Home Breaking Entertainment News Kannada Fast and Furious: ‘ಫಾಸ್ಟ್ & ಫ್ಯೂರಿಯಸ್’ ಸಿನಿಮಾ ನೋಡೋರಿಗೆ ವೆಬ್‌ಸೈಟ್‌ ಕೊಡ್ತು ಬಿಗ್...

Fast and Furious: ‘ಫಾಸ್ಟ್ & ಫ್ಯೂರಿಯಸ್’ ಸಿನಿಮಾ ನೋಡೋರಿಗೆ ವೆಬ್‌ಸೈಟ್‌ ಕೊಡ್ತು ಬಿಗ್ ಆಫರ್! ಎಲ್ಲಾ ಸಿನಿಮಾವನ್ನು ವೀಕ್ಷಿಸಿದ್ರೆ ನಿಮಗೆ ಸಿಗುತ್ತೆ 1 ಸಾವಿರ ಡಾಲರ್!

Fast and Furious
Image source- Leclaireur.finac.com

Hindu neighbor gifts plot of land

Hindu neighbour gifts land to Muslim journalist

Fast and Furious: ಕೆಲವು ಜನಪ್ರಿಯ ಸಿನಿಮಾ ಹಾಗೂ ಸೀರೀಸ್(series) ಗಳನ್ನು ನೋಡಲು ಬೇರೆ ಬೇರೆ ವೆಬ್ಸೈಟ್(Website) ಗಳಿಗೆ ನಾವೇ ಹಣ ಪಾವತಿಸಬೇಕಾಗತ್ತದೆ. ಆದರೆ ಇಲ್ಲೊಂದು ವೆಬ್ಸೈಟ್ ತನ್ನ ಗ್ರಾಹಕರಿಗೆ ಒಂದು ಬಿಗ್ ಆಫರ್ ನೀಡಿದ್ದು ತನ್ನೆಲ್ಲಾ ಸೀರೀಸ್ ಗಳನ್ನು ವೀಕ್ಷಿಸಿದ ವೀಕ್ಷಕರಿಗೆ ಬರೋಬ್ಬರಿ 1 ಸಾವಿರ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದೆ.

ಹೌದು, ‘ಫಾಸ್ಟ್ ಅಂಡ್ ಫ್ಯೂರಿಯಸ್‘ (Fast and Furious) ಫ್ರ್ಯಾಂಚೈಸ್‌ನ ಎಲ್ಲಾ ಚಲನಚಿತ್ರಗಳನ್ನು ವೀಕ್ಷಿಸಲು ಸಿದ್ಧರಾಗಿರುವ ಯಾರಿಗಾದರೂ ಹಣಕಾಸಿನ ವೆಬ್‌ಸೈಟೊಂದು 1,000(81, 760 ರೂಪಾಯಿ) ಡಾಲರ್ ನೀಡಲಿದೆ ಎಂದು CNN ವರದಿ ಮಾಡಿದೆ. ಫೈನಾನ್ಸ್‌ಬಝ್ (FinanceBuzz) ಹೆಸರಿನ ಈ ಹಣಕಾಸಿಗೆ ಸಂಬಂಧಿಸಿದ ವೆಬ್‌ಸೈಟ್‌ ಈ ಆಫರ್ ನೀಡಿದ್ದು, ಇದು, ಹಣ ಸಂಬಂಧಿತ ಸಲಹೆಗಳು ಮತ್ತು ಶಿಫಾರಸುಗಳನ್ನು ನೀಡುವ ಮಾಹಿತಿಯ ಸೈಟ್ ಆಗಿದೆ. ಹಾಲಿವುಡ್ ನಟ ವಿನ್ ಡೀಸೆಲ್ ನಟಿಸಿದ ಜಾಗತಿಕ ಆಕ್ಷನ್ ಸಿನಿಮಾದ ಎಲ್ಲಾ 10 ಚಲನಚಿತ್ರಗಳನ್ನು ವೀಕ್ಷಿಸಲು ಬಯಸುವವರಿಗೆ ಈ ಸಂಸ್ಥೆ ಟಾಸ್ಕ್ ಜೊತೆ 1000 ಡಾಲರ್ ಹಣ ನೀಡುವ ಘೋಷಣೆ ಮಾಡಿದೆ.

