Mangaluru: ಈ ಬಾರಿ ಚುನಾವಣಾ ಫಲಿತಾಂಶ ಸರಿಯಾಗಿ ತಿಳಿಸಿದ ಜ್ಯೋತಿಷಿಗಳಿಗೆ ಬಂಪರ್ ಬಹುಮಾನ ; ಬರೋಬ್ಬರಿ 10 ಲಕ್ಷ ರೂ. ಘೋಷಣೆ ಮಾಡಿದ ನರೇಂದ್ರ ನಾಯಕ್
10 lakhs cash prize announces to Astrologers to predict winning party in this election
Cash Prize to Astrologers :ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Election 2023) ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಮೇ 10 ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಮೇ 13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಹಿನ್ನೆಲೆ ಅಭ್ಯರ್ಥಿಗಳು ಪಕ್ಷದ ಗೆಲುವಿಗಾಗಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಇದೀಗ ಚುನಾವಣಾ ಫಲಿತಾಂಶದ ‘ನಿಖರ’ ಭವಿಷ್ಯ ನುಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಕೇಳಿ ಬಂದಿದೆ.
ಹೌದು, ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ (FIRA) ಅಧ್ಯಕ್ಷ ಮಂಗಳೂರಿನ (mangaluru) ಡಾ. ನರೇಂದ್ರ ನಾಯಕ್ (Narendra Nayak) ಬಂಪರ್ ಘೋಷಣೆಯೊಂದನ್ನು ಮಾಡಿದ್ದಾರೆ. ಈ ಬಾರಿಯ ಚುನಾವಣಾ ಫಲಿತಾಂಶದ ‘ನಿಖರ’ ಭವಿಷ್ಯ ನುಡಿದ ಜ್ಯೋತಿಷಿಗಳಿಗೆ 10 ಲಕ್ಷ ರೂಪಾಯಿ ಬಹುಮಾನ (Cash Prize to Astrologers) ನೀಡುವುದಾಗಿ ಹೇಳಿದ್ದಾರೆ.
ಕರ್ನಾಟಕದಲ್ಲಿ (Karnataka) ಈ ಬಾರಿ ಯಾವ ಪಕ್ಷ ಗೆಲುವು ಸಾಧಿಸಲಿದೆ? ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಷ್ಟು ಸೀಟು ಗೆಲ್ಲುತ್ತದೆ? ಪಕ್ಷೇತರರು ಗೆಲ್ಲುವ ಸ್ಥಾನವೆಷ್ಟು? ಎಷ್ಟು ಮಹಿಳಾ ಶಾಸಕರು ಆಯ್ಕೆ ಆಗುತ್ತಾರೆ? ಹೀಗೆ ಒಟ್ಟು 20 ಪ್ರಶ್ನೆಗಳನ್ನು ಮುಂದಿಟ್ಟಿದ್ದು, ಇದಕ್ಕೆ ಸರಿಯಾದ ಉತ್ತರ ನೀಡುವ ಜ್ಯೋತಿಷಿಗಳಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ ಎಂದು ನರೇಂದ್ರ ನಾಯಕ್ ಹೇಳಿದ್ದಾರೆ.
ಮಂಗಳೂರಿನಲ್ಲಿ ನೆಲೆಸಿರುವ ಖ್ಯಾತ ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ಹಲವು ವರ್ಷಗಳಿಂದ ಜ್ಯೋತಿಷಿಗಳಿಗೆ ಪ್ರಶ್ನೆ ಹಾಕುತ್ತಿದ್ದು, ಅದಕ್ಕೆ ಬಹುಮಾನದ ಘೋಷಣೆಯೂ ಮಾಡುತ್ತಿದ್ದರು. ಆದರೆ ಡಾ.ನಾಯಕ್ ಅವರಿಗೆ ಈ ತನಕ ಶೇ.40 ಸರಿ ಉತ್ತರವನ್ನಷ್ಟೇ ಒಬ್ಬ ಜ್ಯೋತಿಷಿ ಕಳುಹಿಸಿದ್ದರು ಎಂದು ಹೇಳಲಾಗಿದೆ. ಗರಿಷ್ಠ 450 ಪ್ರತಿಕ್ರಿಯೆ ಬಂದಿದ್ದರೂ ಉತ್ತರ ಸರಿ ಇರಲಿಲ್ಲ ಎನ್ನಲಾಗಿದೆ.
ಬ್ಯಾಂಕ್ ಸಾಲಕ್ಕೆ ಅಡವಿಟ್ಟ ಜಾಗವನ್ನು ಸಾಲ ಮರುಪಾವತಿಸಿ ಪಡೆಯಲು ಜ್ಯೋತಿಷಿ ಸಲಹೆಯಂತೆ ಮೊದಲ ಬಹುಮಾನದ ವಿಶ್ವಾಸದೊಂದಿಗೆ ತಂದೇ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತು ಡಾ.ನಾಯಕ್ ವೈಚಾರಿಕತೆಯತ್ತ ಮುಖ ಮಾಡಿದರು ಎನ್ನಲಾಗಿದೆ. 1976ರಲ್ಲಿ ದಕ್ಷಿಣ ಕನ್ನಡದಲ್ಲಿ ವಿಚಾರವಾದಿ ಸಂಘ ಸ್ಥಾಪಿಸಿದ್ದರು. ನಾಯಕ್ ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವ ಉತ್ತೇಜಿಸುತ್ತಿದ್ದು, 2009 ರಿಂದ ಈ ಸವಾಲನ್ನು ಆರಂಭಿಸಿದ್ದಾರೆ. ಜ್ಯೋತಿಷಿಗಳಿಂದ ಜನರು ವಂಚನೆಗೆ ಒಳಗಾಗಬಾರದು. ಜ್ಯೋತಿಷ್ಯವು ವಿಜ್ಞಾನವೆಂದು ಸಾಬೀತು ಮಾಡಿದರೆ ಅದನ್ನು ನಾನು ಒಪ್ಪಲು ತಯಾರಿದ್ದೇನೆ ಎಂದು ನಾಯಕ್ ಹೇಳುತ್ತಾರೆ.
ಇದನ್ನೂ ಓದಿ:Four Pregnant Sisters: ಒಂದೇ ಸಮಯದಲ್ಲಿ ಗರ್ಭಿಣಿಯರಾದ ನಾಲ್ವರು ಸಹೋದರಿಯರು! ಈ ಬಗ್ಗೆ ನಾಲ್ವರು ಏನಂತಾರೆ?