Post Office Scheme: ಈ ಹೊಸ ಯೋಜನೆಯಲ್ಲಿ ಕೇವಲ 95 ರೂಪಾಯಿ ಉಳಿತಾಯ ಮಾಡಿ 14 ಲಕ್ಷ ರಿರ್ಟನ್ಸ್ ಪಡೆಯಿರಿ!
Post Office has implemented new scheme
Post Office Scheme: ಬ್ಯಾಂಕ್ ನಲ್ಲಿಯೂ ಸಾಧ್ಯವಾಗದ ಬಡ್ಡಿಯನ್ನು ಅಂಚೆ ಇಲಾಖೆ ನೀಡುತ್ತಿದೆ. ಅದಲ್ಲದೆ ಸರ್ಕಾರದ (government ) ಬೆಂಬಲವನ್ನು ಅಂಚೆ ಕಚೇರಿಯು ಹೊಂದಿರುವುದರಿಂದ ಅವುಗಳು ವಿಶ್ವಾಸಾರ್ಹವಾಗಿದೆ. ಇನ್ನು ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರಲು (safe)ಮತ್ತು ಯಾವುದೇ ಒತ್ತಡವಿಲ್ಲದೆ ನೀವು ಉತ್ತಮ ಲಾಭವನ್ನು ಪಡೆಯಲು ಅಂಚೆ ಕಚೇರಿಯಲ್ಲಿ ಹೂಡಿಕೆ(Investment) ಮಾಡುವುದು ಉತ್ತಮವಾಗಿದೆ.
ಈಗಾಗಲೇ ಪೋಸ್ಟ್ ಆಫೀಸ್ ತನ್ನ ಗ್ರಾಹಕರಿಗೆ ಈಗಾಗಲೇ ಅನೇಕ ಹೂಡಿಕೆ ಮತ್ತು ಉಳಿತಾಯ ಯೋಜನೆಗಳನ್ನು ಲಭ್ಯಗೊಳಿಸಿದೆ. ಇದೀಗ ಗ್ರಾಮ ಸುಮಂಗಲ್ ಗ್ರಾಮೀಣ ದಕ್ ಜೀವನ್ ಬಿಮಾ ಎಂಬ ಹೊಸ ಯೋಜನೆ (Post Office Scheme) ಜಾರಿಗೆ ತಂದಿದೆ.
ಈ ಯೋಜನೆಯನ್ನು 1995 ರಲ್ಲಿ ಪ್ರಾರಂಭಿಸಲಾಯಿತು. ಹೂಡಿಕೆದಾರರ ಮರಣದ ಸಂದರ್ಭದಲ್ಲಿ ಅವರ ನಾಮಿನಿಯು ಬೋನಸ್‌ನೊಂದಿಗೆ ಸಂಪೂರ್ಣ ವಿಮಾ ಮೊತ್ತವನ್ನು ಪಡೆಯುತ್ತಾರೆ. ಇದರಲ್ಲಿ ಹೂಡಿಕೆದಾರರು ನಿರ್ದಿಷ್ಟ ವರ್ಷಗಳ ನಂತರ ಹಣವನ್ನು ಮರಳಿ ಪಡೆಯುತ್ತಾರೆ.
ಗ್ರಾಮ ಸುಮಂಗಲ್ ಗ್ರಾಮೀಣ ದಕ್ ಜೀವನ್ ಬಿಮಾ ಯೋಜನೆಯು ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ನಿರೀಕ್ಷಿತ ದತ್ತಿಯನ್ನು ಭರವಸೆ ನೀತಿಯಾಗಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವವರು ದಿನಕ್ಕೆ 95 ರೂಪಾಯಿ ಉಳಿಸುವ ಮೂಲಕ 14 ಲಕ್ಷ ಹಣ ಹಿಂಪಡೆಯಬಹುದು.
