Home Education Karnataka SSLC Results 2023: ಈ ಬಾರಿಯ ಎಸ್‌ಎಸ್‌ಎಲ್‌ಸಿ ಜಿಲ್ಲಾವಾರು ಫಲಿತಾಂಶ ಇಲ್ಲಿದೆ! ಎಸ್‌ಎಂಎಸ್‌ ಮೂಲಕ...

Karnataka SSLC Results 2023: ಈ ಬಾರಿಯ ಎಸ್‌ಎಸ್‌ಎಲ್‌ಸಿ ಜಿಲ್ಲಾವಾರು ಫಲಿತಾಂಶ ಇಲ್ಲಿದೆ! ಎಸ್‌ಎಂಎಸ್‌ ಮೂಲಕ ರಿಸಲ್ಟ್‌ ಚೆಕ್‌ ಮಾಡುವುದು ಹೇಗೆ?

Karnataka SSLC Results 2023
Image source: Amarujala

Hindu neighbor gifts plot of land

Hindu neighbour gifts land to Muslim journalist

Karnataka SSLC Results 2023: SSLC ಫಲಿತಾಂಶ (Karnataka SSLC Results 2023) ಈಗಾಗಲೇ ಪ್ರಕಟವಾಗಿರುವುದು ಚಿತ್ರದುರ್ಗ ಜಿಲ್ಲೆ (Chitradurga SSLC Results) ಈ ಬಾರಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದೆ. ಮಂಡ್ಯ ಜಿಲ್ಲೆ(Mandya SSLC Results) ಈ ಬಾರಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಹಾಗೆನೇ ಈ ಬಾರಿ ಹಾಸನ ಜಿಲ್ಲೆ (Hassan SSLC Results) ಮೂರನೇ ಸ್ಥಾನ ಅಲಂಕರಿಸಿದೆ. A ಗ್ರೇಡ್​ನಲ್ಲಿ 23 ಜಿಲ್ಲೆಗಳು ಉತ್ತೀರ್ಣವಾಗಿವೆ. B ಗ್ರೇಡ್​ನಲ್ಲಿ 12 ಜಿಲ್ಲೆಗಳು ಉತ್ತೀರ್ಣವಾಗಿವೆ.

ಈ ಬಾರಿ ಶೇ 83.89 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶ ಕುಸಿತ ಕಂಡಿದೆ. ಕಳೆದ ವರ್ಷ ಶೇ 85.13 ಫಲಿತಾಂಶ ಬಂದಿತ್ತು. ಶೇ 87.00 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ನಗರದ ಭಾಗದ ವಿದ್ಯಾರ್ಥಿಗಳು ಫಲಿತಾಂಶ ಶೇ 79.62 ರಷ್ಟು ಪಡೆದುಕೊಂಡಿದೆ.

ಎಸ್ಎಂಎಸ್‌ ಮೂಲಕ ರಿಸಲ್ಟ್‌ ಚೆಕ್‌ ಮಾಡುವುದು ಹೇಗೆ?
ವಿದ್ಯಾರ್ಥಿಗಳು ಮೊಬೈಲ್​ನಲ್ಲಿ “KAR10Roll Number” ಎಂದು ಟೈಪ್ ಮಾಡಿ Roll Number ಇರುವ ಕಡೆ ನಿಮ್ಮ ರಿಜಿಸ್ಟರ್ ನಂಬರ್ ಹಾಕಿ, 56263 ಗೆ SMS ಕಳುಹಿಸಿ. ಎರಡೇ ನಿಮಿಷದಲ್ಲಿ ನಿಮ್ಮ ರಿಸಲ್ಟ್​ ನಿಮ್ಮ ಮೊಬೈಲ್​ಗೆ SMS ಮೂಲಕ ಬರುತ್ತದೆ.

A ಗ್ರೇಡ್ ನಲ್ಲಿ ಉತ್ತೀರ್ಣ ಜಿಲ್ಲೆಗಳು 23
B ಗ್ರೇಡ್ ನಲ್ಲಿ ಉತ್ತೀರ್ಣರಾದ ಜಿಲ್ಲೆಗಳು 12

ಚಿತ್ರದುರ್ಗ 96.8 ಶೇಕಡಾದೊಂದಿಗೆ ಮೊದಲ ಸ್ಥಾನ ಪಡೆದಿದೆ.
ಹಾಗೂ ಮಂಡ್ಯ 96.74 ಫಲಿತಾಂಶದೊಂದಿಗೆ ಎರಡನೇ ಸ್ಥಾನ ಪಡೆದಿದೆ.
ಹಾಸನ ಜಿಲ್ಲೆ 96.68 ಶೇಕಡಾದೊದಿಗೆ ಮೂರನೇ ಸ್ಥಾನ ಪಡೆದಿದೆ.
ಬೆಂಗಳೂರು ಗ್ರಾಮಾಂತರ 4ನೇ ಸ್ಥಾನದಲ್ಲಿದೆ.
ಬೆಂಗಳೂರು ಉತ್ತರ 32ನೇ ಸ್ಥಾನ ಪಡೆದಿದೆ. ಬೆಂಗಳೂರು ದಕ್ಷಿಣ 33ನೇ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡ 14 ನೇ ಸ್ಥಾನದಲ್ಲಿದೆ.  ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ. 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ

