಳಿಕೆ 8.03 ಕೋಟಿ ರೂ., ಎರಡನೇ ದಿನ (ಶನಿವಾರ) ಗಳಿಕೆ 11.22 ಕೋಟಿ ರೂಪಾಯಿ ಮೂರನೇ ದಿನ (ರವಿವಾರ) ಗಳಿಕೆ 16 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮೂರು ದಿನದ ಒಟ್ಟು ಆದಾಯ 35.25 ಕೋಟಿ ಎಂದು ಬಾಲಿವುಡ್(Bollywood) ಸಿನಿಮಾ ಲೆಕ್ಕಿಗ ತರುಣ್ ಆದರ್ಶ(Tarun Adarsha) ಟ್ವೀಟ್ ಮಾಡಿ, ಕೆಲವು ಸಿನಿಮಾಗಳ ಕಂಪೇರ್ ಕೂಡ ಅವರು ಮಾಡಿದ್ದಾರೆ.

ಅಂದಹಾಗೆ ಸುದೀಪ್ತೊ ಸೇನ್(Sudeepto Sen) ನಿರ್ದೇಶನದ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಅದಾ ಶರ್ಮಾ(Ada Sharma), ಯೋಗಿತಾ ಬಿಹಾನಿ(Yogita Bihani) ಹಾಗೂ ಸೋನಿಯಾ ಬಾಲಾನಿ ಲೀಡ್‌(Sonia Balani leed) ರೋಲ್‌ಗಳಲ್ಲಿ ನಟಿಸಿದ್ದಾರೆ. ರಿಲೀಸ್‌ಗೂ ಮೊದಲೇ ಈ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಎಂದು ಕೇರಳದಲ್ಲಿ ಒತ್ತಡ ಶುರುವಾಗಿತ್ತು. ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳೇ ಸಿನಿಮಾ ಬಿಡುಗಡೆ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸಿನಿಮಾ ಬಿಡುಗಡೆಗೆ ಕೋರ್ಟ್ ಅಸ್ತು ಎಂದಿತ್ತು. ಇದೀಗ ಫಸ್ಟ್‌ ವೀಕೆಂಡ್ ಮುಗಿಸಿ 4ನೇ ದಿನ ಸಿನಿಮಾ ಪ್ರದರ್ಶನ ಕಾಣ್ತಿದೆ.

ಐಪಿಎಲ್‌(IPL) ಭರಾಟೆ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೀತಿರೋ ‘ದಿ ಕೇರಳ ಸ್ಟೋರಿ’ ಯು ಕೇರಳದಲ್ಲಿ ಬಲವಂತವಾಗಿ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಿ ಅವರನ್ನು ಭಯೋತ್ಪಾದನೆಗೆ ದೂಡಲಾಗುತ್ತಿದೆ ಎನ್ನುವ ವಿಚಾರವನ್ನಿಟ್ಟುಕೊಂಡು ನಿರ್ಮಿಸಿದ ಸಿನಿಮಾ ಆಗಿದೆ. ವ್ಯವಸ್ಥಿತ ಮತಾಂತರ ಸುತ್ತಾ ಸಿನಿಮಾ ಕಥೆ ಸುತ್ತುತ್ತದೆ. ಈ ಸಿನಿಮಾದಲ್ಲಿ ಹೇಳಿರುವುದು ಕಟ್ಟು ಕತೆ, ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಸಿನಿಮಾ ಬಿಡುಗಡೆ ಮಾಡಲು ಅವಕಾಶ ಕೊಡಬಾರದು ಎಂದು ಕೆಲವರು ಆಗ್ರಹಿಸಿದ್ದರು.

ಈಗಾಗಲೇ ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ. ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ.

ಅಲ್ಲದೆ ಚಿತ್ರಕ್ಕೆ ಸಿಗುತ್ತಿರುವ ನೀರಸ ಪ್ರತಿಕ್ರಿಯೆ ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ತಮಿಳುನಾಡಿನ ಬಹುತೇಕ ಕಡೆಗಳಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿದೆ. ಇದರ ಬೆನ್ನಲೇ ಪಶ್ಚಿಮ ಬಂಗಾಳ (West Bengal) ಸರ್ಕಾರವು ವಿವಾದಾತ್ಮಕ ಚಿತ್ರ ‘ದಿ ಕೇರಳ ಸ್ಟೋರಿ’ಯನ್ನು (The Kerala Story) ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವುದನ್ನು ನಿಷೇಧಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಈ ವಿವಾದಾತ್ಮಕ ಚಿತ್ರದ ಪದರ್ಶನವನ್ನು ತಕ್ಷಣವೇ ನಿಷೇಧಿಸುವಂತೆ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:Brazil : 16ರ ಪೋರಿಯನ್ನು ವರಿಸಿದ ಬೊಚ್ಚು ಬಾಯಿ, ಬೋಳು ತಲೆಯ 65ರ ಮೇಯರ್! ಬ್ಯೂಟಿಫುಲ್ ಹೆಂಡ್ತಿಗಾಗಿ ಅತ್ತೆಗೆ ನೀಡಿದ ಆಫರ್ ಕೇಳಿದ್ರೆ ಶಾಕ್ ಆಗ್ತೀರಾ!

Leave A Reply

Your email address will not be published.