Lal Salaam movie poster got trolled: ಯರ್ರಾಬಿರ್ರೀ ಟ್ರೋಲ್ ಆಯ್ತು ರಜನಿಕಾಂತ್ ‘ಲಾಲ್ ಸಲಾಂ’ ಪೋಸ್ಟರ್! ರಜನಿ ಮಗಳ ನಿರ್ದೇಶನಕ್ಕೆ ಗರಂ ಆದ ಫ್ಯಾನ್ಸ್

Lal Salaam poster was released and trolled soon after its release

Lal Salaam movie poster: ಸೂಪರ್ ಸ್ಟಾರ್ ರಜನಿಕಾಂತ್(Super Star Rajanikanth) ಸದ್ಯ ಜೈಲರ್(Jailer) ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ನಡುವೆಯೇ ಅವರು ಹೊಸ ಸಿನಿಮಾ ಲಾಲ್ ಸಲಾಮ್(Lal Salaam movie poster) ಪೋಸ್ಟರ್ ರಿಲೀಸ್ ಆಗಿದ್ದು, ರಿಲೀಸ್ ಆದ ಕೂಡಲೇ ಯರ್ರಾಬಿರ್ರೀ ಟ್ರೋಲ್ ಆಗಿದೆ. ಅಲ್ಲದೆ ಸಿನೆಮಾ ನಿರ್ದೇಶಕಿ, ರಜನಿಕಾಂತ್ ಕಾಂತ್ ಮಗಳ ವಿರುದ್ಧವೂ ಫ್ಯಾನ್ ಗರಂ ಆಗಿದ್ದಾರೆ.

 

ಹೌದು, ತಮಿಳಿಗರ ಸಿನಿಮಾ ದೇವರು, ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್ ಇತ್ತೀಚಿಗಷ್ಟೆ ಜೈಲರ್ ಸಿನಿಮಾದ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿದ್ದರು. ಇದರ ಬೆನ್ನಲ್ಲೇ ರಜನಿಕಾಂತ ಕಾಂತ್ ಅವರು ಲಾಲ್ ಸಲಾಂ(Lal Salam) ಆಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಲಾಲ್ ಸಲಾಂ ಚಿತ್ರಕ್ಕೆ ತಲೈವಾ ಮಗಳು ಐಶ್ವರ್ಯಾ ರಜನಿಕಾಂತ್ ಅವರೇ ಆಕ್ಷನ್ ಕಟ್ ಹೇಳಿದ್ದು, ಈ ಸಿನಿಮಾದಲ್ಲಿ ರಜನಿಕಾಂತ್ ಕಾಂತ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದು, ಇದೀಗ ರಜನಿಕಾಂತ್ ಅವರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಆದರೆ ಪೋಸ್ಟರ್ ರಿಲೀಸ್ ಮಾಡುತ್ತಿದ್ದಂತೆ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

ಬಿಡುಗಡೆ ಆದ ಪೋಸ್ಟರ್ ನಲ್ಲಿ ರಜನಿಕಾಂತ್ ಅವರು ತಲೆಗೆ ಟೋಪಿ ಧರಿಸಿದ್ದಾರೆ. ಹಿಂಭಾಗದಲ್ಲಿ ಜನರು ಧಂಗೆ ಎದ್ದಿರುವ ಫೋಟೋ ಇದೆ. ತಳ್ಳುವ ಗಾಡಿಗಳಿಗೆ ಬೆಂಕಿ ಇಡಲಾಗಿದೆ. ಅಷ್ಟೇ ಅಲ್ಲ ಪತ್ರಿಕೆ ಒಂದನ್ನು ತೋರಿಸಲಾಗಿದ್ದು, ‘ಮುಂಬೈ ನಿಯಂತ್ರಣದಲ್ಲಿದೆ’ ಎಂದು ಬರೆಯಲಾಗಿದೆ. ಜೊತೆಗೆ ‘ಮೊಹಿದ್ದೀನ್​ ಬಂದಾಗಿದೆ’ ಎನ್ನುವ ಕ್ಯಾಪ್ಶನ್ ಇದೆ. ಪೋಸ್ಟರ್ ಡಿಸೈನ್ ನೋಡಿದ ಕೂಡಲೇ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಇಂಥ ಪೋಸ್ಟರ್ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳುತ್ತಿದ್ದಾರೆ. ಪೋಸ್ಟರ್ ಡಿಸೈನ್ ಕೆಟ್ಟದಾಗಿ ಮಾಡಿದ್ದಾರೆ, ಐಶ್ವರ್ಯಾ ಅವರನ್ನು ಮೊದಲು ನಿರ್ದೇಶಕಿ ಸ್ಥಾನದಿಂದ ಕೆಳಗೆ ಇಳಿಸಿ ಎಂದು ಅಭಿಮಾನಿಗಳು ಗರಂ ಆಗಿದ್ದಾರೆ.

