Karnataka Election 2023: ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್‌ ಮುಖಂಡರ ಹಲ್ಲೆ ಆರೋಪ! ತೀವ್ರ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು

Congress-leaders assult BJP workers :ಇನ್ನೇನು ಕೆಲವೇ ದಿನ ರಾಜ್ಯ ವಿಧಾನ ಸಭಾ ಚುನಾವಣೆ (Karnataka Assembly Elections 2023) ಬರಲಿದೆ. ಈ ನಡುವೆ ನಿನ್ನೆ ಬಿಟಿಎಂ ಲೇಔಟ್‌ ನಲ್ಲಿ ಬಾರಿ ದೊಡ್ಡ ಘಟನೆಯೊಂದು ನಡೆದಿದೆ. ಪ್ರಚಾರದ ಸಮಯದಲ್ಲಿ ಕಾಂಗ್ರೆಸ್‌ ಮುಖಂಡರಿಂದ ಬಿಜೆಪಿ ಕಾರ್ಯಕರ್ತನ ಮೇಲೊಂದು ಹಲ್ಲೆ ( Congress-leaders assult BJP workers) ಆರೋಪ ನಡೆದಿದೆ ಎಂಬ ಮಾತು ಕೇಳಿ ಬಂದಿದೆ.

ಮೇ.07( ನಿನ್ನೆ) ಸುಮಾರು ಏಳು ಗಂಟೆ ಹೊತ್ತಿದೆ ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದ ಮಡಿವಾಳದಲ್ಲಿ ಈ ಘಟನೆ ನಡೆದಿದೆ. ಬಿಜೆಪಿಯ ಕಾರ್ಯಕರ್ತ ಹರಿನಾಥ್‌ ಎಂಬವರ ಮೇಲೆ ಕಾಂಗ್ರೆಸ್‌ ಮುಖಂಡರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಮಾಜಿ ಮೇಯರ್‌ ಮಂಜುನಾಥ್‌, ಪುತ್ರ ಲಿತೇಶ್‌ ಎಂಬವರ ಮೇಲೆ ದೂರು ದಾಖಲು ಮಾಡಲಾಗಿದೆ. ಚುನಾವಣಾ ಪ್ರಚಾರಕ್ಕೆ ಹೋದಾಗ ಈ ಘಟನೆ ನಡೆದಿದೆ. ಕಾಂಗ್ರೆಸ್‌ ಮುಖಂಡರ ಗುಂಪು ಹರಿನಾಥ್‌ ಎಂಬುವವರಿಗೆ ಮನಬಂದಂತೆ ಥಳಿಸಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಹರಿನಾಥ್‌ ಗೆ ಎಂಟು ಹೊಲಿಗೆ ಹಾಕಲಾಗಿದೆ. ಹಾಗೂ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಲೆಕ್ಷನ್‌ಗೆ ಇನ್ನೇನು ಕೆಲವೇ ದಿನ ಇರುವುದರಿಂದ ಕೊನೆ ಹಂತದಲ್ಲಿ ಈ ರೀತಿಯ ಕೀಳು ಮಟ್ಟದ ರಾಜಕೀಯ ತೋರಿಸುವುದು ಸರಿಯಲ್ಲ ಎಂದು ಬಿಟಿಎಂ ಲೇಔಟ್‌ ಬಿಜೆಪಿ ಅಭ್ಯರ್ಥಿ ಶ್ರೀಧರ್‌ ರೆಡ್ಡಿ ಆರೋಪ ಮಾಡಿದ್ದಾರೆ, ಹಾಗೂ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಬಗ್ಗೆ ಘಟನೆ ಬಗ್ಗೆ ಖಂಡಿಸಿದ್ದಾರೆ. ಹಾಗೂ ಈ ಘಟನೆ ಕುರಿತು ಕೇಂದ್ರ ಸಚಿವ ಅಮಿತ್‌ ಶಾ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಹಾಗೆನೇ ಈ ಬಗ್ಗೆ ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಕ್ರಮ ಕೈಗೊಳ್ಳದಿದ್ದರೆ ಬಿಟಿಎಂ ಲೇಔಟ್‌, ಜಯನಗರ ಕ್ಷೇತ್ರದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರು ಈಗಾಗಲೇ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Karnataka SSLC Result 2023: ಇಂದು ಎಸ್​ಎಸ್​ಎಲ್​ಸಿ ಫಲಿತಾಂಶ! ಈ ರೀತಿ ಒಂದೇ ಕ್ಲಿಕ್‌ ಮೂಲಕ ರಿಸಲ್ಟ್‌ ಚೆಕ್‌ ಮಾಡಿ!

Leave A Reply

Your email address will not be published.