Karnataka Election 2023: ವೋಟಿಂಗ್ ಗಾಗಿ ಅಲಂಕೃತಗೊಂಡ ಮತಗಟ್ಟೆಗಳು!

Polling booths are prepared for Karnataka Election 2023 voting

Karnataka Election 2023: ಕರ್ನಾಟಕ ವಿಧಾನಸಭೆ ಚುನಾವಣೆ ನಾಳೆ ಮೇ10 ರಂದು ಮತದಾನ ನಡೆಯಲಿದ್ದು, 13 ರಂದು ಮತ ಎಣಿಕೆ ನಡೆಯಲಿದೆ. ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ (2023 Karnataka Elections) ಸಿದ್ಧತೆ ಭರದಿಂದ ಸಾಗುತ್ತಿದೆ. ಅಂತೆಯೇ, ಮತಗಟ್ಟೆಗೆ ತೆರಳಲು ಚುನಾವಣಾ ಸಿಬ್ಬಂದಿಗಳು ಸಜ್ಜಾಗಿದ್ದಾರೆ. ಬೂತ್ ಗಳಿಗೆ ತೆರಳಲು ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ರೆಡಿಯಾಗಿದೆ. ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

 

ಚುನಾವಣೆ ನಡೆಸಲು ಹಾಗೂ ಅಹಿತಕರ ಘಟನೆ ನಡೆಯಂತೆ ಮುಂಜಾಗ್ರತ ಕ್ರಮ ರಾಜ್ಯ ಪೊಲೀಸ್ ಇಲಾಖೆ ಭರ್ಜರಿ ಸಿದ್ಧತೆ ನಡೆಸಿದೆ.

ಕೇಂದ್ರಿಯ ಪಡೆ, ಅನ್ಯ ರಾಜ್ಯಗಳ ಪೊಲೀಸರು ಸೇರಿದಂತೆ‌ ಕಾರ್ಯ ನಿರ್ವಹಿಸಲು ಸಿದ್ದರಾಗಿದ್ದಾರೆ. ಚುನಾವಣಾ ಕರ್ತವ್ಯಕ್ಕಾಗಿ 304 ಡಿವೈಎಸ್‌ಪಿಗಳು, 991 ಇನ್ ಸ್ಪೆಕ್ಟರ್, 2,610 ಪಿಎಸ್‌ಐ, 5,803 ಎಎಸ್‌, 46,421 ಹೆಚ್‌ಸಿ ಹಾಗೂ ಪಿಸಿ 27,990 ಹೋಂ ಗಾರ್ಡ್ಸ್ ಸೇರಿದಂತೆ ಒಟ್ಟು 84,119 ಮತ್ತು ಸಿಬ್ಬಂದಿಯನ್ನ ನೇಮಿಸಲಾಗಿದೆ.

ಅದಲ್ಲದೆ ಅವಶ್ಯಕತೆಗನುಗುಣವಾಗಿ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆಯನ್ನು ಸರಿದೂಗಿಸಲು ಹೊರ ರಾಜ್ಯಗಳಿಂದ ಸುಮಾರು 8,500 ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಹಾಗೂ ಗೃಹ ರಕ್ಷಕರನ್ನು ಕರೆಸಲಾಗಿದೆ.

650 ಸಿಎಪಿಎಫ್ ಕಂಪನಿಗಳ ಜೊತೆಗೆ ರಾಜ್ಯ ಸಶಸ್ತ್ರ ಮೀಸಲು ಪಡೆ ಸಹ ನಿಯೋಜಿಸಲಾಗಿದೆ. ಒಟ್ಟಾರೆಯಾಗಿ 1,56,000 .ಪೊಲೀಸ್‌ ಅಧಿಕಾರಿ/ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನೇಮಿಸಲಾಗಿದೆ.

ಒಟ್ಟು 58,282 ಮತಗಟ್ಟೆಗಳಿದ್ದು, ಅದರಲ್ಲಿ 11,617 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಅನುಗುಣವಾಗಿ ಸೂಕ್ಷ್ಮ ಮತಗಟ್ಟೆಗಳಿಗೆ ಪೊಲೀಸ್ ಸಿಬ್ಬಂದಿ ಜೊತೆಗೆ ಹೆಚ್ಚುವರಿಯಾಗಿ ಸಿಎಪಿಎಫ್ ಕಂಪನಿಗಳನ್ನು ನಿಯೋಜಿಸಲಾಗಿದೆ.

ಸದ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಹಾವೇರಿ ಜಿಲ್ಲೆಯಲ್ಲಿ ಒಟ್ಟು 1471 ಮತಗಟ್ಟೆಗಳು. 6476 ಸಿಬ್ಬಂಧಿಗಳ ನಿಯೋಜನೆ ಮಾಡಲಾಗಿದ್ದು, ಹಾವೇರಿ ಜಿಲ್ಲೆಯಲ್ಲಿ 13,02,683 ಒಟ್ಟು ಮತದಾರರು. ಪುರುಷ ಮತದಾರರು 6,65,617. ಮಹಿಳಾ ಮತದಾರರು 6,37,019. ಇತರೆ ಮತದಾರರು 47 ಇದ್ದಾರೆ . ಇಲ್ಲಿ ಚುನಾವಣೆ ಕಾರ್ಯಕ್ಕಾಗಿ ಒಟ್ಟು 223 ಬಸ್ 29 ಜೀಪ್, 22ಮ್ಯಾಕ್ಸಿ ಕ್ಯಾಬ್ ಬಳಕೆ ಆಗಲಿದೆ . ಇನ್ನು ಚುನಾವಣಾ ಸಿಬ್ಬಂದಿಗಳಿಗೆ ಮತಯಂತ್ರ ಸೇರಿದಂತೆ ಅಗತ್ಯ ಸಾಮಗ್ರಿಗಳ ಪೂರೈಕೆ ಮಾಡಲಾಗಿದೆ.

ಇನ್ನು ಮತದಾನದ ಕುರಿತು ಪೂರ್ಣ ಮಾಹಿತಿ ನೀಡಿದ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಪ್ರಕಾರ, ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 1,135 ಮತಗಟ್ಟೆಗಳಿದ್ದು, 9,99,959 ಮತದಾರರಿದ್ದಾರೆ. 5,01,254 ಲಕ್ಷ ಪುರುಷ ಹಾಗೂ 4,98,648 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಜಿಲ್ಲೆಯಲ್ಲಿ 56 ವಲ್ನರೇಬಲ್ ಹಾಗೂ 233 ಕ್ರಿಟಿಕಲ್ ಮತಗಟ್ಟೆಗಳಿವೆ.

ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತದಾನ ದಿನದಂದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲು ಹಾಗೂ ಭದ್ರತೆಗೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 1,738 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಭದ್ರತಾ ಕಾರ್ಯಕ್ಕೆಂದೇ ಸುಮಾರು 3500 ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ.

 

ಇದನ್ನು ಓದಿ: Kannada movie stars vote: ಕನ್ನಡ ಸಿನಿಮಾ ತಾರೆಯರು ಯಾರೆಲ್ಲ ನಾಳೆ ಎಲ್ಲೆಲ್ಲಿ ಮತ ಚಲಾಯಿಸುತ್ತಾರೆ? ಮಾಹಿತಿ ಇಲ್ಲಿದೆ 

Leave A Reply

Your email address will not be published.