ಅಂದಹಾಗೆ ಈ ಚಿತ್ರದಲ್ಲಿ ರಜನಿ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ. ಇಲ್ಲಿವರೆಗೂ ರಜನಿಕಾಂತ್ ಈ ಒಂದು (Rajinikanth Lal Salaam Movie) ಗೆಟಪ್‌ ಅಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಮಗಳಿಗೋಸ್ಕರ ಈ ಒಂದು ಗೆಟಪ್‌ ಹಾಕಿದ್ದಾರೆ. ಕಳೆದ ವರ್ಷ ಶುರು ಆದ ಈ ಚಿತ್ರಕ್ಕೆ ಲಾಲ್ ಸಲಾಮ್ ಅನ್ನುವ (Movie First Look Release) ಶೀರ್ಷಿಕೆ ಇಡಲಾಗಿದೆ. ಇದೇ ಚಿತ್ರದಲ್ಲಿ ರಜನಿಕಾಂತ್ ಮುಸ್ಲಿಂ ಗೆಟಪ್‌ ಧರಿಸಿದ್ದಾರೆ. ಈ ಒಂದು ರೋಲ್‌ನ ಫೋಸ್ಟರ್ (Super Star Rajinikanth Movie) ರಿಲೀಸ್ ಆಗಿದೆ. ಇದು ಅತಿ ಹೆಚ್ಚು ಗಮನ ಸೆಳೆಯೋದ್ರೊಂದಿಗೆ ಟ್ರೋಲ್ ಗೆ ಒಳಗಾಗುತ್ತಿದೆ.

ರಜನಿಕಾಂತ್ ಹಿರಿ ಮಗಳು ಐಶ್ವರ್ಯಾ ಅವರು ‘ಲಾಲ್ ಸಲಾಮ್’ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಅವರು ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಮಗಳಿಗೋಸ್ಕರ ಅವರು ಈ ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನು ರಜನಿಕಾಂತ್ ಹಾಗೂ ಲೈಕಾ ಪ್ರೊಡಕ್ಷನ್ ಜೊತೆ ಒಳ್ಳೆಯ ನಂಟಿದೆ. ಅವರ ಕೆಲವು ಸಿನಿಮಾಗಳಿಗೆ ಈ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿತ್ತು. ಈಗ ಅವರು ಮತ್ತೊಮ್ಮೆ ಲೈಕಾ ಜೊತೆ ಕೈ ಜೋಡಿಸಿದ್ದಾರೆ.

ಅಂದಹಾಗೆ ಲಾಲ್ ಸಲಾಮ್’ ಸಿನಿಮಾದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಅವರು ಮುಖ್ಯಭೂಮಿಕೆಯಲ್ಲಿದ್ದಾರೆ. ಆಸ್ಕರ್ ವಿಜೇತ ಎಆರ್​ ರೆಹಮಾನ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ವಿಷ್ಣು ರಂಗಸ್ವಾಮಿ ಅವರ ಛಾಯಾಗ್ರಹಣ ಇದೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.

 

 

https://twitter.com/Mr_Ashthetics/status/1655309343212879873?t=zgCLPdtHYD9CoolTzhVbig&s=08

 

ಇದನ್ನು ಓದಿ: Malayalam Film Industry: ಮಾಲಿವುಡ್ ಚಿತ್ರರಂಗದಲ್ಲಿ ಡ್ರಗ್ಸ್ ಕರಿನೆರಳು! ಶೂಟಿಂಗ್ ಸ್ಥಳದಲ್ಲಿ ಪೊಲೀಸರ ನಿಯೋಜನೆ! 

Leave A Reply

Your email address will not be published.