Whirls In Head: ತಲೆಯಲ್ಲಿ ಎರಡು ಸುಳಿ ಇರಲು ವೈಜ್ಞಾನಿಕ ಕಾರಣವೇನು ಗೊತ್ತೇ?

Reason for whirls in head

Whirls In Head: ಒಂದಕ್ಕಿಂತ ಹೆಚ್ಚಿನ ಸುಳಿಯನ್ನು ಹೊಂದಿರುವವರು ನಮ್ಮ ಮನೆಯಲ್ಲೂ ನಮ್ಮ ಸುತ್ತಮುತ್ತಲೂ ಅಥವಾ ನಮ್ಮ ಸ್ನೇಹಿತರ ಗುಂಪಿನಲ್ಲಿ ಇರುತ್ತಾರೆ. ತಲೆಯ ಮಧ್ಯ ಭಾಗದಲ್ಲಿ ಎರಡು ಸುಳಿ ಇದ್ದರೆ ಸುಲಭವಾಗಿ ಇತರರಿಗೆ ಗುರುತಿಸಲು ಸಾಧ್ಯವಾಗುತ್ತದೆ. ಆದರೆ ಈ ಎರಡು ಸುಳಿ (Whirls In Head) ಕೆಲವರಲ್ಲಿ ಮಾತ್ರ ಗೋಚರಿಸುವ ಕಾರಣ ಹಲವರಿಗೆ ಹಲವಾರು ರೀತಿಯ ಪ್ರಶ್ನೆ ಇರುತ್ತವೆ. ಅದರಲ್ಲೂ ಗ್ರಾಮೀಣರು ಇಂತಹ ಸೂಕ್ಷ್ಮ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವುದು ಇದೆ.

 

ಈ ವಿಚಾರ ಕುರಿತು, ಎರಡು ಸುಳಿ ಇರುವವರು, ಎರಡು ಮದುವೆ ಆಗುತ್ತಾರೆ ಎಂದು ಹೇಳುತ್ತಾರೆ. ನಿಜಕ್ಕೂ ಎರಡು ಸುಳಿ ಇರುವವರು ಎರಡು ಮದುವೆ ಆಗುತ್ತಾರಾ? ಮೂಲ ಕಾರಣ ಏನು ಎನ್ನುವುದು ಬನ್ನಿ ನೋಡೋಣ.

ತಲೆಯಲ್ಲಿ ಎರಡು ಅಥವಾ ಮೂರು ಸುಳಿ ಇರುವುದರ ಬಗ್ಗೆ ಹೆಚ್ಚಾಗಿ ಹಳ್ಳಿಗಳಲ್ಲಿ ಚರ್ಚೆ ನಡೆಯುತ್ತಲೇ ಇರುತ್ತದೆ. ಈ ಬಗ್ಗೆ ಹಿರಿಯರು ಕೂಡ ತಮ್ಮ ಮಕ್ಕಳು ಅಥವಾ ಮೊಮ್ಮಕ್ಕಳಿಗೆ ಎರಡು ಸುಳಿ ಇದ್ದರೆ, ಏನಾದರೂ ಸಮಸ್ಯೆ ಎದುರಾಗುತ್ತಾ ಅಂತ ಆತಂಕಗೊಳ್ಳುತ್ತಾರೆ.

ಆದರೆ, NHGRI ಅಧ್ಯಯನ ಪ್ರಕಾರ, ವಿಶ್ವದ ಜನಸಂಖ್ಯೆಯಲ್ಲಿ ಶೇ 5ರಷ್ಟು ಮಂದಿ ತಲೆಯಲ್ಲಿ ಎರಡು ಸುಳಿಯನ್ನು ಹೊಂದಿದ್ದಾರೆ ಎಂದು ಬಹಿರಂಗ ಪಡಿಸಿದೆ.

ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಸುಳಿ ಹೊಂದಿರುವವರು ಉತ್ತಮರಾಗಿರುತ್ತಾರೆ. ನೇರ ನುಡಿ, ತಾಳ್ಮೆ, ಎಲ್ಲರೊಂದಿಗೆ ಬೆರೆಯುವುದು, ಕಷ್ಟಕ್ಕೆ ಸ್ಪಂದಿಸುವ ಗುಣವನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ.

ಮುಖ್ಯವಾಗಿ ವೈಜ್ಞಾನಿಕವಾಗಿ ಎರಡು ಸುಳಿ ಕೂದಲನ್ನು ರೂಪಿಸುವಲ್ಲಿ ಜೀನ್ಗಳು ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಪುರುಷರು ಮತ್ತು ಮಹಿಳೆಯರು ತಮ್ಮ ಕುಟುಂಬಸ್ಥರಿಂದ ಅನುವಂಶಿಕವಾಗಿ ಇದನ್ನು ಪಡೆದಿರುತ್ತಾರೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಎರಡು ಸುಳಿ ಹೊಂದಿರುವವರು ಬಹಳ ಅಪರೂಪ. ಆದರೆ ಅದರಲ್ಲಿ ಅಸ್ವಾಭಾವಿಕ ಏನೂ ಇಲ್ಲ. ಅದೊಂದು ದೇಹದಲ್ಲಿನ ವಿಶಿಷ್ಟ ಲಕ್ಷಣ. ಕೆಲ ಮಂದಿ ತಲೆಯಲ್ಲಿ ಎರಡು ಸುಳಿ ಹೊಂದಿರುವವರು ಎರಡು ಮದುವೆ ಆಗುತ್ತಾರೆ. ಇಲ್ಲವಾದರೆ ಮದುವೆ ನಿಶ್ಚಯವಾಗುವ ಸಮಯದಲ್ಲಾದರೂ ಮುರಿದು ಎರಡನೇ ಬಾರಿ ಮದುವೆ ನಿಶ್ಚಯವಾಗಬಹುದು ಎಂದು ನಂಬುತ್ತಾರೆ. ಆದರೆ ಈ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಲಭ್ಯವಿಲ್ಲ.

ಇನ್ನು ಎರಡು ಸುಳಿ ಮತ್ತು ಮೂರು ಸುಳಿಯಿಂದ ಯಾವುದೇ ರೀತಿಯ ತೊಂದರೆಗಳು ಆ ವ್ಯಕ್ತಿಗೆ ಆಗೋದಿಲ್ಲ, ಎರಡು ಸುಳಿಯನ್ನ ಹೊಂದಿದ್ದರೆ ಯಾವುದೇ ಕಾರಣಕ್ಕೂ ಸಮಸ್ಯೆಗಳು ಬರುವುದಿಲ್ಲ. ಇದು ಒಂದು ತಪ್ಪು ಕಲ್ಪನೆಯಾಗಿದೆ ಇದನ್ನ ರೂಢಿಸಿಕೊಂಡು ಬಂದಿರುವುದರಿಂದ ಮಾತ್ರ ಹಿರಿಯರ ಒಂದು ಕಲ್ಪನೆಯಾಗಿದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಎಫ್‌ಡಿ ಅಥವಾ ಎನ್‌ಎಸ್‌ಸಿ ಕುರಿತ ಸಂಪೂರ್ಣ ವಿವರ

Leave A Reply

Your email address will not be published.