Mobile Recharge: ರಾಂಗ್ ನಂಬರ್ ಗೆ ರಿಚಾರ್ಜ್ ಮಾಡಿದರೆ ಚಿಂತೆ ಬಿಡಿ! ಈ ಟಿಪ್ಸ್ ಫಾಲೋ ಮಾಡಿದಲ್ಲಿ ರಿಚಾರ್ಜ್ ಹಣ ವಾಪಾಸ್ ನಿಮ್ಮ ಖಾತೆ ಸೇರಲಿದೆ!
Do not worry if you mobile recharge to the wrong number
Mobile recharge: ಒಂದು ಕಾಲದಲ್ಲಿ ಇಂಟರ್ನೆಟ್ (Data Pack) ತುಂಬಾ ದುಬಾರಿಯಾಗಿತ್ತು. ಅದಲ್ಲದೆ ಮೊಬೈಲ್ ರೀಚಾರ್ಜ್‌ಗಾಗಿ (Mobile Recharge) ಅಂಗಡಿಗಳಿಗೆ ಹೋಗಿ ಟಾಪ್ ಅಪ್ (Recharge Top Up) ಖರೀದಿಸುತ್ತಿದ್ದರು. ಆದರೆ ಕಾಲ ಬದಲಾಗಿದೆ. ತಂತ್ರಜ್ಞಾನ (Technology) ಮಾರುಕಟ್ಟೆ ಸಾಕಷ್ಟು ಅಭಿವೃದ್ಧಿ ಕಂಡಿದೆ. ಇಂದು ಮನೆಯಲ್ಲಿ ಕುಳಿತಲ್ಲಿಯೇ ರೀಚಾರ್ಜ್ ಮಾಡುವ ವ್ಯವಸ್ಥೆಗಳಿದೆ. PhonePe, Google Pay, Paytm, ಮುಂತಾದ ಹಲವಾರು ಅಪ್ಲಿಕೇಶನ್‌ಗಳನ್ನು ಬಳಸಿ ಕ್ಷಣಾರ್ಧದಲ್ಲಿ ರೀಚಾರ್ಚ್ ಮಾಡಿಕೊಳ್ಳಬಹುದು.
ಆದರೆ ಈ ರೀತಿ ಆಪ್ ಗಳ ಮೂಲಕ ನಮ್ಮ ಸಿಮ್ ಕಾರ್ಡ್ ಅಥವಾ ಆತ್ಮೀಯರು, ಸಂಬಂಧಿಕರ ಮೊಬೈಲ್ ನಂಬರ್ ಗೆ ರಿಚಾರ್ಜ್ ಮಾಡುವಾಗ ಅಚಾನಕ್ಕಾಗಿ ನಂಬರ್ಗಳ ಮಿಸ್ಟೇಕ್ (Recharged to the wrong
number) ಆಗಿ ಬೇರೊಂದು ನಂಬರಿಗೆ ರಿಚಾರ್ಜ್ ಮಾಡಿ ಬಿಟ್ಟಿರುತ್ತೇವೆ. ಅದನ್ನು ವಾಪಸ್ಸು ಪಡೆಯುವುದು ಹೇಗೆ ಎನ್ನುವುದು ಇಲ್ಲಿ ತಿಳಿಸಲಾಗಿದೆ.
ಅಕಸ್ಮಾತ್ ನೀವು ತಪ್ಪಾದ ರೀಚಾರ್ಜ್ ಬಗ್ಗೆ ಸಂಪೂರ್ಣ ವಿವರಗಳೊಂದಿಗೆ ಸಂಬಂಧಿಸಿದ ಕಂಪನಿಗೆ ಇಮೇಲ್ ಮಾಡಬಹುದು. ಈ ರೀತಿಯಲ್ಲಿ ನೀವು ನಿಮ್ಮ ಹಣವನ್ನು ಮರಳಿ ಪಡೆಯಬಹುದು.
ಅದೇನೆಂದರೆ ನೀವು ಬಳಸುತ್ತಿರುವ ಸಿಮ್ ಕಾರ್ಡ್ ನ ಟೆಲಿಕಾಂ ಕಸ್ಟಮರ್ ನಂಬರ್ ಗೆ ಕರೆ ಮಾಡಿ ನಿಮಗಾಗಿರುವ ಎಲ್ಲ ತೊಂದರೆಗಳನ್ನು ಹೇಳಿ ಅವರ ಸಹಾಯ ಪಡೆಯಬೇಕು ಮತ್ತು ನೀವು ಯಾವ ನಂಬರಿಗೆ ರೀಚಾರ್ಜ್ ಮಾಡಿರುತ್ತಿರೋ ಆ ಮೊಬೈಲ್ ನೆಟ್ವರ್ಕ್ ಕಂಪನಿಯ ಇ-ಮೇಲ್ ಅಡ್ರೆಸ್ಸಿಗೆ ನಿಮಗಾದ ತೊಂದರೆ ಕುರಿತಾಗಿ ದೂರು ಸಲ್ಲಿಸಬೇಕು.