ಹಾಗಂತ ಕೂಡಲೇ ಸಿನಿಮಾ ನೋಡಲು ಮುಂದಾಗಬೇಡಿ. ಯಾಕೆಂದ್ರೆ ಸುಮ್ಮನೇ ಸಿನಿಮಾ ನೋಡುವುದಲ್ಲ, ಸಿನಿಮಾ ನೋಡುವವರಿಗೆ ವೆಬ್‌ಸೈಟ್‌ ಒಂದು ಟಾಸ್ಕ್ ನೀಡಿದ್ದು, ಸಿನಿಮಾ ನೋಡುವವರು, ಈ ಸಿನಿಮಾದಲ್ಲಿ ಆಗುವ ಕಾರು ಅಪಘಾತಗಳು, ಹಾನಿಯ ಪ್ರಮಾಣ ಹಾಗೂ ಯಾವ ಕಾರನ್ನು ಬಳಸಲಾಗಿದೆ ಎಂಬ ಪ್ರತಿಯೊಂದು ಅಂಶವನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಅಂದಹಾಗೆ ವೆಬ್‌ಸೈಟ್‌ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಮುಂಬರುವ ಮೇ 19 ರಂದು ‘ಫಾಸ್ಟ್ ಎಕ್ಸ್’ ಬಿಡುಗಡೆಯಾಗಲಿದೆ. ಇದಕ್ಕೂ ಮುಂಚಿತವಾಗಿ, ಈ ಸೀರೀಸ್ ನ ಪ್ರತಿ ಸಿನಿಮಾದಲ್ಲಿ ಸಂಭವಿಸುವ ಪ್ರತಿ ಕಾರು ಅಪಘಾತದಿಂದ ಆದ ಹಾನಿಯನ್ನು ಪತ್ತೆಹಚ್ಚುವುದು ಇದರ ಹಿಂದಿನ ಉದ್ದೇಶವಾಗಿದೆ.

ಇನ್ನು ವೆಬ್‌ಸೈಟ್ ನೀಡಿರುವ ಆಫರ್ ಪ್ರಕಾರ, ಫಾಸ್ಟ್ & ಫ್ಯೂರಿಯಸ್ ಫ್ರ್ಯಾಂಚೈಸ್‌ನಲ್ಲಿ ಎಲ್ಲಾ 10 ಚಲನಚಿತ್ರಗಳನ್ನು ವೀಕ್ಷಿಸಲು ವೆಬ್ಸೈಟ್ ಯಾರನ್ನಾದರೂ ಹುಡುಕುತ್ತಿದೆಯಂತೆ. ಇದನ್ನು ವೀಕ್ಷಿಸಿದವರು, ಅಂದರೆ ಸ್ಪರ್ಧೆಯ ವಿಜೇತರು ಪ್ರತಿ ಕಾರ್ ಅಪಘಾತವನ್ನು ಎಚ್ಚರಿಕೆಯಿಂದ ಗಮನಿಸಬೇಕು, ಜೊತೆಗೆ ಅದು ಉಂಟು ಮಾಡಿದ ಹಾನಿಯ ಪ್ರಮಾಣವನ್ನು ತಿಳಿಸಬೇಕು ಹಾಗೂ ಯಾವ ಕಾರು ಅಪಘಾತಕ್ಕೊಳಗಾಗಿದೆ ಎಂಬುದನ್ನು ತಿಳಿಸಬೇಕು.

ಅಲ್ಲದೆ ಇದು Nitrous oxide ಇಂಧನ ಇರುವ ಕಾರು ರೇಸ್‌ಗೆ ಸಂಬಂಧಿಸಿದ ಕತೆ ಆಗಿದ್ದು, 20 ಗಂಟೆಗಳಿಗಿಂತ ಹೆಚ್ಚು, ಇರುವ ಈ ಸಿನಿಮಾಗಳ ವೀಕ್ಷಣೆ ಸಮಯದಲ್ಲಿ ನೀವು ಎಲ್ಲಾ ಕಾರ್ ಕ್ರ್ಯಾಶ್‌ಗಳು ಹಾಗೂ ಹಾನಿಯನ್ನು ಟ್ರ್ಯಾಕ್ ಮಾಡಬೇಕು. ಫ್ರ್ಯಾಂಚೈಸ್‌ನ ಅಜಾಗರೂಕ ಚಾಲನೆಯಿಂದ ತಗಲುವ ವಿಮಾ ವೆಚ್ಚವನ್ನು ಅಂದಾಜು ಮಾಡಲು ನಮ್ಮ ತಂಡವು ನಿಮ್ಮ ಸಂಶೋಧನೆಗಳನ್ನು ಬಳಸುತ್ತದೆ ಎಂದು ವೆಬ್‌ಸೈಟ್ ಹೇಳಿಕೊಂಡಿದೆ. ಅಲ್ಲದೇ ಈ ವೆಬ್‌ಸೈಟ್‌, ಫಾಸ್ಟ್ & ಫ್ಯೂರಿಯಸ್‌ ಸೀರಿಸ್‌ ಇತಿಹಾಸದಲ್ಲಿ ಈ ಚಲನಚಿತ್ರಗಳಲ್ಲಿ ಧ್ವಂಸಗಳ (ಹಾನಿ) ಸಂಖ್ಯೆ ಹೆಚ್ಚಿದೆಯೇ ಅಥವಾ ಕಡಿಮೆಯಾಗಿದೆಯೇ ಎಂಬುದನ್ನು ಕಂಡುಹಿಡಿಯುವುದಕ್ಕೂ ಒಬ್ಬರನ್ನು ನಿಯೋಜಿಸಲಿದೆ.

