Home Breaking Entertainment News Kannada Aryan Khan-Nysa Devgan: ಶಾರುಖ್‌ ಪುತ್ರ ಆರ್ಯನ್‌ ಖಾನ್ ಕಾಜೊಲ್ ಮಗಳ ಜೊತೆ ಡೇಟಿಂಗ್! ಶಾರುಖ್-ಕಾಜೋಲ್...

Aryan Khan-Nysa Devgan: ಶಾರುಖ್‌ ಪುತ್ರ ಆರ್ಯನ್‌ ಖಾನ್ ಕಾಜೊಲ್ ಮಗಳ ಜೊತೆ ಡೇಟಿಂಗ್! ಶಾರುಖ್-ಕಾಜೋಲ್ ಪ್ರತಿಕ್ರಿಯೆ ಏನು?

Aryan Khan-Nysa Devgan
Source : DNA india

Hindu neighbor gifts plot of land

Hindu neighbour gifts land to Muslim journalist

Aryan Khan-Nysa Devgan: ಬಾಲಿವುಡ್‌ನ (Bollywood) ಸ್ಟಾರ್‌ ಕಲಾವಿದರ ಮಕ್ಕಳು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಇದೀಗ ಶಾರುಖ್‌ ಖಾನ್‌ (Shah Rukh Khan) ಮಗನಾದ ಆರ್ಯನ್‌ ಖಾನ್‌ (Aryan Khan) ಬಗ್ಗೆ ಸುದ್ದಿ ಸದ್ದು ಮಾಡುತ್ತಿದೆ. ಶಾರುಖ್‌ ಪುತ್ರ ಆರ್ಯನ್‌ ಮತ್ತು ಕಾಜೋಲ್‌ (Actress Kajol) ಪುತ್ರಿ ನ್ಯಾಸಾ ದೇವ್‌ಗನ್‌ (Nysa Devgan) ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರ ವೈರಲ್ ಆಗುತ್ತಿದೆ.

ಶಾರುಖ್- ಕಾಜೋಲ್ ನಂತೆ ಅವರು ಮಕ್ಕಳಾದ ಆರ್ಯನ್-ನ್ಯಾಸಾ (Aryan Khan-Nysa Devgan) ತುಂಬಾ ಆತ್ಮೀಯರು. ಇವರಿಬ್ಬರು ಪಾರ್ಟಿ ಮತ್ತು ಫಂಕ್ಷನ್‌ಗಳಿಗೆ ಒಟ್ಟಿಗೆ ಹೋಗುತ್ತಾರೆ. ಅನೇಕ ಬಾರಿ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಹಾಗಿರುವಾಗ ನೆಟ್ಟಿಗರು ಕುತೂಹಲಕಾರಿಯಾಗಿ ವಿಷಯ ಕುರಿತು ಚರ್ಚೆಗೆ ಒಳಗಾಗಿದ್ದಾರೆ.

