Divya datta: ನೆದರ್ಲೆಂಡ್​ನ ರೆಡ್​ಲೈಟ್​ ಏರಿಯಾದಲ್ಲಿ ಸೆಕ್ಕಿಬಿದ್ದ ಬಾಲಿವುಡ್ ನಟಿ! ರೋಚಕ ಅನುಭವ ತೆರಿದಿಟ್ಟ ಈಕೆ ಹೇಳಿದ್ದೇನು?

Divya Datta caught in the red light area of ​​the Netherlands

Divya Datta: ಮಾಡೆಲಿಂಗ್(Modeling) ಲೋಕದಿಂದ ನಟನೆಯ ಜಗತ್ತಿಗೆ ಬಂದು ಬಾಲಿವುಡ್(Bollywood) ನಲ್ಲಿ ಮಿಂಚುತ್ತಿರೋ ನಟಿ ದಾವ್ಯಾ ದತ್ತ(Divya Datta) ಅವರು ಸಿನಿ ಲೋಕದಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿರುವ ಈ ದಿವ್ಯಾ ದತ್ತಾ ಹಿಂದೊಮ್ಮೆ ಗೊತ್ತಿಲ್ಲದೇ ರೆಡ್​ಲೈಟ್​ ಏರಿಯಾದಲ್ಲಿ ಸಿಕ್ಕಿಬಿದ್ದಿದ್ದರು. ಅಂದು ನಡೆದದ್ದೇನು ಅನ್ನೋದರ ಕುರಿತು ದಿವ್ಯಾ ಅವರ ಮಾತನಾಡಿ ತಮ್ಮ ರೋಚಕ ಅನುಭವಗಳನ್ನು ತೆರೆದಿಟ್ಟಿದ್ದಾರೆ.

 

ಹೌದು, ಸಲ್ಮಾನ್ ಖಾನ್(Salman Khan), ಅಮಿತಾಭ್​ ಬಚ್ಚನ್(Amitabh Bhachan), ಇರ್ಫಾನ್ ಖಾನ್(Irfan Khan) , ರಿಷಿ ಕಪೂರ್(Rishi Kapur) ಮುಂತಾದ ಶ್ರೇಷ್ಠ ನಟರೊಂದಿಗೆ ತೆರೆ ಹಂಚಿಕೊಂಡಿರುವ ನಟಿ ದಿವ್ಯಾ ದತ್ತ ಅವರು ಹಿಂದೊಮ್ಮೆ ರೆಡ್​ಲೈಟ್​ ಏರಿಯಾದಲ್ಲಿ ಸಿಕ್ಕಿಬಿದ್ದು ಭಾರೀ ಸುದ್ದಿಯಾಗಿದ್ರು. ಅದು ಕೂಡ ನೆದರ್ಲೆಂಡ್​ನ(Netherland) ರೆಡ್​ಲೈಟ್​(Red Light Aria) ಏರಿಯಾದಲ್ಲಿ! ಸದ್ಯ ಇದೀಗ ದಿವ್ಯ ಅವರೇ ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ತೊಂದರೆಗಳ ಬಗ್ಗೆ ಹೇಳಿದ್ದು, ಅದರಲ್ಲಿ ಒಂದಾಗಿರೋ ಈ ವಿಚಾರ ತುಂಬಾ ಆಘಾತಕಾರಿಯಾಗಿದೆ. ಆ ಘಟನೆಯನ್ನು ನೆನೆಸಿಕೊಂಡರೆ ದಿವ್ಯಾ ಅವರಿಗೆ ಇನ್ನೂ ಭಯವಾಗುತ್ತದೆ ಎಂದಿದ್ದಾರೆ.

ಅಂದಹಾಗೆ ಅದು 2005ರ ಸಮಯ. ಆಗ ನೆದರ್ಲೆಂಡ್​ನಲ್ಲಿ ಇದ್ದ ದಿವ್ಯಾ, ಆಮ್ಸ್ಟರ್‌ಡ್ಯಾಮ್‌ನಲ್ಲಿ ನಡೆದ IIFA ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಕಾರ್ಯಕ್ರಮ ಮುಗಿದ ಮೇಲೆ ತನ್ನ ಅಮ್ಮನ ಜೊತೆ ಊರು ನೋಡಲು ಹೋಗಿದ್ದರಂತೆ. ಆಗ ಅರಿವಿಲ್ಲದೇ ಅವರು ರೆಡ್​ ಲೈಟ್​ ಏರಿಯಾಗೆ (Red Light Area)ಹೋಗಿಬಿಟ್ಟಿದ್ದಾರೆ. ಇದು ಇಂಥ ಏರಿಯಾ ಎಂದು ಅವರಿಗೂ ಗೊತ್ತಿರಲಿಲ್ಲ. ರಸ್ತೆ ಚೆನ್ನಾಗಿದ್ದ ಕಾರಣ, ರಸ್ತೆಯ ಮೇಲೆ ನಿಂತು ತಮ್ಮ ತಾಯಿಯೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಲು ಪ್ರಾರಂಭಿಸಿದ್ದಾರೆ. ಆದರೆ ಆ ಪ್ರದೇಶದಲ್ಲಿ ಫೋಟೋಗ್ರಫಿಯನ್ನು (Photography) ನಿಷೇಧಿಸಲಾಗಿತ್ತು. ರೆಡ್​ಲೈಟ್​ ಏರಿಯಾದಲ್ಲಿ ಫೋಟೋಗ್ರಫಿ ನಿಷೇಧ ಎಂದು ತಿಳಿದಿದ್ದರೂ ತಾವು ಇರುವುದು ಆ ಪ್ರದೇಶದಲ್ಲಿ ಎಂದು ಅರಿಯದೇ ಫೋಟೋ ಕ್ಲಿಕ್ಕಿಸಿಕೊಳ್ಳಲು ಪ್ರಾರಂಭಿಸಿದ್ದರು ದಿವ್ಯಾ!

