Indian Railway Recruitment 2023: 10th, ಪಿಯುಸಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿದೆ ಉದ್ಯೋಗವಕಾಶ! ಈ ಕೂಡಲೇ ಅರ್ಜಿ ಸಲ್ಲಿಸಿ

South Eastern Railway Recruitment 2023

South Eastern Railway Recruitment 2023: ಆಗ್ನೇಯ ರೈಲ್ವೆಯು (South Eastern Railway) ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ (South Eastern Railway Recruitment 2023). ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ. ಒಟ್ಟು 548 ಟ್ರೇಡ್‌ ಅಪ್ರೆಂಟಿಸ್‌ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಪೋಸ್ಟ್‌ಗಳು ಆಗ್ನೇಯ ರೈಲ್ವೇ, ಕೋಲ್ಕತ್ತಾ, ಪಶ್ಚಿಮ ಬಂಗಾಳದಲ್ಲಿದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಮೇ 6, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆನ್‌ಲೈನ್‌ನಲ್ಲಿ ಜೂನ್​ 3, 2023ರೊಳಗೆ ಸ್ವೀಕರಿಸಲಾಗುತ್ತದೆ.

ಅರ್ಜಿ ಶುಲ್ಕ: ಮಾನ್ಯ/ ಒಬಿಸಿ ಅಭ್ಯರ್ಥಿಗಳು- 100 ರೂ.
SC/ST/ ಮಾಜಿ ಸೈನಿಕ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಶುಲ್ಕವನ್ನು ಡೆಬಿಡ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್​ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.

ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕಡ್ಡಾಯವಾಗಿ ಶೇ.50ರಷ್ಟು ಅಂಕಗಳೊಂದಿಗೆ 10ನೇ ತರಗತಿ, 12ನೇ ತರಗತಿ & ಐಟಿಐ ಪಾಸಾಗಿರಬೇಕು.

ವಯೋಮಿತಿ: ಅಧಿಸೂಚನೆ ಪ್ರಕಾರ ಸಾಮಾನ್ಯ ಅಭ್ಯರ್ಥಿಗಳು- 15ರಿಂದ 24 ವರ್ಷ
SC/ST ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಈ ಲಿಂಕ್‌ ಕ್ಲಿಕ್‌ ಮಾಡಿ

https://www.apprenticeshipindia.gov.in/candidate-registration

ಇದನ್ನೂ ಓದಿ: ಮದುವೆಯ ಸಂದರ್ಭದಲ್ಲಿ ವಧು ವರನಿಗೆ ಮೆಹಂದಿ ಹಚ್ಚುವುದು ಯಾಕೆ?

 

Leave A Reply

Your email address will not be published.