2007 ರಲ್ಲಿ, ಶಾರುಖ್ ಮತ್ತು ಕಾಜೊಲ್ ‘ಕಾಫಿ ವಿತ್ ಕರಣ್‌ ಶೋ’ (coffee with Karan) ನಲ್ಲಿ ಭಾಗವಹಿಸಿದ್ದರು. ಆ ವೇಳೆ, ಕರಣ್ ಜೋಹರ್ (Karan Johar) ಆರ್ಯನ್ ಖಾನ್ ಮತ್ತು ನೈಸಾ ನಡುವಿನ ಸಂಬಂಧದ ಬಗ್ಗೆ ಬಾಲಿವುಡ್‌ನ ಬಾದ್‌ ಶಾ ಶಾರುಖ್ ಖಾನ್ ಅವರನ್ನು ಪ್ರಶ್ನಿಸಿದ್ದರು. ‘ 10 ವರ್ಷಗಳ ನಂತರ ಆರ್ಯನ್ ಖಾನ್ ಮತ್ತು ನೈಸಾ ದೇವಗನ್ ಪ್ರೀತಿಯಲ್ಲಿ ಬಿದ್ದರೆ, ಡೇಟಿಂಗ್ ಆರಂಭಿಸಿದರೆ ನಿಮ್ಮ ಪ್ರತಿಕ್ರಿಯೆ ಏನು?’ ಎಂದು ಕೇಳಿದ್ದರು. ಇದಕ್ಕೆ ಶಾರುಖ್ ಖಾನ್ ಉತ್ತರಿಸಿ, ‘ಆ ವಿಚಾರ ನನ್ನ ಮನಸ್ಸನ್ನು ನಡುಗಿಸುತ್ತದೆ. ಅಷ್ಟೇ ಅಲ್ಲ, ಕಾಜೋಲ್ ಗೆ ಸೋದರ ಸಂಬಂಧಿ ಭಯವಿದೆ” ಎಂದು ಶಾರುಖ್ ಖಾನ್ ನಗುತ್ತಾ ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಆ ವೇಳೆ ಕಾಜೋಲ್‌ ಗೂ ಪ್ರಶ್ನೆ ಎದುರಾಗಿದ್ದು, ಆರ್ಯನ್‌ ನ್ಯಾಸಾ ದೇವ್‌ಗನ್‌ ಜೊತೆ ಓಡಿ ಹೋಗಿ ಮದುವೆಯಾದರೆ ಅದಕ್ಕೆ ಕಾಜೋಲ್‌ ಪ್ರತಿಕ್ರಿಯೆ ಏನಾಗಿರುತ್ತದೆ? ಎಂದು ಕಾಜೋಲ್ ಗೆ ಕೇಳಲಾಯಿತು. ಅದಕ್ಕೆ ಉತ್ತರವಾಗಿ, “ದಿಲ್‌ವಾಲೆ ದುಲ್ಹೆ ಲೇ ಜಾಯೇಂಗೆ” ಎಂದು ಕಾಜೋಲ್‌ ಉತ್ತರಿಸಿದ್ದರು. ಅಂದರೆ, ‘ಮದುಮಗನನ್ನು ಹೃದಯವಂತಳು ಕರೆದುಕೊಂಡು ಹೋಗುತ್ತಾಳೆ’ ಎಂಬ ಅರ್ಥದಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದರು. ಈ ಜೋಕ್‌ ನನಗೆ ಅರ್ಥ ಆಗುತ್ತಿಲ್ಲ ಎಂದು ಹೇಳಿ ಶಾರುಖ್‌ ಜೋರಾಗಿ ನಕ್ಕಿದ್ದರು.

ಶಾರುಖ್ ಖಾನ್ ಮತ್ತು ಕಾಜೊಲ್ ಬಾಲಿವುಡ್ ಬೆಳ್ಳಿತೆರೆಯ ಸೂಪರ್ ಜೋಡಿ. ಇವರಿಬ್ಬರು ಜೊತೆಯಾಗಿ ನಟಿಸಿದ ಸಿನಿಮಾಗಳು ಸೂಪರ್ ಹಿಟ್ ಆದವು. ಶಾರುಖ್‌ ಮತ್ತು ಕಾಜೋಲ್‌ ಜೋಡಿಯಾಗಿ ನಟಿಸಿದ್ದ ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾ ಸಖತ್ ಸದ್ದು ಮಾಡಿತ್ತು. ಹೀಗೇ ಹಲವು ಸಿನಿಮಾ ಜೊತೆಯಾಗಿ ಮಾಡಿರುವ ಇವರು ಸಿನಿಮಾದಲ್ಲಿ ಮಾತ್ರವಲ್ಲದೆ, ರಿಯಲ್‌ ಲೈಫ್‌ನಲ್ಲಿಯೂ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಈಗ ಈ ಸ್ಟಾರ್ ಹೀರೋ, ಹೀರೋಯಿನ್ ಮಕ್ಕಳು ಕೂಡಾ ತುಂಬಾ ಕ್ಲೋಸ್ ಆಗಿದ್ದಾರೆ.

 

ಇದನ್ನು ಓದಿ: King Charles: ಈ ರಾಜನ ವಿಚಿತ್ರ ಅಭ್ಯಾಸಗಳನ್ನು ಕೇಳ್ತಾ ಇದ್ರೆ ನಿಮಗೆ ತಲೆ ತಿರುಗಬಹುದು!