Home Breaking Entertainment News Kannada Rajasthan Royals: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಖಡಕ್ ಎಚ್ಚರಿಕೆ ಕೊಟ್ಟ RRR ಚಿತ್ರ ತಂಡ: ತಪ್ಪಿನ...

Rajasthan Royals: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಖಡಕ್ ಎಚ್ಚರಿಕೆ ಕೊಟ್ಟ RRR ಚಿತ್ರ ತಂಡ: ತಪ್ಪಿನ ಅರಿವಾಗಿ ಕ್ಷಮೆ ಕೇಳಿದ ಟೀಂ, ಅಷ್ಟಕ್ಕೂ ನಡೆದದ್ದೇನು?

Rajasthan Royals
Image source- KreedOn, India Today

Hindu neighbor gifts plot of land

Hindu neighbour gifts land to Muslim journalist

Rajasthan Royals: ಇತ್ತೀಚೆಗೆ ನಡೆದ ಪಂದ್ಯದಲ್ಲಿ ಸನ್‌ ರೈಸರ್ಸ್‌(Sun Risers) ತಂಡದ ಗೆಲುವನ್ನು ಜೀರ್ಣಿಸಿಕೊಳ್ಳಲಾಗದೇ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡ ಮಂಗಾಟ ಶುರು ಮಾಡಿ, ಶೇರ್ ಮಾಡಿದ ಪೋಸ್ಟ್ ಒಂದು ಭಾರೀ ಚರ್ಚೆ ಹುಟ್ಟುಹಾಕಿತ್ತು. ಬಳಿಕ ಈ ತಂಡಕ್ಕೆ ಜಗಮನ್ನಣೆ ಗಳಿಸಿದ RRR ಚಿತ್ರ ತಂಡ ಕೂಡ ಎಚ್ಚರಿಕೆ ನೀಡಿತ್ತು. ಬಳಿಕ ಸಂಜು ಸ್ಯಾಮ್ಸನ್ (Sanju Samsun) ಟೀಂಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೂಡ ಕೇಳಿತ್ತು. ಹಾಗಾದರೆ ಸನ್ ರೈಸರ್ಸ್ ಮಾಡಿದ ಪೋಸ್ಟ್ ನಲ್ಲಿ ಏನಿತ್ತು?

ಈ ಸಲದ ಸನ್‌ ರೈಸರ್ಸ್‌ ವರ್ಸಸ್ ರಾಜಸ್ಥಾನ್ ರಾಯಲ್ಸ್ ಪಂದ್ಯ ಭಾರೀ ಕುತೂಹಲ ಮೂಡಿಸಿತ್ತು. ಇನ್ನೇನು ರಾಜಸ್ಥಾನ್ ರಾಯಲ್ಸ್ ವಿನ್ ಆಗುತ್ತೆ ಎಂದು ಎಲ್ಲರೂ ಅಂದುಕೊಳ್ಳುವಾಗ ಕೊನೆಯ ಹಂತದಲ್ಲಿ ಇಡೀ ಲೆಕ್ಕಾಚಾರವೇ ಉಲ್ಟಾ ಆಗುವಂತೆ ಹೈದರಾಬಾದ್ ಟೀಂ(Hyderabad Team) ವಿಜಯ ಪತಾಕೆ ಹಾರಿಸಿಬಿಟ್ಟಿತು. ಸನ್‌ ರೈಸರ್ಸ್‌ ತಂಡದ ಈ ಗೆಲುವನ್ನು ಜೀರ್ಣಿಸಿಕೊಳ್ಳಲಾಗದೇ ರಾಜಸ್ಥಾನ್ ರಾಯಲ್ಸ್ ತಂಡ ಮಂಗಾಟ ಶುರು ಮಾಡಿದೆ. ಅದಕ್ಕೆ ನೆಟ್ಟಿಗರು ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ.

ಹೌದು, ಸೋಲಿನ ಹತಾಶೆಯಲ್ಲಿ ರಾಜಸ್ಥಾನ್ ರಾಯಲ್ಸ್ ಮಾಡಿದ ಟ್ವೀಟ್ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ತಮ್ಮ ತಂಡದ ನಾಯಕ ಸಂಜು ಸ್ಯಾಮ್ಸನ್ ‘RRR’ ಸಿನಿಮಾಗಿಂತ ಗ್ರೇಟ್ ಎನ್ನುವ ಅರ್ಥದಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ‘RRR’ ಸಿನಿಮಾ ನಿರ್ಮಿಸಿದ್ದ ಡಿವಿವಿ ಎಂಟರ್‌ಪ್ರೈಸಸ್(DVV Enterprise) ಸಂಸ್ಥೆ ಟ್ವಿಟ್ಟರ್‌ನಲ್ಲೇ ತಿರುಗೇಟು ನೀಡಿದೆ.

