SSLC Result: ಅನುತ್ತೀರ್ಣಗೊಂಡ ವಿದ್ಯಾರ್ಥಿಗಳೇ ಕುಗ್ಗಬೇಡಿ, ಇಂದು ಸೋತವನೇ ನಾಳೆ ಗೆಲ್ಲೋದು! ಪೂರಕ ಪರೀಕ್ಷೆಗೆ ತಯಾರಿ ಮಾಡಿ!
SSLC Result Tips for Supplimentary exam preparation
SSLC Result: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ (SSLC Result) ಈಗಷ್ಟೇ ಹೊರಬಂದಿದೆ. ಬಹಳ ಕಾತುರದಿಂದ ನಿರೀಕ್ಷೆ ಮಾಡುತ್ತಿದ್ದ ಎಸ್‌ಎಸ್‌ಎಲ್‌ಸಿ ರಿಸಲ್ಟ್ ಕೊನೆಗೂ ಬಂದೇ ಬಿಡ್ತು. ಆದರೆ ಈ ಫಲಿತಾಂಶ ಕೆಲವರಿಗೆ ಖುಷಿ ಕೊಟ್ಟರೆ ಕೆಲವರ ನಿರಾಸೆ ಕೊಟ್ಟಿರಬಹುದು. ಅಂತವರಿಗೊಂದು ಕಿವಿ ಮಾತು. ಸಪ್ಪೆ ಮೋರೆ ಹಾಕಿಕೊಂಡು ಕೂರಬೇಡಿ. ನೀವು ಫೇಲ್ ಆಗಿರುವುದು ಕೇವಲ ಎಕ್ಸಾಂನಲ್ಲಿ ಅಷ್ಟೇ. ಜೀವನದಲ್ಲಿ ಅಲ್ಲ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಪೋಷಕರಿಗೂ ಒಂದು ಕಿವಿಮಾತು. ನಿಮ್ಮ ನಿಮ್ಮ ಮಕ್ಕಳ ಬಗ್ಗೆ ಈ ಸಮಯದಲ್ಲಿ ಗಮನ ಹರಿಸಿ. ಏಕೆಂದರೆ ಈ ಸಮಯದಲ್ಲಿ ಅವರ ಮನಸ್ಸು ತುಂಬಾ ಸೂಕ್ಷ್ಮವಿರುತ್ತದೆ. ಅವರು ಆತುರದ ನಿರ್ಧಾರ ತೆಗೆದುಕೊಳ್ಳಲು ಯೋಚನೆ ಮಾಡುತ್ತಾರೆ.
ವಿದ್ಯಾರ್ಥಿಗಳೇ ಪರೀಕ್ಷೆಯಲ್ಲಿ ಫೇಲ್ ಆದೆ ಎಂಬ ಯೋಚನೆ ಬಿಟ್ಟು ಬಿಡಿ. ಚಿಂತೆ ಮಾಡಬೇಡಿ. ಈ ನೋವು ಕ್ಷಣಿಕ. ಈ ನೋವಿನಿಂದ ಮೇಲೆ ಬರಲು ನಿಮಗೆ ಹಲವು ದಾರಿಗಳಿವೆ. ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಿ. ನಾ ಪರೀಕ್ಷೆಯಲ್ಲಿ ಫೇಲ್ ಆದೆ ಎನ್ನೋದಕ್ಕಿಂತ ಎಲ್ಲಿ ಎಡವಿದೆ ಎಂಬುವುದನ್ನು ಗಮನಿಸಿ. ತಿದ್ದಿ, ತೀಡಿಕೊಳ್ಳಿ. ಇವುಗಳ ಕುರಿತು ಗಮನ ಹರಿಸಿ.
ನೀವು ಅನುತ್ತೀರ್ಣಗೊಂಡರೆ ನಿಮಗಾಗಿಯೇ ಮತ್ತೊಂದು ಛಾನ್ಸ್ ಇದೆ. ಪೂರಕ ಪರೀಕ್ಷೆ ಇದೆ. ಅದಕ್ಕೆ ತಯಾರಾಗಿ. ಮತ್ತೆ ಓದಿನ ಕಡೆ ಗಮನ ಕೊಡಿ. ಪೋಷಕರೊಂದಿಗೆ ಖುಷಿಯಿಂದ ಮಾತನಾಡಿ. ನೀವೂ ಖುಷಿಯಾಗಿರಿ. ಮುಂದಿನ ಪೂರಕ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ತೆಗೆದುಕೊಳ್ಳುತ್ತೇನೆಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ನಿಮ್ಮನ್ನು ನೀವು ಕುಗ್ಗಿಸಬೇಡಿ. ಅನುತ್ತೀರ್ಣಗೊಂಡ ಮಕ್ಕಳ ಮನಸ್ಸನ್ನು ಗಮನಿಸಿ ಪೋಷಕರೇ, ಅವರಿಗೆ ಧೈರ್ಯ ತುಂಬಿ, ಪೂರಕ ಪರೀಕ್ಷೆಗೆ ತಯಾರಾಗುವಂತೆ ಪ್ರೋತ್ಸಾಹಿಸಿ.
ಇಂದು ಸೋತವನೇ ನಾಳೆ ಗೆಲ್ಲೋದು ಎಂಬುವುದನ್ನು ಮರೆಯಬೇಡಿ ವಿದ್ಯಾರ್ಥಿಗಳೇ. ಫೇಲ್ ಆದನೆಂಬ ಆತಂಕಕ್ಕೆ ಒಳಗಾಗಬೇಡಿ. ಮುಂದಿನ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ.