Karnataka Assembly Election 2023: ಮತದಾನ ಮಾಡುವವರಿಗೆ ಉಚಿತ ಹೋಟೆಲ್ ಊಟದ ಘೋಷಣೆ- ಮಾಲೀಕರಿಗೆ ಬಿಗ್ ಶಾಕಿಂಗ್ ನ್ಯೂಸ್
Karnataka Assembly Election 2023 Announcement of free hotel meals for voters
Karnataka Assembly Election 2023: ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರ ಸಂಬಂಧ ದಿನಾಂಕ: 29-03-2023 ರಿಂದ ಮಾದರಿ ನೀತಿ ಸಂಹಿತಿಯು ಜಾರಿಯಲ್ಲಿರುವ ಸಂದರ್ಭದಲ್ಲಿ, ನಾಳೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election
2023 ) ಮತಹಾಕಿದವರಿಗೆ
ಉಚಿತ ತಿಂಡಿ, ಊಟ ನೀಡುವುದಾಗಿ (Free Meals) ಕೆಲ ಹೋಟೆಲ್ ಗಳ ಮಾಲೀಕರು (Hotel Owner ) ಘೋಷಣೆ ಮಾಡಿದ್ದರು. ಅದಲ್ಲದೆ ಹೋಟೆಲ್ ಮುಂದೆ ಬೋರ್ಡ್ ಕೂಡ ಹಾಕಿದ್ದರು.
ಹೌದು, ಕೆಲ ಹೋಟೆಲ್‌ಗಳ ಮುಂಭಾಗದಲ್ಲಿ ಉಚಿತವಾಗಿ/ ರಿಯಾಯಿತಿ ದರದಲ್ಲಿ ತಿಂಡಿ, ಪಾನಿಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವುದಾಗಿ ಬೋರ್ಡ್‌ಗಳನ್ನು ಅಳವಡಿಸಿ ಸೌಲಭ್ಯ ಒದಗಿಸಿರುವ ಬಗ್ಗೆ ಕಂಡು ಬಂದಿದ್ದವು.
ಈಗಾಗಲೇ ಕೆಲವು ಪತ್ರಿಕೆಗಳಲ್ಲಿ ಕೆಲವೊಂದು ಹೋಟೆಲ್‌ಗಳ ಮುಂಭಾಗದಲ್ಲಿ ದಿನಾಂಕ: 10-05- 2023 ರಂದು ಮತದಾನ ಮಾಡಿ ಬರುವ ಮತದಾರರು ಗುರುತು ತೋರಿಸಿದಲ್ಲಿ ಉಚಿತವಾಗಿ/ ರಿಯಾಯಿತಿ ದರದಲ್ಲಿ ತಿಂಡಿ, ಪಾನಿಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವುದಾಗಿ ಬೋರ್ಡ್‌ಗಳನ್ನು ಅಳವಡಿಸಿರುವುದು ಕಂಡುಬಂದಿದ್ದು, ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು (Considered as Inducement and violation of MCC) ಈ ರೀತಿಯ ಪ್ರಕಟಣೆಗಳಿಗೆ ಸಂಬಂಧಿಸಿದ ಹೋಟೆಲ್ ಮಾಲೀಕರನ್ನೇ ನೇರ ಹೊಣೆಗಾರರನ್ನಾಗಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಉಚಿತ ತಿಂಡಿ, ಊಟ ನೀಡುವುದಾಗಿ, ಬೋರ್ಡ್ ಹಾಕಿರುವ ಇಂತಹ ಮಾಲೀಕರಿಗೆ ನೀತಿ ಸಂಹಿತೆಯ ಉಲ್ಲಂಘನೆ ಆಗಲಿದೆ. ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಚುನಾವಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ಬಿಬಿಎಂಪಿಯ ಚುನಾವಣಾ ಸಹಾಯಕ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.