ತಮ್ಮನ್ನು ಹೀಯಾಳಿಸಿ ಪೋಸ್ಟ್ ಮಾಡಿದ್ದಕ್ಕೆ ‘RRR’ ತಂಡ ಸುಮ್ಮನಿರದೇ ‘ವೆಂಕಿ'(Venki) ಚಿತ್ರದ ಸಣ್ಣ ವಿಡಿಯೋ ಶೇರ್ ಮಾಡಿ ತಿರುಗೇಟು ನೀಡಿದೆ. ಇನ್ನು ಡಿವಿವಿ ಸಂಸ್ಥೆ ಕೂಡ ಖಾರವಾಗಿಯೇ ಪ್ರತಿಕ್ರಿಯಿಸಿದೆ. ‘ಇಡಿಯಟ್’ ಚಿತ್ರದ ದೃಶ್ಯವನ್ನು ಶೇರ್ ಮಾಡಿ ಪರೋಕ್ಷವಾಗಿ ಚಾಟಿ ಬೀಸಿದೆ.

ಅಂದಹಾಗೆ ರಾಜಸ್ಥಾನ್ ರಾಯಲ್ಸ್ ತನ್ನನ್ನು RRR ಚಿತ್ರದೊಂದಿಗೆ ಸಮೀಕರಿಸಿ, ಅದಕ್ಕಿತ್ತಲೂ ಮಿಗಿಲೆಂದು ವೈಭವೀಕರಿಸಿ ಪೋಸ್ಟ್ ಮಾಡುತ್ತಿದ್ದಂತೆ ಯರ್ರಾಬಿರ್ರೀ ಟ್ರೋಲ್ ಆಗಿ ತೆಲುಗು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ತಮ್ಮ ತಂಡದ ನಾಯಕನನ್ನು ಹೊಗಳುವುದು ತಪ್ಪಲ್ಲ. ಆದರೆ ಮಧ್ಯದಲ್ಲಿ ‘RRR’ ಸಿನಿಮಾವನ್ನು ಎಳೆದು ತಂದಿದ್ದು ಯಾಕೆ. ಸಂಜು ಸ್ಯಾಮ್ಸನ್ ಗ್ರೇಟ್ ಅಂದ್ರೆ ಸರಿ, ಅದು ಬಿಟ್ಟು ಸೂಪರ್ ಹಿಟ್ ಸಿನಿಮಾವನ್ನು ಕಮ್ಮಿ ಮಾಡಿ ಮಾತನಾಡಿದ್ದು ಯಾಕೆ? ಎನ್ನುವ ಪ್ರಶ್ನೆ ಎದ್ದಿತ್ತು. ತೆಲುಗು(Telugu) ಸಿನಿಮಾ ಎನ್ನುವ ಕಾರಣಕ್ಕೆ ಸನ್‌ರೈಸರ್ಸ್ ಬದಲು ‘RRR’ ಹೆಸರನನ್ನು ಬಳಸಿದಂತೆ ಕಾಣುತ್ತಿದೆ. ದೇಶಕ್ಕೆ ಆಸ್ಕರ್ ಪ್ರಶಸ್ತಿ ತಂದು ಕೊಟ್ಟ ಚಿತ್ರವನ್ನು ಅವಮಾನಿಸಿದ್ದು ಸರಿಯಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಇದೇ ಕಾರಣಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಈ ಬಗ್ಗೆ ಅತಿಯಾದ ಟ್ರೋಲ್ ಎದುರಾಗುತ್ತಿದ್ದಂತೆ ತಪ್ಪಿನ ಅರಿವಾಗಿ ರಾಜಸ್ಥಾನ್ ರಾಯಲ್ಸ್ ತಂಡ ಕ್ಷಮೆ ಕೇಳಿ ಟ್ವೀಟ್ ಮಾಡಿದೆ. ” ‘RRR’ ಸಿನಿಮಾ ಹೇಗೆ ಜಗತ್ತಿನಾದ್ಯಂತ ಸದ್ದು ಮಾಡ್ತೋ ಅದೇ ರೀತಿ ಇಡೀ ಜಗತ್ತಿಗೆ ಗೊತ್ತಾಗುವಂತೆ ಕ್ಷಮೆ ಕೇಳುತ್ತಿದ್ದೇವೆ. ಸಂಜು ಸ್ಯಾಮ್ಸನ್ ಹಾಗೂ ‘RRR’ ಎರಡು ನಮಗೆ ಇಷ್ಟ” ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್‌ಗಳು ಸಖತ್ ವೈರಲ್ ಆಗ್ತಿದೆ.

 

 

ಇದನ್ನು ಓದಿ: Actress Niharika Konidela: ಮೆಗಾಸ್ಟಾರ್ ಚಿರಂಜೀವಿ ಮನೆಮಗಳು ‘ಪುಷ್ಪ 2’ ಸಿನಿಮಾಗೆ ಎಂಟ್ರಿ ; ನಿಹಾರಿಕಾ ಕೊನಿಡೆಲಾ ಪಾತ್ರ ಯಾವುದು?