A girls romance on a moving bike : ಚಲಿಸುವ ಬೈಕ್ ಮೇಲೆ ಒಬ್ಬರನ್ನೊಬ್ಬರು ಅಪ್ಪಿಕೊಂಡು ಲಿಪ್ಲಾಕ್ ಮಾಡಿದ ಹುಡುಗಿಯರು! ವೈರಲ್ ಆಯ್ತು ರೊಮ್ಯಾನ್ಸ್ ವಿಡಿಯೋ!
A girls romance on a moving bike
A girls romance on a moving bike: ಇತ್ತೀಚಿನ ದಿನಗಳಲ್ಲಿ ಸ್ಟಂಟ್(Stant) ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ವಿಚಿತ್ರ ಎನ್ನುವಂತೆ ಹುಡುಗ ಹುಡುಗಿ ರೊಮ್ಯಾನ್ಸ್ ಮಾಡುತ್ತ, ಎದುರು ಬದುರು ಕುಳಿತು ತಬ್ಬಿ ಮುತ್ತಿಕ್ಕುತ್ತಾ, ಅಮಲಿನಲ್ಲಿ ಬೈಕ್ ಓಡಿಸೋದನ್ನು ನಾವು ಕೇಳಿ, ನೋಡಿ ಅಚ್ಚರಿ ಪಟ್ಟಿದ್ದೆವು. ಆದರೆ ಇಲ್ಲೊಂದೆಡೆ ಬೈಕ್ ಮೇಲೆ ಕುಳಿತ ಇಬ್ಬರು ಹುಡುಗಿಯರು ಒಬ್ಬರನ್ನೊಬ್ಬರು ತಬ್ಬಿಕೊಂಡು, ತುಟಿಗೆ ತುಟಿಯಿಟ್ಟು ಚುಂಬಿಸುತ್ತಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ( A girls romance on a moving bike) ಭಾರೀ ವೈರಲ್ ಆಗುತ್ತಿದೆ.
ಹೌದು, ಸಲಿಂಗಿ(lesbianl ಜೋಡಿಗಳ ವಿವಾಹದ ಬಗ್ಗೆ ಸುಪ್ರೀಂಕೋರ್ಟ್(supreme court) ನಲ್ಲಿ ಬಹುದಿನಗಳಿಂದ ನಿರಂತರ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಚಲಿಸುವ ಬೈಕ್(Baik) ಮೇಲೆ ಕುಳಿತು ಬಾಲಕಿಯರಿಬ್ಬರು ಲಿಪ್ ಕಿಸ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ. ಜಾರ್ಖಂಡ್ನ ಸ್ಟಾರ್ಸ್(Jharkhand Stars)ಎಂಬ ಇನ್ಸ್ಟಾಗ್ರಾಮ್(Instagram) ಖಾತೆಯಿಂದ ಹಂಚಿಕೊಂಡ ಈ ಬೈಕ್ ಸ್ಟಂಟ್ ಕ್ಲಿಪ್ ನೋಡಿ ನೆಟ್ಟಿಗರೆಲ್ಲರೂ ಶಾಕ್ ಆಗಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಪ್ರಸ್ತುತ ಡಿಲೀಟ್ ಆಗಿರುವ ವಿಡಿಯೋದಲ್ಲಿ ಹೆಲ್ಮೆಟ್ ಧರಿಸದ ಈ ಹುಡುಗಿಯರು ತಮಿಳುನಾಡು(Tamilunad) ನೋಂದಣಿಯ ಸ್ಲೆಂಡರ್ ಬೈಕ್(Spender Bike) ಮೇಲೆ ಕುಳಿತು ಪರಸ್ಪರ ಕೈಗೆ ಹೊಡೆದುಕೊಂಡು ಹೈಫೈ ಮಾಡಿ ಮೊದಲು ಒಬ್ಬರನ್ನೊಬ್ಬರು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ. ನಂತರ ಇಬ್ಬರು ಮುತ್ತಿಟ್ಟುಕೊಳ್ಳುತ್ತಾರೆ. ಈ ವೇಳೆ ಅವರಿಬ್ಬರು ಬೈಕ್ ಹ್ಯಾಂಡ್ ಹಿಡಿಯದೆ ಬ್ಯಾಲೆನ್ಸ್ ಮಾಡುತ್ತಾ ಬೈಕ್ ಚಲಾಯಿಸುತ್ತಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪರಿಚಿತ ಯುವತಿಯರ ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋ ತಮಿಳುನಾಡಿನದ್ದು ಎನ್ನಲಾಗುತ್ತಿದ್ದು, ಈ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನು ಒಂದೇ ಲಿಂಗದ ಜೋಡಿಯ ಪ್ರೀತಿಯ ಸಾರ್ವಜನಿಕ ಪ್ರದರ್ಶನ (public display of affection of a same-sex couple) ಎನ್ನಲಾಗುತ್ತಿದೆ. ಈ ವೀಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಅಂದಹಾಗೆ ಕಳೆದ ವಾರವಷ್ಟೇ, ಛತ್ತೀಸ್ಗಢದ ಬಿಲಾಸ್ಪುರದಲ್ಲಿ, ವ್ಯಕ್ತಿಯೊಬ್ಬ ಸ್ಕೂಟಿಯಲ್ಲಿ ತನ್ನ ಗೆಳತಿಯೊಂದಿಗೆ ಇಂತಹ ಅಪಾಯಕಾರಿ ಸಾಹಸ ಮಾಡಿರುವ ವಿಡಿಯೋ ಕೂಡಾ ವೈರಲ್ ಆಗಿತ್ತು.