ಮುಖ್ಯವಾಗಿ ಪಾಲಿಸಿ ಪ್ರಯೋಜನಗಳನ್ನು ಪಡೆಯಲು ಹೂಡಿಕೆದಾರರ ವಯಸ್ಸು 19 ರಿಂದ 45 ವರ್ಷಗಳ ನಡುವೆ ಇರಬೇಕು. ಹೂಡಿಕೆದಾರರು ಪಾಲಿಸಿ ಮೆಚ್ಯೂರಿಟಿಯ ಮೇಲೆ ಬೋನಸ್ ಸಹ ಪಡೆಯುತ್ತಾರೆ. ಇದು 15 ಮತ್ತು 20 ವರ್ಷಗಳವರೆಗೆ ಖರೀದಿಗೆ ಲಭ್ಯವಿದೆ.
ಉದಾಹರಣೆಗೆ ನಿಮ್ಮ ಪಾಲಿಸಿಯು 15 ವರ್ಷಗಳವರೆಗೆ ಜಾರಿಯಲ್ಲಿದ್ದರೆ 20-20 ಪ್ರತಿಶತ ಸೂತ್ರದ ಆಧಾರದ ಮೇಲೆ ಆರು, ಒಂಬತ್ತು ಮತ್ತು ಹನ್ನೆರಡು ವರ್ಷಗಳ ನಂತರ ವಿಮಾ ಮೊತ್ತವು ಲಭ್ಯವಾಗುತ್ತದೆ.
ಅದೇ ರೀತಿ ನೀವು 20 ವರ್ಷಗಳ ವಿಮೆಯನ್ನು ಖರೀದಿಸಿದರೆ ನೀವು ಪ್ರತಿ ಎಂಟು, ಹನ್ನೆರಡು, ಹದಿನಾರು ವರ್ಷಗಳಿಗೊಮ್ಮೆ ಶೇಕಡಾ 20 ರಷ್ಟು ಹಣ ಪಡೆಯುತ್ತೀರಿ. ಮೆಚ್ಯೂರಿಟಿಯಲ್ಲಿ ಬೋನಸ್ ಮತ್ತು ಶೇಕಡಾ 40 ರಷ್ಟು ಬಾಕಿ ಹಣ ಸಿಗುತ್ತದೆ.
ಉದಾಹರಣೆಗೆ.. ಒಬ್ಬ ವ್ಯಕ್ತಿಯು 25 ವರ್ಷ ವಯಸ್ಸಿನಲ್ಲಿ ಹೂಡಿಕೆ ಮಾಡಿದರೆ, 20 ವರ್ಷಗಳಲ್ಲಿ ಅವರು 7 ಲಕ್ಷಗಳನ್ನು ಉಳಿಸಿದ್ದಾರೆ. ಅಂದ್ರೆ ತಿಂಗಳಿಗೆ 2,853 ರೂಪಾಯಿ ಉಳಿಸಿದಂತೆ.ಇದರ ನಂತರ ಹೂಡಿಕೆದಾರರು ಮುಕ್ತಾಯದ ಮೇಲೆ ಸುಮಾರು ರೂ.14 ಲಕ್ಷಗಳನ್ನು ಪಡೆಯುತ್ತಾರೆ.
ಮೂರು ತಿಂಗಳ ಲೆಕ್ಕದಲ್ಲಿ ನೋಡಿದರೆ ಇದಕ್ಕಾಗಿ 8,850 ರೂ.ಗಳನ್ನು ಠೇವಣಿ ಇಡಬೇಕಿದ್ದರೆ, 6 ತಿಂಗಳಿಗೆ 17,100 ರೂಪಾಯಿ ಉಳಿಸಬೇಕು. ಇದರ ನಂತರ ಹೂಡಿಕೆದಾರರು ಮುಕ್ತಾಯದ ಮೇಲೆ ಬಡ್ಡಿ ಸಮೇತ ಸುಮಾರು ರೂ.14 ಲಕ್ಷಗಳನ್ನು ಪಡೆಯುತ್ತಾರೆ.
ಗ್ರಾಮ ಸುಮಂಗಲ್ ಗ್ರಾಮೀಣ ದಕ್ ಜೀವನ್ ಬಿಮಾ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಹೂಡಿಕೆದಾರರಿಗಾಗಿ ಪ್ರಾರಂಭಿಸಲಾಗಿದ್ದು, ಹೆಚ್ಚಿನ ಆದಾಯವನ್ನು ಹುಡುಕುತ್ತಿರುವವರಿಗೆ ಇದು ಸೂಕ್ತವಾಗಿದೆ.