ಈ ಬಾರಿ ಕೇವಲ 4 ವಿದ್ಯಾರ್ಥಿಗಳು ಮಾತ್ರ 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಇದು ಕಳೆದ ವರ್ಷದ ಅಂಕಿಅಂಶಗಳಿಗೆ ಹೋಲಿಸಿದರೆ ಭಾರೀ ಕಡಿಮೆ ಎಂದೇ ಹೇಳಬಹುದು. ಕಳೆದ ಬಾರಿ 2022ರಲ್ಲಿ 145 ವಿದ್ಯಾರ್ಥಿಗಳು ಪರಿಪೂರ್ಣ ಅಂಕ ಗಳಿಸಿದ್ದರು.

ಈ ಬಾರಿಯ ಸಿಹಿ ಸುದ್ದಿ ಎಂದರೆ ಯಾವುದೇ ಸರಕಾರಿ ಶಾಲೆಗಳು ಶೂನ್ಯ ಶೇಕಡಾ ಫಲಿತಾಂಶ ಪಡೆದಿಲ್ಲ. ಇಷ್ಟು ಮಾತ್ರವಲ್ಲದೇ ಹೆಣ್ಣು ಮಕ್ಕಳು ಕೂಡಾ ಈ ಬಾರಿನೂ ಫಲಿತಾಂಶದ ವಿಷಯದಲ್ಲಿ ತಮ್ಮ ಪಾರುಪತ್ಯ ಸಾಧಿಸಿದ್ದಾರೆ. ಹೆಣ್ಣು ಮಕ್ಕಳು ಶೇ ,87.87 ರಷ್ಟ ಫಲಿತಾಂಶ ಪಡೆದುಕೊಂಡಿದ್ದರೆ, ಶೇ. 80.08 ರಷ್ಟು ಗಂಡು ಮಕ್ಕಳು ಉತ್ತೀರ್ಣರಾಗಿದ್ದಾರೆ.

ಒಟ್ಟಾರೆ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 7,00,619 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 3,41,108 ಬಾಲಕರು ಹಾಗೂ 3,59,511 ಬಾಲಕಿಯರು ಈ ವರ್ಷ 10ನೇ ಕ್ಲಾಸ್​ ಬೋರ್ಡ್​ ಎಕ್ಸಾಮ್​ ನಲ್ಲಿ ಉತ್ತೀರ್ಣಾಗಿದ್ದಾರೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪರಿಶೀಲನೆ ಮಾಡುವ ವಿಧಾನ ಹೀಗಿದೆ:
# ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ ಅಥವಾ karresults.nic.in ಗೆ ಭೇಟಿ ನೀಡಬೇಕು.
# ಈ ಪೇಜ್‌ ಓಪನ್ ಆದ ಬಳಿಕ ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
# ಆ ಬಳಿಕ, ತಮ್ಮ ಎಸ್‌ಎಸ್‌ಎಲ್‌ಸಿ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ಟೈಪ್‌ ಮಾಡಬೇಕು.
# ‘Submit’ ಎಂಬಲ್ಲಿ ಕ್ಲಿಕ್ ಮಾಡಿಕೊಂಡರೆ ಫಲಿತಾಂಶದ ಪೇಜ್‌ ಓಪನ್‌ ಆಗುತ್ತದೆ.
# ಈ ಕಾಪಿ ಅನ್ನು ಡೌನ್‌ಲೋಡ್‌ ಮಾಡಿ ಪ್ರಿಂಟ್ ತೆಗೆದುಕೊಂಡರೆ ಒಳ್ಳೆಯದು.

 

ಇದನ್ನೂ ಓದಿ:Karnataka SSLC Result 2023: ಇಂದು ಎಸ್​ಎಸ್​ಎಲ್​ಸಿ ಫಲಿತಾಂಶ! ಈ ರೀತಿ ಒಂದೇ ಕ್ಲಿಕ್‌ ಮೂಲಕ ರಿಸಲ್ಟ್‌ ಚೆಕ್‌ ಮಾಡಿ!