ಭಾರತದಲ್ಲಿ ಹೆಚ್ಚಿನ ಜನರು ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ. ಈ ಟೆಲಿಕಾಂ ಕಂಪನಿ ಇಮೇಲ್ ಐಡಿಯನ್ನು ನೀವು ಸುಲಭವಾಗಿ ಪಡೆಯಬಹುದು. ಹಾಗಾಗಿ ಈ ಮೇಲ್ ಮೂಲಕ ಅವರಿಗೆ ಸ್ಪಷ್ಟ ಮಾಹಿತಿ ನೀಡಿ ನಿಮ್ಮ ಹಣವನ್ನು ನೀವು ಮರಳಿ ಪಡೆಯಬಹುದು
ಈ ಮೇಲ್ ಐಡಿ ಈ ಕೆಳಗಿದೆ :
VI> customercare@vodafoneidea.com
Airtel> airtelpresence@in.airtel.com
JIO> care@jio.com
ದೂರನಲ್ಲಿ ತಪ್ಪದೇ ನೀವು ರಿಚಾರ್ಜ್ ಮಾಡಿದ ದಿನಾಂಕ, ಸಮಯ, ರಿಚಾರ್ಜ್ ಮಾಡಿದ ಮೊತ್ತ ನೀವು ತಪ್ಪಾಗಿ ಯಾವ ನಂಬರ್ ಗೆ ರಿಚಾರ್ಜ್ ಮಾಡಿದ್ದೀರಾ ಹಾಗೂ ನೀವು ಯಾವ ನಂಬರ್ ಗೆ ರೀಚಾರ್ಜ್ ಮಾಡಬೇಕಾಗಿತ್ತು ಈ ಎಲ್ಲಾ ವಿವರಗಳನ್ನು ತಿಳಿಸಬೇಕು. ನೀವು ಎಷ್ಟು ಬೇಗ ಈ ರೀತಿ ದೂರು ದಾಖಲಿಸುತ್ತಿರೋ ಅಷ್ಟು ಬೇಗ ನಿಮಗೆ ಹಣ ವಾಪಸ್ ಬರುವ ಸಾಧ್ಯತೆ ಇರುತ್ತದೆ. ಬಹಳ ವಿಳಂಬ ಆದ ಸಮಯದಲ್ಲಿ ನಿಮಗೆ ಹಣ ವಾಪಸ್ ಬರುವ ಗ್ಯಾರಂಟಿ ಇರುವುದಿಲ್ಲ.
ಒಂದು ವೇಳೆ ನೀವು ಕರೆ ಮಾಡುವ ಮೂಲಕ ಅಥವಾ ಇಮೇಲ್ ಮಾಡುವ ಮೂಲಕ ದೂರು ದಾಖಲಿಸಿದರೆ ಅದಕ್ಕೆ ರೆಸ್ಪಾನ್ಸ್ ಸಿಗುವುದಿಲ್ಲ ಎನ್ನುವ ಅನುಮಾನ ಇದ್ದರೆ ಗ್ರಾಹಕರ ಸೇವಾ ಪೋರ್ಟಲ್ ಅಪ್ಲಿಕೇಶನ್ ಡೌಪ್ಲೋಡ್ ಮಾಡಿಕೊಂಡು ಮೂಲಕವಾಗಿ ಕೂಡ ದೂರು ಸಲ್ಲಿಸಬಹುದು.
ಮುಖ್ಯವಾದ ಅಂಶ ಏನೆಂದರೆ, ನೀವು ನೀಡಲಾಗಿರುವ ಮೊಬೈಲ್ ಸಂಖ್ಯೆಯಲ್ಲಿ 1 ಅಥವಾ 2 ಸಂಖ್ಯೆ ವ್ಯತ್ಯಾಸವಾಗಿ ನೀವು ರಿಚಾರ್ಜ್ ಮಾಡಿದ್ದರೆ ಕಂಪನಿಗಳು ನಿಮ್ಮ ದೂರು ಪ್ರಾಮಾಣಿಕವಾಗಿದೆ ಎಂದುಪರಿಗಣಿಸಿ ನಿಮ್ಮ ರಿಚಾರ್ಜ್ ಮೊತ್ತವನ್ನು ಹಿಂತಿರುಗಿಸಬಹುದು.
ಆದರೆ ಸಂಪೂರ್ಣ ಸಂಖ್ಯೆಯು ವಿಭಿನ್ನವಾಗಿದ್ದರೆ, ಈ ಪರಿಸ್ಥಿತಿಯಲ್ಲಿ ಹಣವನ್ನು ನೀಡಲು ಕಂಪನಿಯು ಕೂಡ ಹಿಂಜರಿಯುತ್ತದೆ ಏಕೆಂದರೆ, ಅನೇಕ ಜನರು ಉದ್ದೇಶಪೂರ್ವಕವಾಗಿ ಕಂಪನಿಗೆ ತೊಂದರೆ ನೀಡುತ್ತಾರೆ ಎಂದು ತಿಳಿದು ಹಿಂಜರಿಯುತ್ತಾರೆ.
ಒಟ್ಟಿನಲ್ಲಿ ಯಾವಾಗಲೂ ಕೂಡ ರಿಚಾರ್ಜ್ ಮಾಡುವಾಗ ತಮ್ಮ ನಂಬರ್ ಗಳನ್ನು ಎರಡು ಬಾರಿ ಪರಿಶೀಲಿಸಿ ನಂತರ ರಿಚಾರ್ಜ್ ಮಾಡಿದರೆ ಯಾವ ತೊಂದರೆಯೂ ಇರುವುದಿಲ್ಲ.
ಇದನ್ನೂ ಓದಿ: ಇನ್ನು ರೈಲಿನಲ್ಲಿ ಸಾಕುಪ್ರಾಣಿಗಳಿಗೂ ಟಿಕೆಟ್! ಬಂದಿದೆ ಹೊಸ ನಿಯಮ!