ಇದರ ಜೊತೆಗೆ ಸ್ಟ್ರೀಮಿಂಗ್ ಶುಲ್ಕಗಳು, ಚಲನಚಿತ್ರ ಟಿಕೆಟ್‌ಗಳು ಮತ್ತು ತಿಂಡಿಯ ವೆಚ್ಚವನ್ನು ಸರಿದೂಗಿಸಲು ನಾವು ನಮ್ಮ ಫಾಸ್ಟ್ ಮತ್ತು ಫ್ಯೂರಿಯಸ್ ಕ್ಲೈಮ್‌ಗಳ ಅಡ್ಜಸ್ಟರ್‌ಗೆ $1,000 ಮತ್ತು $100 ಹೆಚ್ಚುವರಿ ಹಣ ಪಾವತಿಸುತ್ತೇವೆ. ಜೊತೆಗೆ ಬೋನಸ್ ಆಗಿ, ನೀವು ಕುಟುಂಬ ಮೌಲ್ಯದ ಬಗ್ಗೆ ಆರೋಗ್ಯಕರ ಶಿಕ್ಷಣವನ್ನು ಪಡೆಯುತ್ತೀರಿ.

ಮುಖ್ಯವಾಗಿ ಫಾಸ್ಟ್ & ಫ್ಯೂರಿಯಸ್ 10′ ಅನ್ನು ‘ಫಾಸ್ಟ್ ಎಕ್ಸ್ ಎಂದು ಹೆಸರಿಡಲಾಗಿದೆ. ಲೂಯಿಸ್ ಲೆಟೆರಿಯರ್ ನಿರ್ದೇಶಿಸಿದ ಈ ಚಲನಚಿತ್ರವು ಡೊಮ್ ಟೊರೆಟ್ಟೊ (ವಿನ್ ಡೀಸೆಲ್) ತನ್ನ ಕುಟುಂಬವನ್ನು ಡಾಂಟೆ ರೆಯೆಸ್ (ಜೇಸನ್ ಮೊಮೊವಾ)ನಿಂದ ರಕ್ಷಿಸಲು ಪ್ರಯತ್ನಿಸುವ ಕತೆ ಹೊಂದಿದೆ. ಈ ಚಿತ್ರದಲ್ಲಿ ಜೇಸನ್ ಸ್ಟಾಥಮ್, ಜಾನ್ ಸೆನಾ (John Cena), ಬ್ರೀ ಲಾರ್ಸನ್ (Brie Larson), ಟೈರೆಸ್ ಗಿಬ್ಸನ್ (Tyrese Gibson), ಲುಡಾಕ್ರಿಸ್, ಜೋರ್ಡಾನಾ ಬ್ರೂಸ್ಟರ್ (Jordana Brewster), ನಥಾಲಿ ಇಮ್ಯಾನುಯೆಲ್ (Nathalie Emmanuel), ಸಂಗ್ ಕಾಂಗ್, ಸ್ಕಾಟ್ ಈಸ್ಟ್‌ವುಡ್, ಮೈಕೆಲ್ ರೂಕರ್ (Michael Rooker), ಡೇನಿಯಲಾ ಮೆಲ್ಚಿಯರ್, ಅಲನ್ ರಿಚ್ಸನ್, ಹೆಲೆನ್ ಮಿರೆನ್ (Helen Mirren) ಮತ್ತು ಕಾರ್ಡಿ ಬಿ ಇದ್ದಾರೆ.

ಇದನ್ನೂ ಓದಿ: The Kerala Story: ʼದಿ ಕೇರಳ ಸ್ಟೋರಿʼ ಸಿನಿಮಾ ಬಗ್ಗೆ ವಿವಾದಗಳ ರಾಜನೆಂದೇ ಪ್ರಖ್ಯಾತಿ ಪಡೆದ ಡೈರೆಕ್ಟರ್‌ ರಾಮ್‌ ಗೋಪಾಲ್‌ ವರ್ಮಾ ಟ್ವೀಟ್‌ ಮಾಡಿದ್ದಾದರೂ ಏನು?