ಅಷ್ಟೇ, ಕ್ಷಣ ಮಾತ್ರದಲ್ಲಿ ಅಲ್ಲಿದ್ದ ವೇಶ್ಯೆಯರಿಂದ (Prostitution) ಅವರನ್ನು ಸುತ್ತುವರೆದರಂತೆ. ಏನಾಗುತ್ತಿದೆ ಎಂದು ತಿಳಿಯದ ದಿವ್ಯಾ ಜನರನ್ನು ನೋಡಿ ಸುಸ್ತಾಗಿ ಓಡಲು ಪ್ರಾರಂಭಿಸಿದರು. ಆದರೆ ಅವರ ಹಿಂದೆ ವೇಶ್ಯೆಯರು ಓಡಲು ಪ್ರಾರಂಭಿಸಿದರು. ದಿವ್ಯಾ ಮತ್ತು ಆಕೆಯ ತಾಯಿ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡರಂತೆ. ಇದನ್ನು ನೆನಪಿಸಿಕೊಂಡು ಈಗಲೂ ನಡುಗುತ್ತಾರೆ ದಿವ್ಯಾ.

ಇನ್ನು 46 ವರ್ಷಗಳ ದಿವ್ಯಾ ಅಂದು ಮಾಡೆಲಿಂಗ್ ಲೋಕದಿಂದ ನಟನೆಯ ಜಗತ್ತಿಗೆ ಬಂದು 1994 ರಲ್ಲಿ, ಅವರು ಇಷ್ಕ್ ಮೇ ಜೀನಾ ಇಷ್ಕ್ ಮೇ ಮರ್ನಾ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು ಮತ್ತು ನಂತರ 1995 ರಲ್ಲಿ ಅವರು ಸುರಕ್ಷಾ ಚಿತ್ರದಲ್ಲಿ ಕಾಣಿಸಿಕೊಂಡರು. ಸುನಿಲ್ ಶೆಟ್ಟಿ, ಆದಿತ್ಯ ಪಾಂಚೋಲಿ ಮತ್ತು ಸೈಫ್ ಅಲಿ ಖಾನ್ (Saif Ali Khan) ನಟಿಸಿದ ಈ ಚಿತ್ರದಲ್ಲಿ ಅವರು ಬಿಂದಿಯಾ ಪಾತ್ರವನ್ನು ನಿರ್ವಹಿಸಿದ್ದಾರೆ. 46 ವರ್ಷ ವಯಸ್ಸಿನ ದಿವ್ಯಾ ದತ್ತಾ ಫನ್ನೆ ಖಾನ್, ಇದಾಸಾ, ಬ್ಲ್ಯಾಕ್‌ಮೇಲ್, ಬದ್ಲಾಪುರ್, ಭಾಗ್ ಮಿಲ್ಕಾ ಭಾಗ್, ಸ್ಪೆಷಲ್ 26, ಹೀರೋಯಿನ್, ದೆಹಲಿ 6, ಉಮ್ರಾವ್ ಜಾನ್‌ನಂತಹ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ಶಾರುಖ್ ಖಾನ್ ಅವರ ವೀರ್ ಜರಾ, ರಣವೀರ್ ಸಿಂಗ್ ಅವರ ಲೂಟೆರಾ, ಇರ್ಫಾನ್ ಖಾನ್ ಅವರ ಬ್ಲಾಕ್ ಮೇಲ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇತ್ತೀಚೆಗೆ ಅವರು ಕಂಗನಾ ರಣಾವತ್ ಅವರ ಢಾಕಡ್ ಚಿತ್ರದಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದಾದ್ಲಾನಿ ಕೋಟಿ ಲೆಕ್ಕದ ಸಂಬಳ ಕೇಳಿದ್ರೆ ನೀವ್ ಪಕ್ಕಾ ಶಾಕ್, ಅಷ್ಟಕ್ಕೂ ಆಕೆ ಮಾಡೋ ಕೆಲ್ಸ ಏನು ಗೊತ್ತಾ ?

Leave A Reply

Your email address will not be published.