2023 Karnataka Elections: ಜನರೇ ಗಮನಿಸಿ; ಮತಗಟ್ಟೆಗೆ ಹೋಗೋ ಮುನ್ನ ಯಾವ ದಾಖಲೆ ಬೇಕು? ಇವಿಷ್ಟು ನಿಮ್ಮ ಬಳಿ ಇರಲಿ!

Documents are required before going to polling booth

2023 Karnataka Elections: ನಾಳೆ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ (2023 Karnataka Elections) ಸಿದ್ಧತೆ ಭರದಿಂದ ಸಾಗುತ್ತಿದೆ. ಆದರೆ ಮತಗಟ್ಟೆಗೆ ತೆರಳೋ ಮುನ್ನ ಈ ದಾಖಲೆಗಳನ್ನು ಮರೆಯದಿರಿ.

 

ಹೌದು, ಮತದಾನ ಮಾಡುವ ಪ್ರತಿಯೊಬ್ಬರು ತಮ್ಮ ಗುರುತಿನ ಚೀಟಿಯನ್ನು ಚುನಾವಣಾಧಿಕಾರಿಗಳಿಗೆ ತೋರಿಸಬೇಕಾಗುತ್ತದೆ. ಆದರೆ ವೋಟರ್​ ಐಡಿ ಇಲ್ಲದಿದ್ರೂ ಇತರೆ ದಾಖಲೆಗಳ ಮೂಲಕ ನೀವು ವೋಟ್​ ಮಾಡಲು ಅವಕಾಶ ನೀಡಲಾಗಿದೆ.

ನಿಮ್ಮ ಬಳಿ ಎಲೆಕ್ಷನ್ ಐಡಿ ಇಲ್ಲದಿದ್ರೆ ಆಧಾರ್ ಕಾರ್ಡ್ ಸಹ ಕೊಂಡಯ್ಯಬಹುದು ಅಥವಾ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ತೋರಿಸಿ ನೀವು ನಾಳೆ ವೋಟ್ ಹಾಕಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ತಮ್ಮ ಐಡಿ ಕಾರ್ಡ್ ತೋರಿಸಿ ಮತ ಹಾಕಬಹುದು.

ಇನ್ನು ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್‌ಗಳಲ್ಲಿ ಕೊಡುವ ಫೋಟೋ ಸಹಿತ ಪಾಸ್‌ ಬುಕ್ ತೋರಿಸಿ ನಾಳೆ ಮತದಾನ ಮಾಡಬಹುದು.ಅಥವಾ ಜಾಬ್ ಕಾರ್ಡ್, ನರೇಗಾ ಜಾಬ್ ಕಾರ್ಡ್‌ ಮೂಲಕವೂ ಮತ ಹಾಕಬಹುದು. ಕಾರ್ಮಿಕ ಇಲಾಖೆ ನೀಡುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್ ಮೂಲಕವೂ ಮತ ಹಾಕಬಹುದು.

ಇನ್ನು NPR ಅಡಿಯಲ್ಲಿ RGI ವಿತರಿಸಿರುವ ಸ್ಮಾರ್ಟ್ ಕಾರ್ಡ್, ಭಾವಚಿತ್ರವುಳ್ಳ ಪಿಂಚಣಿ ದಾಖಲೆಗಳು, ಕೇಂದ್ರ/ರಾಜ್ಯ ಸರ್ಕಾರಿ ಉದ್ಯೋಗಿಗಳ ಫೋಟೋ ಗುರುತಿನ ಚೀಟಿ ಮೂಲಕ ಮತ ಹಾಕಬಹುದಾಗಿದೆ.

ಶಾಸಕ/ಸಂಸದ/ವಿಧಾನ ಪರಿಷತ್ ಸದಸ್ಯರು ನೀಡಿರುವ ಗುರುತಿನ ಚೀಟಿ, ಯುನಿಕ್ ಡಿಸ್​ಎಬಿಲಿಟಿ ಕಾರ್ಡ್ (UDID) ತೋರಿಸಿ ಮತ ಚಲಾಯಿಸಬಹುದು.

ಆದರೆ ನೆನಪಿರಲಿ! ವೋಟರ್​ ಲಿಸ್ಟ್​​ನಲ್ಲಿ ನಿಮ್ಮ ಹೆಸರು ಇರಬೇಕು. ಒಂದು ವೇಳೆ ನಿಮ್ಮ ಬಳಿ ವೋಟರ್ ಐಡಿ ಕಾರ್ಡ್ ಇದ್ದರೂ ಕೂಡಾ ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇಲ್ಲವಾದಲ್ಲಿ ಮತದಾನ ಮಾಡೋಕೆ ಸಾಧ್ಯವಿಲ್ಲ.

ಇದನ್ನೂ ಓದಿ:Anil Lad: ಎಲೆಕ್ಷನ್ ಮೊದಲೇ ಸೋಲೊಪ್ಪಿಕೊಂಡ ಜೆಡಿಎಸ್ ಅಭ್ಯರ್ಥಿ ಅನಿಲ್ ಲಾಡ್!! ಎನಂದ್ರು ಅನಿಲ್?

Leave A Reply

Your email address will not be published.