2nd PUC Supplementary Exam 2023 Schedule: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಪರಿಷ್ಕೃತ ದಿನಾಂಕ ಪ್ರಕಟ

2nd-puc-supplementary-exam-2023-schedule-released-by-pu-board

2nd PUC Supplementary Exam 2023 Schedule: 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ. ನೀವು ಪೂರಕ ಪರೀಕ್ಷೆ ( 2nd PUC Supplementary Exam 2023 Schedule) ಬರೆದು ಪಾಸ್ ಆಗಬಹುದಾಗಿದ್ದು, ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಪರಿಷ್ಕೃತ ದಿನಾಂಕ ಪ್ರಕಟಿಸಲಾಗಿದೆ.

 

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಪರಿಷ್ಕೃತ ದಿನಾಂಕ ಪ್ರಕಟ ಮಾಡಿದೆ. ಪೂರಕ ಪರೀಕ್ಷೆಯ ದಿನಾಂಕ, ವೇಳಾಪಟ್ಟಿ ಸೇರಿದಂತೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 21ರಿಂದ ಏಪ್ರಿಲ್ 26ರ ವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ (2nd PUC Supplementary Exam) ಪರಿಷ್ಕೃತ ದಿನಾಂಕ, ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೇ 23ರಿಂದ ಜೂನ್ 2 ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದೆ.

ಸಿಇಟಿ ಕನ್ನಡ ಭಾಷಾ ಪರೀಕ್ಷೆಯು ಮೇ 22ರಂದು ಆಯೋಜನೆಯಾದ ಹಿನ್ನಲೆ ಅಂದು ಪ್ರಾರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ದಿನಾಂಕ ಬದಲಿಸಲಾಗಿದೆ. ಮೇ 23 ರಿಂದ ಜೂನ್ 3ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಪರಿಷ್ಕೃತ ದಿನಾಂಕ ಪ್ರಕಟಿಸಲಾಗಿದೆ.

ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2023 ವೇಳಾಪಟ್ಟಿಯ ವಿವರ ಹೀಗಿದೆ:-

23/5/2023 – ಕನ್ನಡ ಅರಾಬಿಕ್
24 /5/2023 – ಐಚ್ಚಿಕ ಕನ್ನಡ, ರಸಾಯನ ಶಾಸ್ತ್ರ, ಮೂಲ ಗಣಿತ
25/5/ 2023- ಇಂಗ್ಲಿಷ್,ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್ , ಬ್ಯೂಟಿ ಅಂಡ್ ವೆಲ್ನೆಸ್
26 /5/ 2023 – ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
27 /5/ 2023- ಇತಿಹಾಸ, ಸಂಖ್ಯಾಶಾಸ್ತ್ರ
29 /5/ 2023- ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ
ಉರ್ದು, ಸಂಸ್ಕೃತ, ಫ್ರೆಂಚ್
30 /5/ 2023 – ಭೂಗೋಳಿಕಶಾಸ್ತ್ರ, ಮನಃಶಾಸ್ತ್ರ, ಬೌತಶಾಸ್ತ್ರ
31 /5/ 2023- ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ
1 /6/ 2023- ರಾಜ್ಯ ಶಾಸ್ತ್ರ, ಗಣಿತ ಶಾಸ್ತ್ರ
2/6/ 2023- ತರ್ಕ ಶಾಸ್ತ್ರ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ
3 /6 2023- ಅರ್ಥಶಾಸ್ತ್ರ, ಜೀವಶಾಸ್ತ್ರ

ಇದನ್ನೂ ಓದಿ: ಜನರೇ ಗಮನಿಸಿ; ಮತಗಟ್ಟೆಗೆ ಹೋಗೋ ಮುನ್ನ ಯಾವ ದಾಖಲೆ ಬೇಕು?

Leave A Reply

Your email address will not be published.